ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಾಗಾರ ಯಶಸ್ವಿ

ತೋಟಗಾರಿಕೆ ಬೆಳೆಗಳಿಗೆ ತಗಲುವ ರೋಗ, ಕೀಟಗಳ ಹತೋಟಿ, ನೀರು, ಪೋಷಕಾಂಶಗಳ ನಿರ್ವಹಣೆ

ಕೊಪ್ಪಳ ಡಿ. : ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ಜರುಗಿದ್ದು, ವಿವಿಧ ವಿಭಾಗದ ವಿಜ್ಞಾನಿಗಳು ಹಿಂಗಾರು ಹಂಗಾಮಿನಲ್ಲಿ ಅನೇಕ ತೋಟಗಾರಿಕೆ ಬೆಳೆಗಳಿಗೆ ತಗಲುವ ರೋಗ, ಕೀಟಗಳ ಹತೋಟಿ, ನೀರು, ಪೋಷಕಾಂಶಗಳ ನಿರ್ವಹಣೆ ಕುರಿತು ಸಮಗ್ರ ಮಾಹಿತಿಯನ್ನು ಕಾರ್ಯಾಗಾರದಲ್ಲಿ ನೀಡಲಾಯಿತು.
ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯ ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಮುನಿರಾಬಾದ್ ಸಂಯುಕ್ತಾಶ್ರಯದಲ್ಲಿ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ತೋಟಗಾರಿಕೆ ಅಧಿಕಾರಿಗಳಿಗೆ ಇತ್ತೀಚೆಗೆ (ಡಿ.20) ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಗಾರದಲ್ಲಿ ಮೂರು ಜಿಲ್ಲೆಗಳ ಅಧಿಕಾರಿಗಳು ತಾವು ಕ್ಷೇತ್ರ ಮಟ್ಟದಲ್ಲಿ ವಿವಿಧ ತೋಟಗಾರಿಕೆ ಬೆಳೆಗಳಿಗೆ ತಗಲುವ ರೋಗ/ ಕೀಟಗಳು, ರೈತರ ಸಮಸ್ಯೆಗಳು ಹಾಗೂ ಹವಾಮಾನ ಬದಲಾವಣೆಯಿಂದಾಗಿ ಬೆಳೆಗಳಲ್ಲಾಗುವ ಪರಿಣಾಮಗಳ ಬಗ್ಗೆ ವಿಷಯವನ್ನು ಮಂಡಿಸಿದರು.  ಅದರಂತೆ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ವಿವಿಧ ವಿಭಾಗದ ವಿಜ್ಞಾನಿಗಳು ಹಿಂಗಾರು ಹಂಗಾಮಿನಲ್ಲಿ ಅನೇಕ ತೋಟಗಾರಿಕೆ ಬೆಳೆಗಳಿಗೆ ತಗಲುವ ರೋಗ/ ಕೀಟಗಳ ಹತೋಟಿ, ನೀರು/ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಿವಿಧ ಬೆಳೆಗಳ ಬಗ್ಗೆ ಚರ್ಚಿಸಲಾಯಿತು.  ಬೆಳೆಗಳ ನಿರ್ವಹಣೆ ಹಾಗೂ ವಿವಿಧ ಬೆಳೆಗಳಿಗೆ ಬರುವ ರೋಗಗಳ ಹತೋಟಿ ಕ್ರಮಗಳ ಮಾಹಿತಿ ಇಂತಿದೆ.
ಮಾವು;
ಪ್ರಸ್ತುತ ಮಾವಿನಲ್ಲಿ ಇನ್ನೂ ಹೂ ಕಚ್ಚಿಲ್ಲ, ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಇನ್ನೂ ಮಾವಿನಲ್ಲಿ ಹೂ ಕಚ್ಚಿಲ್ಲ. ಹೂ ಬಿಟ್ಟ ಕೆಲವು ಕಡೆ ಬೂದಿ ರೋಗ, ಚಿಬ್ಬು ರೋಗ ಕಾಣಿಸಿಕೊಂಡಿದೆ. ಮಾವು ಬೆಳೆಗಾರರು ನೀರು ಕೊಡುವುದನ್ನು ನಿಲ್ಲಿಸಿ ಮಾವು ಸ್ಪೇಷಲ್ ಜೊತೆಗೆ ಹೆಕ್ಸಾಕೋನಾಜೋಲ 1 ಮೀ.ಲೀ. ಮತ್ತು ಥಯೋಫನೈಟ್ ಮಿಥೇಲ್-ಪುಡಿಯನ್ನು 1 ಗ್ರಾಂ. 1 ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು. ಹೂ /ಕಾಯಿ ಉದುರದಂತೆ ಪ್ಲಾನೋಫಿಕ್ಸ್ ಎನ್ನುವ ಸಸ್ಯ ಪ್ರಚೋದಕವನ್ನು  10 ಲೀ. ನೀರಿನಲ್ಲಿ 4 ಮೀ.ಲೀ. ಬೆರೆಸಿ ಸಿಂಪಡಿಸಬೇಕು ಎಂದು ತಿಳಿಸಿದರು.
ಸೀಬೆ;
ಸೀಬೆಯಲ್ಲಿ ಸೋರಗು ರೋಗ / ಜಂತು ಹುಳು ಹಾಗೂ ಹಿಟ್ಟು ತಿಗಣೆ ಕಾಣಿಸಿಕೊಂಡಿದೆ. ಇವುಗಳ ಹತೋಟಿ ಬಗ್ಗೆ ಡಾ|| ರವಿಕುಮಾರ ಹತೋಟಿ ಕ್ರಮಗಳನ್ನು ತಿಳಿಸಿರುತ್ತಾರೆ.
ಜಂತು ಹುಳು / ಸೋರಗು ರೋಗ;
ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಗಾಳಿ ಆಡುವಂತೆ ಮಾಡಿ, ಕಾರ್ಬೊಪೂರಾನ್ ಅಥವಾ ಕಾರ್ಟಾಪ ಹೈಡ್ರೋಕ್ಲೋರೈಡ್ ಗುಳಿಗೆಗಳನ್ನು 25-30 ಗ್ರಾಂ ಪ್ರತಿ ಗಿಡಕ್ಕೆ ನೀಡುವುದು. ಇದರ ಜೊತೆಗೆ  ನಿಮಿಟ್ಟು ಎನ್ನುವ ಜಂತು ಹುಳು ನಿವಾರಕವನ್ನು 30 ಗ್ರಾಂ. ನೀಡುವುದು. 3 ವಾರಗಳ ನಂತರ ಟ್ರೆöÊಕೋಡರ್ಮಾ ಹಾರ್ಜಿಯಾನು, ಪೇಸಿಲೋಮೈಸಸ್ (30+30 ಗ್ರಾಂ) ಬೆರೆಸಿ ಗಿಡದ ಸುತ್ತಲೂ ಕೊಟ್ಟು ನೀರುಣಿಸಬೇಕು.
ಹಿಟ್ಟು ತಿಗಣೆ ಹತೋಟಿ;
ಮೀನಿನೆಣ್ಣೆ, ಬೇವಿನ ಎಣ್ಣೆ ಜೊತೆ ಡಿ.ಡಿ.ವಿ.ಪಿ. ಕೀಟನಾಶಕ ಬೆರೆಸಿ 15-20 ದಿನಗಳಿಗೊಮ್ಮೆ ಸಿಂಪರಣೆ ಕೈಗೊಳ್ಳುವುದು. ಇರುವೆಗಳು ಇರದಂತೆ ನೋಡಿಕೊಳ್ಳುವುದು. ಗಿಡಗಳಲ್ಲಿ ಗಾಳಿ / ಬೆಳಕು ಚೆನ್ನಾಗಿ ಆಡುವಂತೆ ನೋಡಿಕೊಳ್ಳುವುದು.
ಲಿಂಬೆ;
ಲಿಂಬೆಯಲ್ಲಿ ಮೈಟನುಸಿ, ಕಾಣಿಸಿಕೊಂಡಿದ್ದು ಡೈಕೋಫಾಲಂತಹ ಸೂಕ್ಷö್ಮ ನುಸಿ-ನಾಶಕಗಳನ್ನು ಬಳಸಬೇಕು. ಭಾರತೀಯ ತೋಟಗಾರಿಕೆ ಸಂಶೋಧನಾ ಬೆಂಗಳೂರಿನವರು ಆವಿಷ್ಕಾರಿಸಿದ ಲಿಂಬೆ ಸ್ಪೇಷಲ್ ಸಿಂಪಡಿಸಬೇಕು ಎಂದು ತಿಳಿಸಿದರು.
ದ್ರಾಕ್ಷಿ;
ಇತ್ತೀಚಿನ ಮಳೆ ಹಾಗೂ ಮೋಡಕವಿದ ವಾತಾವರಣದಿಂದಾಗಿ ಅನೇಕ ರೋಗ / ಕೀಟಗಳು ಕಾಣಿಸಿಕೊಂಡಿವೆ. ಹೊಸ ಚಿಗುರು ಚಿವುಟುವುದು, ನೀರು-ಪೋಷಕಾಂಶಗಳ ಸಮರ್ಪಕ ನಿರ್ವಹಣೆ ಮಾಡಬೇಕೆಂದು ಡಾ|| ಡಿ.ಪಿ. ಪ್ರಕಾಶ ತಿಳಿಸಿದರಲ್ಲದೇ ರೋಗ ಯಾವುದು ಮತ್ತು ತೀವ್ರತೆ ಎಷ್ಟಿದೆ ನೋಡಿಕೊಂಡು ಸೂಕ್ತ ಶಿಲೀಂಧ್ರನಾಶಕಗಳನ್ನು ಸಿಂಪಡಿಸಬೇಕೆAದು ತಿಳಿಸಿದರು.
ಸೀತಾಫಲ;
ಹೊಸ ತಳಿಯಾದ ಎನ್.ಎಮ್.ಕೆ. ಬಾಳೆ ವಿಲಿಯಮ್ಸ್ ತಳಿ ಬಗ್ಗೆ ಮಾನ್ಯ ಕಲಬುರ್ಗಿ ವಿಭಾಗದ ಜಂಟಿ ನಿರ್ದೇಶಕರಾದ ಶ್ರೀಶೈಲ ದಿಡ್ಡಿಮನಿ ರವರು ಸಮಗ್ರ ಮಾಹಿತಿ ನೀಡಿದರಲ್ಲದೇ ಅಧಿಕಾರಿಗಳ ಹೆಚ್ಚಿನ ಮಾಹಿತಿ ಪಡೆದು ಕ್ಷೇತ್ರಗಳಲ್ಲಿ ಉತ್ತಮ ಮಾಹಿತಿಯನ್ನು ರೈತರಿಗೆ ನೀಡಬೇಕೆಂದು ಸೂಚಿಸಿದರು. ಉತ್ತಮ ಗುಣಮಟ್ಟ ಛಾಯಾಚಿತ್ರಗಳನ್ನು ಪ್ರದರ್ಶಿಸಿ ರೋಗ / ಕೀಟಗಳ ಮಾಹಿತಿ ತಿಳಿದುಕೊಳ್ಳಬೆಕೆಂದು ಆಯಾ ತಾಲ್ಲೂಕು ಹಾಗೂ ಜಿಲ್ಲೆಯ ಅಧಿಕಾರಿಗಳಿಗೆ ಆದೇಶ ನೀಡಿದರು.
ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಕೊಪ್ಪಳ ರವರು ಸಮನ್ವಯ ಅಧಿಕಾರಿಯಾಗಿ ಉಪಸ್ಥಿತರಿದ್ದರು. ಬಳ್ಳಾರಿ ಜಿಲ್ಲೆಯ ತೋಟಗಾರಿಕೆ ಉಪನಿರ್ದೇಕರು ಉಪಸ್ಥಿತರಿದ್ದು, ಸಮಗ್ರ ಮಾಹಿತಿ ನೀಡಿದರು.
ತೋಟಗಾರಿಕೆ ಮಹಾ ವಿಶ್ವವಿದ್ಯಾಲಯದ ಡೀನ್ ರವರು ಅಧ್ಯಕ್ಷತೆ ವಹಿಸಿ ಇಂತಹ ಕಾರ್ಯಾಗಾರಗಳು ಇನ್ನಷ್ಟು ಪರಿಣಾಮಕಾರಿಯಾಗಲು ಒಂದು ವಾರ ಮುಂಚೆಯೇ ಕ್ಷೇತ್ರ ಮಟ್ಟದ ಸಮಸ್ಯೆಗಳನ್ನು ಛಾಯಾಚಿತ್ರಗಳ ಮೂಲಕ ತಮ್ಮ ಕಛೇರಿಗೆ ಮೇಲ್ ಮಾಡಲು ತಿಳಿಸಿದರಲ್ಲದೇ ಸಮಯಕ್ಕೆ ಸರಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಉಪಸ್ಥಿತರಿರುವಂತೆ ತಿಳಿಸಿದರು.
ಕೊಪ್ಪಳ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಕೊಪ್ಪಳ ಜಿಲ್ಲಾ ಮಾಹಿತಿ ನೀಡುತ್ತಾ ಇಲಾಖೆಯಿಂದ ಕೈಗೊಂಡ ನವೀನ ತಾಂತ್ರಿಕತೆಗಳಾದ ಸಮಗ್ರ ಪ್ಯಾಕ್ ಹೌಸ್ ನಿರ್ಮಾಣ, ಹೊಸ ತಳಿಗಳ ಪರಿಚಯ ಮತ್ತು ಗ್ರಾಮೀಣ ಮಾರುಕಟ್ಟೆ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು.
ಡಾ. ಡಿ.ಪಿ. ಪ್ರಕಾಶ ಕಾರ್ಯಕ್ರಮ ನಡೆಸಿಕೊಟ್ಟರು, ಡಾ. ಲಿಂಗಮೂರ್ತಿ ಕಾರ್ಯಕ್ರಮ ವಂದಿಸಿ ತರಕಾರಿ ಬೆಳೆಗಳ ತಾಂತ್ರಿಕತೆ ಬಗ್ಗೆ ತಿಳಿಸಿದರು.  ಕಾರ್ಯಾಗಾರ ಸಮನ್ವಯ ಅಧಿಕಾರಿ ತೋಟಗಾರಿಕೆ ಉಪನಿರ್ದೇಶಕರು (ಜಿಪಂ) ಕೊಪ್ಪಳ ರವರು ಕಾರ್ಯಕ್ರಮ ಉಸ್ತುವಾರಿ ವಹಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರ್ವಹಿಸಿ ರೈತರು ಆಯಾ ಹೋಬಳಿ , ತಾಲ್ಲೂಕು ಮಟ್ಟದ ಅಧಿಕಾರಿಗಳಿಂದ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆAದು ಈ ಸಂದರ್ಭದಲ್ಲಿ ಕರೆ ನೀಡಿದರು.

Please follow and like us:
error