You are here
Home > Koppal News > ಮುಕ್ತ ಉಪನ್ಯಾಸ ಮಾಲೆ ಕಾರ್ಯಕ್ರಮ

ಮುಕ್ತ ಉಪನ್ಯಾಸ ಮಾಲೆ ಕಾರ್ಯಕ್ರಮ

​ 


ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಸರ್.ಸಿ.ವ್ಹಿ ರಾಮನ್ ವಿಜ್ಞಾನ ವಿಭಾಗ ಮತ್ತು ಕರ್ನಾಟಕ ರಾಜ್ಯ ವಿಜ್ಞಾನ ಹಾಗೂ ತಂತ್ರಜ್ಞಾನ ಅಕಾಡೆಮಿ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಮುಕ್ತ ಉಪನ್ಯಾಸ ಮಾಲೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ದಯಾನಂದ ಅಗಸರವರು ಉದ್ಘಾಟಿಸಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ವಿಜ್ಞಾನ ಸಂಶೋಧನೆ ಸಾಧಿಸುವಲ್ಲಿ ದೃಢತೆಯನ್ನು ಹೊಂದಬೇಕಿದೆ ಎಂದರು. ಶಿಕ್ಷಕರ ಸಹಾಯದಿಂದ ಉತ್ತಮ ಗುರಿಗಳನ್ನು ಹೊಂದಲು ಮುನ್ನುಗ್ಗಬೇಕು. ವಿಜ್ಞಾನವನ್ನು ಮುಕ್ತ ಮನೋಭಾವದಿಂದ ಕಂಡಾಗ ಮಾತ್ರ ಆವಿಷ್ಕಾರದ ಸಂಶೋಧನೆಗಳು ವಿದ್ಯಾರ್ಥಿಗಳಿಂದ ಸೃಷ್ಠಿಯಾಗಲು ಸಾಧ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟಿನ ಕಾರ್ಯದರ್ಶಿಗಳಾದ ಶ್ರೀ ಎಸ್.ಮಲ್ಲಿಕಾರ್ಜುನರವರು ಪ್ರಸ್ತುತ ದಿನಮಾನಗಳಲ್ಲಿ ವಿಜ್ಞಾನದ ಮಹತ್ವ ಹೆಚ್ಚಾಗುತ್ತದೆ. ವಿಜ್ಞಾನದ ಆವಿಷ್ಕಾರಗಳಿಂದ ಸಮಾಜದಲ್ಲಿ ಆಗುವ ಪರಿವರ್ತನೆ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ಅತಿಥಿಯಾಗಿ ಭಾಗವಹಿಸಿದ್ದ ಆಡಳಿತಾಧಿಕಾರಿಗಳಾದ ಡಾ.ಆರ್ ಮರೇಗೌಡರವರು ಇಂತಹ ಕಾರ್ಯಕ್ರಮಗಳಾದಲ್ಲಿ ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರಸ್ತುತತೆ ಮನವರಿಕೆಯಾಗುತ್ತದೆ. ಉನ್ನತ ವ್ಯಾಸಾಂಗಕ್ಕೆ ಮತ್ತು ಸಂಶೋಧನೆಗೆ ಅನುವು ಮಾಡಿಕೊಡುತ್ತದೆ ಎಂದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ.ಬಿ.ಡಿ ಕೇಶವನ್ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಕ್ತ ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಉದ್ದೇಶ ಮತ್ತು ಆಶಯಗಳನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಪ್ರೊ.ಎಮ್.ಎಸ್ ದಾದ್ಮಿಯವರು ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳನ್ನು ಹೆಚ್ಚು-ಹೆಚ್ಚು ಉಪಯೋಗ ಮಾಡಿಕೊಳ್ಳಲು ಸೂಚಿಸಿದರು. ಈ ಮಾಲಿಕೆಯಲ್ಲಿ ಡಾ.ದಯಾನಂದ ಅಗಸರವರು ಜೀವಕಣಗಳ ಕ್ರೀಯಾತ್ಮಕ ಸಾಮಥ್ರ್ಯ, ಡಾ.ವಿಜಯಕುಮಾರ ಎಚ್ ದೊಡ್ಡಮನಿಯವರು ಸೌರವಿಜ್ಞಾನ ಮತ್ತು ಸಂಶೋಧನೆಗಳ ಅವಕಾಶಗಳು, ಡಾ.ಎಸ್.ಎಸ್ ಭೂಸನೂರಮಠರವರು ಗಣಿತ ಲೋಕದಲ್ಲಿ ವಿಹಾರಾರ್ಥ ಪ್ರವಾಸ ಎಂಬ ವಿಷಯಗಳ ಮೇಲೆ ಉಪನ್ಯಾಸ ನೀಡಿದರು.  ಈ ಉಪನ್ಯಾಸ ಮಾಲಿಕೆಯಲ್ಲಿ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳ ವಿಜ್ಞಾನ ಪದವಿ ಮಹಾವಿದ್ಯಾಲಯಗಳಿಂದ ಸುಮಾರು 120ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಕುಮಾರಿ ಸ್ಪಂದನಾ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಸಂಯೋಜಕರಾದ ಪ್ರೊ.ಬಿ.ಡಿ ಕೇಶವನ್, ಪ್ರಾಸ್ತವಿಕ ಮತ್ತು ಸ್ವಾಗತವನ್ನು ನೆರವೆರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ಗೀತಾ ಮತ್ತು ಕುಮಾರಿ ಮಂಜುಳಾ ನೆರವೆರಿಸಿದರು ಕೊನೆಗೆ ಕುಮಾರಿ ನಸೀಯಾ ವಂದಿಸಿದರು.

Leave a Reply

Top