You are here
Home > Koppal News > ಮೀಸಲಾತಿ ಯಾವಾಗ ಮುಗಿಯುತ್ತೆ ಎಂದು ಕೇಳುವವರು ಜಾತಿ ವ್ಯವಸ್ಥೆಗೆ ಕೊನೆ ಯಾವಾಗ ಎನ್ನುವುದನ್ನು ಹೇಳುವುದೇ ಇಲ್ಲ

ಮೀಸಲಾತಿ ಯಾವಾಗ ಮುಗಿಯುತ್ತೆ ಎಂದು ಕೇಳುವವರು ಜಾತಿ ವ್ಯವಸ್ಥೆಗೆ ಕೊನೆ ಯಾವಾಗ ಎನ್ನುವುದನ್ನು ಹೇಳುವುದೇ ಇಲ್ಲ

ನನ್ನ ಬೇಟಿಯಾದವರೆಲ್ಲಾ ಒಂದು ಪ್ರಶ್ನೆ ಕೇಳ್ತಾರೆ ಮೀಸಲಾತಿ ಯಾವಾಗ ಮುಗಿಯುತ್ತೆ ಅಂತಾ? ಆದರೆ ಜಾತಿ ವ್ಯವಸ್ಥೆ ಯಾವಾಗ ಕೊನೆ ಆಗುತ್ತೆ ಎನ್ನುವುದನ್ನು ಹೇಳುವುದೇ ಇಲ್ಲ … ಸಿರಿವಂತ ಭಾರತದಲ್ಲಿ ಬಡ ಇನ್ನೂ ಯಾಕಿದ್ದಾರೆ? ಗುಲಾಮಗಿರಿ ಪದ್ದತಿಯಂತೆ ಜಾತಿಯನ್ನು ಕೊನೆಗಾಣಿಸಬೇಕಿದೆ ಮೀರಾಕುಮಾರ್ ಆಕ್ರೋಶ

ನನ್ನ ಮುಖ ನೋಡಿದ ತಕ್ಷಣ ಕೆಲವರು ಮೀಸಲಾತಿ ಇನ್ನೂ ಕೊನೆಯಾಗಿಲ್ಲ ಯಾಕೆ  ಎಂದು ಕೇಳುತ್ತಾರೆ ಆದರೆ ಅದೇ ಜನ ಜಾತಿ ಪದ್ದತಿ ಮುಗಿಯುವುದು ಯಾವಾಗ  ಎಂದು ಹೇಳುವುದಿಲ್ಲ. ಸಾವಿರಾರು ವರುಷಗಳಿಂದ ಸೇವೆ ಮಾಡಿದವರಿಗೆ ಅಪಮಾನವೇ ಸಿಕ್ಕಿದೆ. ನಮ್ಮ ಋಣ ತೀರಿಸುವುದರಿಲಿ ಅದರ ಬಡ್ಡಿ ಕಟ್ಟಿದರೂ ಸಾಕಿದೆ ಆದರೆ ಅದಾವುದನ್ನೂ ಮಾತನಾಡದೇ ಮೀಸಲಾತಿಯ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದವರು ಮಾಜಿ ಲೋಕಸಭಾ ಸ್ಪೀಕರ್ ಮೀರಾಕುಮಾರ್. ಕೊಪ್ಪಳದ ಜಿಲ್ಲಾ ಕ್ರಿಡಾಂಗಣದಲ್ಲಿಂದು ನಡೆದ ರಾಜ್ಯಮಟ್ಟದ ಮೋಚಿಗಾರ ( ಮೋಚಿ ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು ಸಾವಿರಾರು ವರ್ಷಗಳಿಂದ ಭಾರತ ದೇಶದಲ್ಲಿ ಉಳಿದುಕೊಂಡು ಬಂದಿರುವ ಮೀಸಲಾತಿಯ ಬಗ್ಗೆ ಯಾಕೆ ಮಾತನಾಡುವುದಿಲ್ಲ, ಅದನ್ನು ಯಾಕೆ ತೆಗೆದು ಹಾಕುತ್ತಿಲ್ಲ. ಇಡೀ ಭಾರತದ ಇತಿಹಾಸದಲ್ಲಿ ಒಬ್ಬನೇ ಒಬ್ಬ ದಲಿತ ದೇಶಕ್ಕೆ ದ್ರೋಹ ಮಾಡಿಲ್ಲ, ದೇಶವನ್ನು ಮಾರಿಕೊಂಡಿದ್ದು ಇದ್ದರೆ ತಿಳಿಸಿ ಎಂದು ಇತಿಹಾಸಕಾರರಿಗೆ ಸವಾಲು ಹಾಕಿದರು.

 

Top