ಮೀನುಗಾರರಿಗೆ ಶಾಸಕರಿಂದ ಮೀನು ಹಿಡಿಯುವ ಸಲಕರಣೆ ವಿತರಣೆ

ಕೊಪ್ಪಳ:೨೭: ನಗರದ ತಾಲೂಕ ಪಂಚಾಯತಿ ಆವರಣದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಮೀನುಗಾರಿಕೆ ಇಲಾಖೆಯ ವತಿಯಿಂದ ರಾಷ್ಟ್ರೀಯ ಕೃಷಿ ವಿಸ್ತರ್ಣಾ ಯೋಜನೆ ಹಾಗೂ ಎಸ್.ಸಿ.ಪಿ./ ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಕೊಪ್ಪಳ ಮೀನುಗಾರರ ಸಂಘ ಹಾಗೂ ಕೆರೆಹಳ್ಳಿ ಮೀನುಗಾರರ ಸಂಘದ ೭೨ ಫಲಾನುಭವಿಗಳಿಗೆ ೧೯ ಫೈಬರ್ ಪುಟ್ಟಿ, ೨೬ ಬಲೆ, ಹಾಗೂ ೨೭ ಪುಟ್ಟಿ (ಅರಗೋಲು) ಅಂದಾಜು ಮೊತ್ತ ರೂ.೮.೦೦ ಲಕ್ಷದ ಅನುದಾನದಲ್ಲಿ ಮೀನು ಹಿರಿಯುವ ಸಲಕರಣೆಗಳನ್ನು ವಿತರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ದೇಶದಲ್ಲಿಯೇ ಮೀನುಗಾರರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಘಟಕವನ್ನು ಸ್ಥಾಪಿಸಿರುವ ಮುಖ್ಯಮಂತ್ರಿ ಸಿದ್ರಾಮಯ್ಯನವರು ದೇಶದಲ್ಲಿ ಈ ರೀತಿಯ ಮೀನುಗಾರರಿಗೆ ನೀಡುವ ಸೌಲಭ್ಯಗಳು ದೇಶದಲ್ಲಿ ಯಾವ ರಾಜ್ಯದಲ್ಲಿಯೂ ಇಲ್ಲ. ಮೀನುಗಾರರಿಗೆ ಮನೆಗಳ ನಿರ್ಮಾಣ, ವಿಶೇಷ ಸಾಲ ಸೌಲಭ್ಯಗಳನ್ನು ನೀಡಿ ಮೀನುಗಾರರ ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಉಚಿತ ಶಿಕ್ಷಣ ನೀಡುವುದರ ಜೊತೆಗೆ ಇವರು ಆರ್ಥಿಕವಾಗಿ ಸಬಲರಾಗಲು ಅನೇಕ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ನೀಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ತಾ.ಪಂ.ಸದಸ್ಯ ಸಿದ್ಲಿಂಗಸ್ವಾಮಿ ಇನಾಮದಾರ, ಮುಖಂಡರುಗಳಾದ ಅಮರೇಶ ಉಪಲಾಪೂರ, ಚಾಂದಪಾಷಾ ಕಿಲ್ಲೇದಾರ, ಕೊಪ್ಪಳ ಮೀನುಗಾರರ ಸಂಘದ ಅಧ್ಯಕ್ಷ ಹುಸೇನಪೀರಾ ಚಿಕನ್, ಕೆರೆಹಳ್ಳಿಯ ಮೀನುಗಾರರ ಸಂಘದ ಸಿದ್ರಾಮಪ್ಪ ಹಾಗೂ ಮೀನುಗಾರರ ಸಂಘದ ಸದಸ್ಯರು, ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error

Related posts