ಮಿಸ್ ಯೂ ಮಿಸ್ಟರ್ ಎಬಿಡಿ 360

ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮಿಸ್ಟರ್360 ವಿದಾಯ…

ಆತ ಕ್ರಿಕೆಟ್ ಲೋಕದ ಅಪ್ರತಿಮ ಪ್ರತಿಭಾವಂತ. ಕ್ರಿಕೆಟ್ ಅನ್ನೇ ತನ್ನ ಉಸಿರನ್ನಾಗಿಸಿಕೊಂಡಾತ. ಆತನ ಪ್ರತಿ ಉಸಿರಿನಲ್ಲೂ ಕ್ರಿಕೆಟ್ ನದ್ದೇ ಗುಣಗಾನ. ಇನ್ನು ಪ್ಯಾಡ್ ಕಟ್ಟಿ, ಬ್ಯಾಟ್ ಹಿಡಿದು ಗ್ರೌಂಡ್ ಗೆ ಎಂಟ್ರಿಯಾದ್ರೆ ಸಾಕು ಎದುರಾಳಿಗಳಲ್ಲಿ ನಡುಕ ಶುರುವಾಗುತ್ತಿತ್ತು. ಅದ್ರಲ್ಲೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ಟೀಮ್ ಅಂದಾಕ್ಷಣ ಜಗತ್ತಿನ ಕ್ರಿಕೆಟ್ ಅಭಿಮಾನಿಗಳಲ್ಲಿ ಗುನುಗುನಿಸುತ್ತಿದ್ದ ಹೆಸರು ಅದೊಂದೆ…

ಯಸ್ ನಾವ್ ಹೇಳ್ತಿರೋದು ಅವರೇ ಕ್ರಿಕೆಟ್ ಮೈದಾನದ ಪ್ರತಿ ಮೂಲೆಮೂಲೆಗೂ ಚೆಂಡಿನ ದರ್ಶನ ಮಾಡಿಸುತ್ತಿದ್ದಾತನ ಬಗ್ಗೆ. ಹೀಗಾಗಿಯೇ ಇವರನ್ನ ಕ್ರಿಕೆಟ್ ‌ಲೋಕದ ಮಿಸ್ಟರ್ 360 ಅಂತಾನೆ ಬಣ್ಣಿಸಲಾಗುತ್ತೆ. ಅವರೇ ಒನ್ ಅಂಡ್ ಒನ್ಲಿ‌ ಬಿಗ್ ಹಿಟ್ಟರ್, ಸ್ಪೋಟಕ ಆಟಗಾರ, ಮಿಸ್ಟರ್ 360 ಎಬಿ ಡಿವಿಲಿಯರ್ಸ್…

ಹೌದು ಎಬಿಡಿ ಹೆಸರು ಕೇಳಿದ್ರೆ ಕ್ರಿಕೆಟ್ ಲೋಕವೇ ಒಂದು‌ ಕ್ಷಣ ಅವರತ್ತ ಮುಖಮಾಡುತ್ತೆ. ಯಾಕಂದ್ರೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ತನ್ನನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಾತ. ಸುದೀರ್ಘ 14 ವರ್ಷಗಳ ಎಬಿಡಿಯ ಈ ಜರ್ನಿಯಲ್ಲಿ ಹಲವಾರು ಏಳು ಬೀಳುಗಳನ್ನ ಕಂಡಿದ್ದಾರೆ. ಹಲವಾರು ಪಂದ್ಯಗಳಲ್ಲಿ ನಾಯಕನಾಗಿ ತಂಡಕ್ಕೆ ವಿಜಯಮಾಲೆಯನ್ನು ತೋಡಿಸಿದ್ದಾರೆ. ಆದ್ರೇ, ಈ ಹದಿನಾಲ್ಕು ‌ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಎಬಿಡಿ ಎಲ್ಲವೂ ಸಾಧಿಸಿದ್ದಾರೆ. ಅಲ್ದೇ ಕ್ರಿಕೆಟ್ ನಿಂದ ಸಾಕಷ್ಟು ಹಣ ಹೆಸರು ಕೂಡ ಸಂಪಾದಿಸಿದ್ದಾರೆ.

ವೈಯಕ್ತಿಕವಾಗಿ ಹಲವಾರು ದಾಖಲೆಗಳನ್ನು ಮಾಡಿರೋ ಮಿಸ್ಟರ್ 360 ಗೆ ಅದೊಂದು ಚಿಂತೆ ಮಾತ್ರ ಅವರನ್ನ ಯಾವಾಗಲೂ ಕಾಡ್ತಿರುತ್ತಂತೆ. ತಮ್ಮ ಅವಧಿಯಲ್ಲಿ ದಕ್ಷಿಣ ಆಫ್ರಿಕಾ ಗೆ ವಿಶ್ವಕಪ್ ಕೀರಿಟವನ್ನ ತೊಡಿಸಲಿಲ್ಲವಾಗಲಿಲ್ಲ ಅಂತಾ, ಆದ್ರೂ ಇದೀಗ ಸುದೀರ್ಘ ಕ್ರಿಕೆಟ್ ನಿಂದ ಬಳಲಿದ್ದು ಮುಂಬರೋ ಯುವ ಆಟಗಾರರಿಗೆ ತಮ್ಮ ಜಾಗವನ್ನ ಬಿಟ್ಟು ಕೊಡೋ ಮೂಲಕ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ…ಆದ್ರೇ ಯಾರೇ ಬಂದ್ರೂ ಇವರ ಸ್ಥಾನವನ್ನು ತುಂಬೋಕ್ಕಾಗಲ್ಲ. ಯಾಕಂದ್ರೆ ಎಬಿಡಿಗೆ ಎಬಿಡಿನೇ ಸಾಟಿ…

ಒನ್ಸ್ ಅಗೇನ್ ಮಿಸ್ ಯೂ ಮಿಸ್ಟರ್ 360

Please follow and like us:
error