ಮಿಡತೆಗಳಿಂದ ಕೃಷಿಗೆ ಉಂಟಾಗುವ ಹಾನಿ ತಪ್ಪಿಸಲು ಕ್ರಮಕೈಗೊಳ್ಳಿ : ಪಿ.ಸುನೀಲ್ ಕುಮಾರ್


ಕೊಪ್ಪಳ ಮೇ. 29 (ಕರ್ನಾಟಕ ವಾರ್ತೆ): ಮಿಡತೆಗಳಿಂದ ಕೃಷಿ ಬೆಳೆಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ಅಗತ್ಯವಾದ ಮುನಚ್ಚರಿಕೆ ಹಾಗೂ ಹತೋಟಿ ಕ್ರಮಗಳ್ಳುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರದಂದು (ಮೇ.28) ನಡೆದ ಮರುಭೂಮಿ ಮಿಡತೆ ( Locust )/ ಸಣ್ಣ ಕೊಂಬಿನ ಮಿಡತೆಯಿಂದ ಕೃಷಿ ಬೆಳೆಗಳಿಗೆ ಉಂಟಾಗುವ ಹಾನಿಯನ್ನು ತಪ್ಪಿಸುವ ಮುನಚ್ಚರಿಕೆ ಕ್ರಮಗಳು ಹಾಗೂ ಹತೋಟಿ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅವರು ಮಾತನಾಡಿದರು.
ಮರುಭೂಮಿ ಮಿಡತೆಯನ್ನು ಸಣ್ಣ ಕೊಂಬಿನ ಮಿಡತೆ ( Locust) ಯೆಂದು ಕರೆಯುತ್ತಾರೆ.  ಸಿಸ್ಟೊಸರ್ಕ ಗ್ರಿಗೇರಿಯ ಇದು ವಿಶ್ವದ ಅತ್ಯಂತ ವಿನಾಶಕಾರಕ ಕೀಟಗಳಲ್ಲೊಂದಾಗಿದೆ.  ಇದು ಹೆಚ್ಚು ಸಕ್ರೀಯವಿರುವ ಕೀಟವಾಗಿದ್ದು, ಬೆಳೆಗಳು, ಹುಲ್ಲುಗಾವಲು ಮರದರೆಂಬೆ, ಕಾಂಡ ಮತ್ತು ಹಸಿರೆಲೆಯನ್ನು ಸಂಪೂರ್ಣವಾಗಿ ತಿಂದು ನಾಶಮಾಡುತ್ತದೆ.  ಒಂದು ಮಿಡತೆ ಗುಂಪು 150 ಕಿ.ಮೀ. ದೂರವನ್ನು ಸಂಚರಿಸಬಲ್ಲದು. ಪ್ರಮುಖವಾಗಿ ಗಾಳಿಯ ದಿಕ್ಕನ್ನೆ ಅವಲಂಬಿಸಿ ಮುನ್ನಗ್ಗುವ ಈ ಕೀಟ ಹಾದಿಯಲ್ಲಿ ಯಾವ ಆಹಾರವನ್ನು ಬಿಡದೆ ತಿನ್ನುತ್ತದೆ.  ಮಿಡತೆಯ ಹಿಂಡು ಕರ್ನಾಟಕ ರಾಜ್ಯಕ್ಕೆ ಯಾವ ಸಮಯದಲ್ಲಾದರು ಪ್ರವೇಶಿಸಬಹುದು.  ಆದ್ದರಿಂದ ಕೃಷಿ ಹಾಗೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳು ತುಂಬಾ ಜಾಗೃತರಾಗಿರಿ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಸೂಚನೆ ನೀಡಿದರು.
ಕೊಪ್ಪಳ ಜಂಟಿ ಕೃಷಿ ನಿರ್ದೇಶಕಿ ಶಬಾನ ಎಂ. ಶೇಖ್ ಅವರು ಮಿಡತೆಗಳಿಂದ ಕೃಷಿ ಬೆಳೆಗಳಿಗೆ ಉಂಟಾಗುವ ಹಾನಿಯನ್ನು ಈ ಕೀಟದ ಜೀವನದ ಬಗ್ಗೆ ಮಾಹಿತಿ ನೀಡುತ್ತಾ,
ಕೀಟದ ಜೀವನ ಚಕ್ರ;
ಮರುಭೂಮಿ ಮಿಡತೆಯ ಜೀವನ ಚಕ್ರವು ಮೂರು ಹಂತಗಳನ್ನೊಳಗೊAಡಿದೆ. ಮೊಟ್ಟೆ, ಅಪ್ಸರೆ (ನಿಂಫ್ಸ) ಮತ್ತು ಪ್ರೌಢ ರೆಕ್ಕೆ ಕೀಟ, ಒಂದು ಪ್ರೌಢ ಹೆಣ್ಣು ಮಿಡತೆಯು 80 ರಿಂದ 90 ಮೊಟ್ಟೆಯನ್ನು ತನ್ನ ಮೂರು ತಿಂಗಳ ಅವಧಿಯಲ್ಲಿ ಮೂರು ಬಾರಿ ಮಣ್ಣಿನಲ್ಲಿ ಇಡುತ್ತದೆ. ಅನಿಯಂತ್ರಿತ ಮಿಡತೆಗಳ ಹಿಂಡು ಒಂದು ಚದರ ಕಿ.ಮೀ. ಪ್ರದೇಶದಲ್ಲಿ 40 ರಿಂದ 80 ದಶಲಕ್ಷ ಮಿಡತೆಗಳಾಗಿ ಬೆಳೆಯಬಲ್ಲವು.
ಮಿಡತೆಗಳ ದೈಹಿಕತೆ ಮತ್ತು ಸಮೂಹ;
ಮಿಡತೆಯಲ್ಲಿ ಎರಡು ಹಂತಗಳಲ್ಲಿವೆ. ಒಂದು ಒಂಟಿ ಹಂತ, ಮತ್ತೊಂದು ಸಮೂಹ ಹಂತ, ಒಂಟಿ ಹಂತದಲ್ಲಿ ಇವು ಹಸಿರು ಅಥವಾ ಕಂದು ಬಣ್ಣವನ್ನು ಹೊಂದಿರುತ್ತವೆ. ಸಮೂಹ ಹಂತದಲ್ಲಿ ತಿಳಿ ಹಳದಿ ಬಣ್ಣವನ್ನು ಹೊಂದಿರುತ್ತವೆ. ಒಂಟಿ ಮಿಡತೆಗಳು ಸಮೂಹವಾಗಲು ಒಂದು ಬರಗಾಲದ ನಂತರ ಉತ್ತಮ ಮಳೆ ಮತ್ತು ಹಚ್ಚ ಹಸಿರಿನ ಪ್ರಚೋದನೆಯಿಂದ ಸಂತಾನೋತ್ಪತ್ತಿ ವೃದ್ಧಿಸಿ, ಅವುಗಳಲ್ಲಿಯೇ ಸ್ಪರ್ಧೆ ಹೆಚ್ಚಾಗಿ ಹಿಂಡು ಹಿಂಡಾಗಿ ಹೊಸ ಪ್ರದೇಶವನ್ನು ಆಕ್ರಮಿಸಲು ಪ್ರಾರಂಭಿಸುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು ಮತ್ತು ಹತೋಟಿ ಕ್ರಮಗಳು;
ಗಾಳಿಯ ದಿಕ್ಕು ಆಧಾರಿಸಿ ಇವುಗಳು ಚಲಿಸುವುದರಿಂದ ಇವುಗಳ ಚಲನ ವಲನಗಳ ಮೇಲೆ ನಿಗಾ ವಹಿಸುವುದು, ಕೀಟ ಬಾಧಿತ ಪ್ರದೇಶದಲ್ಲಿ ಹೊಗೆ ಮತ್ತು ಬೆಂಕಿಯನ್ನು ಹಾಕುವುದರಿಂದ ಕೀಟವನ್ನು ಬೇರೆಡೆಗೆ ಓಡಿಸಬಹುದು, ಕೀಟವು ಬೆಳೆಗಳಲ್ಲಿ ಕಂಡುಬAದಲ್ಲಿ ಡ್ರಮ್ ಅಥವಾ ಪಾತ್ರೆ ಅಥವಾ ಫಲಕಗಳನ್ನು ಬಡಿಯುವುದರ ಮೂಲಕ ಹೆಚ್ಚಾಗಿ ಶಬ್ಧವನ್ನು ಮಾಡಿ ಮಿಡತೆ ಸಮೂಹವನ್ನು ಇತರೆಡೆಗೆ ಓಡಿಸುವುದು, ಬೇವಿನ ಮೂಲದ ಕೀಟನಾಶಕಗಳನ್ನು (ಶೇ.0.15 ಇ.ಸಿ. ಪ್ರತಿ ಲೀಟರಿಗೆ 3 ಮೀಲಿ ಲೀಟರ್) ಬೆಳೆಗಳಲ್ಲಿ ಸಿಂಪಡಿಸುವುದರಿAದ ಕೀಟವು ಬೆಳೆಹಾನಿ ಮಾಡುವುದು ಕಡಿಮೆ ಆಗುತ್ತದೆ, ಕೀಟವು ಮರಿಹುಳುಗಳಾಗಿದ್ದಲ್ಲಿ ಬಾಧಿತ ಪ್ರದೇಶದಲ್ಲಿ ಕನಿಷ್ಠ 2 ಅಡಿ ಆಳ ಮತ್ತು 3 ಅಡಿ ಅಗಲದ ಗುಂಡಿಗಳನ್ನು ನಿರ್ಮಿಸಿ ಮರಿಹುಳುಗಳನ್ನು ಸೆರೆ ಹಿಡಿದು ನಾಶಪಡಿಸುವುದು, ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಸೂಕ್ತ ರಸಾಯನಿಕಗಳನ್ನು ಬಳಸಿ ಕೀಟಗಳ ಹತೋಟಿ ಮಾಡಬಹುದು.  ಈ ಕುರಿತು ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಮಾರುತಿ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂ ಸೇರಿದಂತೆ ಉಪ ಕೃಷಿ ನಿರ್ದೇಶಕರು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಉಪಸ್ಥಿತರಿದ್ದರು.

Please follow and like us:
error