ಮಾ. ೦೮ ರಂದು ಕೊಪ್ಪಳದಲ್ಲಿ ಜನಪರ ಉತ್ಸವ ಕಾರ್ಯಕ್ರಮ

): ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜನಪರ ಉತ್ಸವ ಕಾರ್ಯಕ್ರಮವನ್ನು ಮಾ. ೦೮ ರಂದು ಸಂಜೆ ೦೪ ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ.
ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಮಂತ್ರಿಗಳಾದ ಬಸವರಾಜ ರಾಯರಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು. ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಅಧ್ಯಕ್ಷ ಕೆ. ರಾಜಶೇಖರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಶಿವರಾಜ ಎಸ್ ತಂಗಡಗಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಜಿ.ಪಂ. ಉಪಾಧ್ಯಕ್ಷೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ. ಅಧ್ಯಕ್ಷ ಬಾಲಚಂದ್ರನ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಜುಲ್ಲು ಖಾದರ ಖಾದ್ರಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಉಮಾ ಮಹದೇವನ್ ಪಾಲ್ಗೊಳ್ಳುವರು.
ಸಾಂಸ್ಕೃತಿಕ ಕಾರ್ಯಕ್ರಮಗಳು : ಜನಪರ ಉತ್ಸವದ ಅಂಗವಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು, ಅವುಗಳ ವಿವರ ಇಂತಿದೆ. ಚಿಲಕಮುಖಿಯ ಸಣ್ಣ ಹನುಮಂತಪ್ಪ ಡಿ. ಬುಬ್ಬಲ್ ಹಾಗೂ ತಂಡದಿಂದ ಮೋಜಿನ ಗೊಂಬೆ. ಪ್ರಶಾಂತ ಡಿ. ಕಿನ್ನಾಳ ಹಾಗೂ ತಂಡದಿಂದ ಕರಡಿ ಮಜಲು. ಹನುಮಂತ ಕುಮಾರ ಮುಧೋಳ ಹಾಗೂ ತಂಡದಿಂದ ಕೊಳಲು ವಾದನ. ಪ್ರಮೋದಿನಿ ಆಮದಿಹಾಳ ಗಂಗಾವತಿ ಹಾಗೂ ತಂಡದಿಂದ ಸುಗಮ ಸಂಗೀತ. ಮಾರೆಪ್ಪ ಮಾರೆಪ್ಪ ದಾಸರ್ ಯಲಬುರ್ಗಾ ಹಾಗೂ ತಂಡದಿಂದ ತತ್ವ ಪದ. ಗೌಡೇಶ ಪವಾರ ಕೊಪ್ಪಳ ಹಾಗೂ ತಂಡದಿಂದ ದಾಸವಾಣಿ. ಶಕುಂತಲಾ ಬೆನ್ನಾಳ ಭಾಗ್ಯನಗರ ಹಾಗೂ ತಂಡದಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ. ವೀರೇಶ ಭಜಂತ್ರಿ ಮಂಗಳೂರು ಹಾಗೂ ತಂಡದಿಂದ ಕ್ಲಾರಿಯೋನೆಟ್ ವಾದನ. ಲಕ್ಷ್ಮೀದೇವಿ ಗಂಗಾವತಿ ಹಾಗೂ ತಂಡದಿಂದ ಸುಗಮ ಸಂಗೀತ. ಗಾಳೆಪ್ಪ ಹರಿಜನ ಹೊರತಟ್ನಾಳ ಹಾಗೂ ತಂಡದಿಂದ ಜಾನಪದ ಸಂಗೀತ. ತೇಜಶ್ವಿನಿ ತೋಟದ ಕೊಪ್ಪಳ ಹಾಗೂ ತಂಡದಿಂದ ನೃತ್ಯ ಸಮೂಹ.
ಮೈಲವ್ವ ದೊಡ್ಡಮನಿ ರ‍್ಯಾವಣಕಿ ಹಾಗೂ ತಂಡದಿಂದ ಸಂಪ್ರದಾಯ ಪದಗಳು. ಶಂಕರ ಬಿನ್ನಾಳ ಕನಕಗಿರಿ ಹಾಗೂ ತಂಡದಿಂದ ಹಾರ್ಮೊನಿಯಂ ಸೊಲೋ. ವೆಂಕಟೇಶ ಹೊಸಮನಿ ಹನುಮಸಾಗರ ಹಾಗೂ ತಂಡದಿಂದ ಜಾನಪದ ಸಂಗೀತ. ಶಾಂತಾನಂದ ತಿಮ್ಮಣ್ಣ ದಾಸರ ಲಿಂಗನಬಂಡಿ ಹಾಗೂ ತಂಡದಿಂದ ಸುಗಮ ಸಂಗೀತ. ಮರಿಯಪ್ಪ ಗುಂತಹನುಮಪ್ಪ ಚಾಮಲಾಪುರ ಹಾಗೂ ತಂಡದಿಂದ ಜಾನಪದ ಸಂಗೀತ. ಮಂಜುಳಾ ಚಲವಾದಿ ಗಂಗಾವತಿ ಹಾಗೂ ತಂಡದಿಂದ ಭಾವಗೀತೆ. ಮಾರುತಿ ದೊಡ್ಡಮನಿ ಬಿನ್ನಾಳ ಹಾಗೂ ತಂಡದಿಂದ ಸುಗಮ ಸಂಗೀತ. ಯಮನೂರಪ್ಪ ಭಜಂತ್ರಿ ಪಟ್ಟಲಚಿಂತಿ ಹಾಗೂ ತಂಡದಿಂದ ತತ್ವ ಪದ. ಸುಕುಮುನಿಯಪ್ಪ ಯಲ್ಲಪ್ಪ ಗಡಗಿ ಗುಮಗೇರಿ ಹಾಗೂ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.