ಮಾಹಿತಿ ಸಂಗ್ರಹಿಸುವಾಗ ಗೊಂದಲ ಸೃಷ್ಟಿಸಬೇಡಿ : ಪಿ.ಸುನೀಲ್ ಕುಮಾರ್

ರಾಷ್ಟಿಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆ : ತರಬೇತಿ ಕಾರ್ಯಾಗಾರ

ಕೊಪ್ಪಳ,  : ಜನಗಣತಿ ಸಂದರ್ಭದಲ್ಲಿ ಕುಟುಂಬದವರಿAದ ಮಾಹಿತಿ ಸಂಗ್ರಹಿಸುವಾಗ ಅನಗತ್ಯ ದಾಖಲೆಗಳನ್ನು ಕೇಳಿ ಗೊಂದಲ ಸೃಷ್ಟಿಸಬೇಡಿ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಜಿಲ್ಲಾ ಕ್ಷೇತ್ರ ತರಬೇತುದಾರರಿಗೆ ಸೂಚನೆ ನೀಡಿದರು.
ಭಾರತ ಜನಗಣತಿ-2021 ರ ಅಂಗವಾಗಿ ಮನೆಪಟ್ಟಿ ಮತ್ತು ಮನೆಗಣತಿ ಹಾಗೂ ರಾಷ್ಟಿಯ ಜನಸಂಖ್ಯಾ ರಿಜಿಸ್ಟರ್ ಪರಿಷ್ಕರಣೆಯ ಕುರಿತು ಕೊಪ್ಪಳ ಜಿಲ್ಲಾ ಕ್ಷೇತ್ರ ತರಬೇತಿದಾರರಿಗೆ ಇಂದು (ಮಾ.16) ಜಿಲ್ಲಾ ಪಂಚಾಯತನ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 5 ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಗರಿಕರಲ್ಲಿ ಈಗಾಗಲೇ ಎನ್.ಪಿ.ಆರ್,ಎನ್.ಸಿ.ಆರ್ ಮತ್ತು ಸಿಎಎ ಕುರಿತು ಗೊಂದಲಗಳಿವೆ. ಜನಗಣತಿ ಸಂದರ್ಭದಲ್ಲಿ ಮಾಹಿತಿ ಸಂಗ್ರಹಿಸುವಾಗ ಅನಗತ್ಯ ದಾಖಲೆಗಳನ್ನು ಕೇಳಿ ನಾಗರಿಕರಲ್ಲಿ ಗೊಂದಲ ಸೃಷ್ಟಿಸಬೇಡಿ. ಜನಗಣತಿಯ ಯಾವುದೇ ಹಂತದ ಪ್ರಕ್ರಿಯೆ ಕುರಿತು ಯಾವುದೇ ಸಣ್ಣ ಗೊಂದಲ, ಪ್ರಶ್ನೆಗಳು, ಅನುಮಾನಗಳು ಇದ್ದಲ್ಲಿ ತರಬೇತಿ ಸಂದರ್ಭದಲ್ಲಿ ಅವುಗಳನ್ನು ಬಗೆಹರಿಸಿಕೊಂಡು ಸಂಪೂರ್ಣ ಮಾಹಿತಿ ಪಡೆಯಿರಿ. ಜನಗಣತಿಯಲ್ಲಿ ಯವುದೇ ಜಾತಿ, ಧರ್ಮ, ವೈಯಕ್ತಿಕ ಅಭಿಪ್ರಾಯ, ಭಾವನೆಗಳಿಗೆ ಅವಕಾಶವಿಲ್ಲ. ಅವುಗಳನ್ನು ಹೊರತುಪಡಿಸಿ ಜನಗಣತಿಗೆ ಸರ್ಕಾರ ರೂಪಿಸಿರುವ ನಿಯಮಗಳನ್ನು ಅಚ್ಚುಕಟ್ಟಾಗಿ ಅನುಸರಿಸಿ ಅಗತ್ಯ ಮಾಹಿತಿಯನ್ನು ಮಾತ್ರ ಸಂಗ್ರಹಿಸಿ. ಏಪ್ರಿಲ್ 15 ರಿಂದ ಜನಗಣತಿ ಪ್ರಕ್ರಿಯೆ ಆರಂಭವಾಗಲಿದ್ದು ಅಲ್ಲಿಯವರೆಗೆ ಜನಗಣತಿಯ ಅಚ್ಚುಕಟ್ಟು ನಿರ್ವಹಣೆಗೆ ಇನ್ನೂ ಎರಡರಿಂದ ಮೂರು ತರಬೇತಿ ಕಾರ್ಯಾಗಾರಗಳು ನಡೆಯಲಿವೆ. ಜಿಲ್ಲಾ ಮಟ್ಟದಲ್ಲಿ ಜನಗಣತಿಗೆ ಸಂಬAಧಪಟ್ಟ ವಾಟ್ಸಪ್ ಗುಂಪು ರಚನೆ ಮಾಡಲಾಗಿದ್ದು, ಅದರಲ್ಲಿ ಸರ್ಕಾರದ ಆದೇಶಗಳು, ನಿರ್ವಹಿಸಬೇಕಾದ ಕರ್ತವ್ಯಗಳು ಮುಂತಾದವುಗಳ ಕುರಿತು ಯಾವುದೇ ಪ್ರಶ್ನೆಗಳಿದ್ದಲ್ಲಿ ತಕ್ಷಣವೇ ಸಂಬAಧಿಸಿದ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು. ಮುಂಜಾಗ್ರತಾ ಕ್ರಮವಾಗಿ ಜನಗಣತಿ ಸಂದರ್ಭದಲ್ಲಿ ನಾಗರಿಕರು ಕೇಳಬಹುದಾದ ಸಾಮಾನ್ಯ ಪ್ರಶ್ನೆಗಳನ್ನು ಗುರುತಿಸಿ, ದಾಖಲಿಸಿಕೊಂಡು ಜನಗಣತಿ ನಿರ್ದೇಶಕರಿಗೆ ಲಿಖಿತ ರೂಪದಲ್ಲಿ ಕಳುಹಿಸಿ ಅವರಿಂದ ಲಿಖಿತ ರೂಪದ ಉತ್ತರ ಹಾಗೂ ಮಾಹಿತಿಯನ್ನು ಪಡೆಯಲಾಗುವುದು. ನಾಗರಿಕರು ಎನ್‌ಪಿಆರ್ ಅಥವಾ ಜನಗಣತಿ ಕುರಿತು ಪ್ರಶ್ನೆಗಳನ್ನು ಕೇಳಿದಾಗ ಅಧಿಕೃತ ಮಾಹಿತಿಯನ್ನು ಮಾತ್ರ ನೀಡಬೇಕು. ನಿಮ್ಮ ವೈಯಕ್ತಿಕ ಅಭಿಪ್ರಾಯ ಅಥವಾ ಅಪೂರ್ಣ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನೀಡಬಾರದು. ಕರ್ತವ್ಯ ಲೋಪ ಕಂಡುಬAದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತರಬೇತಿದಾರರಿಗೆ ಎಚ್ಚರಿಕೆ ನೀಡಿದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಮಾತನಾಡಿ, ಜನಗಣತಿ ಪ್ರಕ್ರಿಯೆಯು ಏಪ್ರಿಲ್ 15 ರಿಂದ ಆರಂಭಗೊAಡು 18 ತಿಂಗಳುಗಳ ಕಾಲ ನಡೆಯಲಿದೆ. 2011 ರ ಜನಗಣತಿಯಲ್ಲಿ ರಚಿಸಿದ ನಕ್ಷೆಗಳು, ಬ್ಲಾಕ್‌ಗಳ ಆಧಾರದಲ್ಲಿಯೇ 2021 ರ ಜನಗಣತಿ ನಡೆಯಲಿದೆ. ಹೊಸದಾಗಿ ನಿರ್ಮಾಣವಾದ ಕಟ್ಟಡಗಳು, ಕುಟುಂಬ ಸದಸ್ಯರ ಜನಸಂಖ್ಯೆಯಲ್ಲಿನ ಏರಿಳಿತಗಳನ್ನು, ಅಂಕಿ ಅಂಶಗಳನ್ನು ಜನಗಣತಿ ಮಾಹಿತಿ ಸಂಗ್ರಹಕ್ಕಾಗಿ ನೀಡಲಾಗುವ ನಿಗದಿತ ನಮೂನೆಯಲ್ಲಿ ನಿರ್ದಿಷ್ಟ ಮಾದರಿಯಲ್ಲಿ ಮಾಹಿತಿಯನ್ನು ದಾಖಲಿಸಿ. ಎನ್‌ಪಿಆರ್ ಮತ್ತು ಜನಗಣತಿ ಮಾಹಿತಿ ಸಂಗ್ರಹಣೆಯು ಕಾನೂನಿಗೆ ಬದ್ಧವಾಗಿದ್ದು, ಕಾನೂನಾತ್ಮಕ ಪ್ರಕ್ರಿಯೆಗಳ ಮೂಲಕ, ಕಾಯ್ದೆಯನುಸಾರ ಮಾಹಿತಿ ಸಂಗ್ರಹಿಸಿ. ಕುಟುಂಬದ ಮುಖ್ಯಸ್ಥ ಅಥವಾ ಸದಸ್ಯ ಹೇಳಿಕೆಯ ಮೂಲಕ ನೀಡುವ ಮಾಹಿತಿಯೇ ಅಂತಿಮ. ಅನಗತ್ಯ ದಾಖಲೆಗಳನ್ನು ಕೇಳುವಂತಿಲ್ಲ. ಜನಗಣತಿಯ ಮೊದಲ ಹಂತವಾಗಿ ಮನೆಪಟ್ಟಿಯನ್ನು ಮಾಡಬೇಕು. ಜನಗಣತಿಯಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಅಂಕಿ-ಅAಶಗಳ ಆಧಾರದಲ್ಲಿ ಒಟ್ಟು 68 ಪ್ರಶ್ನೆಗಳನ್ನು ಒಳಗೊಂಡ ನಮೂನೆಯನ್ನು ನೀಡಲಾಗುವುದು. ನಮೂನೆಯಲ್ಲಿ ಕೇಳಲಾದ ಪ್ರಶ್ನೆಗಳಿಗಳಿಗೆ ಮಾತ್ರ ಮಾಹಿತಿ ಸಂಗ್ರಹಿಸಿ. ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ಗಳು ಪ್ರತ್ಯೇಕ ವಿಷಯಗಳಾಗಿದ್ದು, ಒಂದಕ್ಕೊAದು ಯಾವುದೇ ರೀತಿಯ ಸಂಬAಧವಿಲ್ಲ. ತರಬೇತಿದಾರರು ಮೊದಲು ಈ ಮೂರು ವಿಷಯಗಳ ನಡುವಿನ ವ್ಯತ್ಯಾಸಗಳನ್ನು ಅರಿತುಕೊಳ್ಳಬೇಕು. ಜನಗಣತಿ ಸಂದರ್ಭದಲ್ಲಿ ನಾಗರಿಕರು ಈ ಕುರಿತು ಕೇಳಿದಾಗ ಅಧಿಕೃತ ಮಾಹಿತಿಯನ್ನು ಮಾತ್ರ ನೀಡಬೇಕು. ಜನಗಣತಿ ಕರ್ತವ್ಯಕ್ಕೆ ನಿಯೋಜಿಸಿದ ಯಾವುದೇ ಸಿಬ್ಬಂದಿ, ಅಧಿಕಾರಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸಿ ಜನಗಣತಿ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಿ. ಈ ಐದು ದಿನಗಳ ತರಬೇತಿ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ಪೂರ್ಣ ಮಾಹಿತಿ ಪಡೆಯಿರಿ ಎಂದು ಅವರು ಹೇಳಿದರು.
ಕಾರ್ಯಾಗಾರದಲ್ಲಿ ಉಪ ವಿಭಾಗಾಧಿಕಾರಿ ಸಿ.ಡಿ.ಗೀತಾ, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ, ಉಪನ್ಯಾಸಕರಾದ ಪ್ರಭುರಾಜ ನಾಯಕ ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾಸ್ಟರ್ ತರಬೇತಿದಾರರು, ಜಿಲ್ಲಾ ಕ್ಷೇತ್ರ ತರಬೇತಿದಾರರು ಉಪಸ್ಥಿತರಿದ್ದರು.

Please follow and like us:
error