ಮಾಸ್ಟರ್ ಹಿರಣ್ಣಯ್ಯ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ

ಕೊಪ್ಪಳ, ೦೨- ಮಾಸ್ಟರ್ ಹಿರಣ್ಣಯ್ಯರವರು ಶ್ರೇಷ್ಠ ರಂಗಭೂಮಿ ಕಲಾವಿದರಾಗಿದ್ದರು. ರಂಗಭೂಮಿಗೆ ಹೊಸ ದಿಕ್ಕು ನೀಡಿದ್ದ ಅವರ ಅಗಲಿಕೆ ರಂಗಭೂಮಿ ಅಷ್ಟೆ ಅಲ್ಲದೇ ಕನ್ನಡ ನಾಡಿಗೆ ತುಂಬಲಾರದ ನಷ್ಟವೇಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಅವರು ತಾಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ವತಿಯಿಂದ ಸಾಹಿತ್ಯ ಪರಿಷತ್ತು ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದರು.
ಅಂದಿನ ಕಾಲಘಟದಲ್ಲಿ ರಾಜಕೀಯ ಹಾಗೂ ಆಳುವ ಸರ್ಕಾರಗಳನ್ನು ರಂಗಭೂಮಿಯಲ್ಲಿ ವಿಡಂಬನೆ ಮಾಡುತ್ತಾ ಸಮಾಜದ ಅಂಕು-ಡೊಂಕುಗಳನ್ನ ತಿದ್ದಿದ್ದ ಮಹಾನ್ ಚೇತನ ಅವರಾಗಿದ್ದರು ಎಂದರು.
ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆವಹಿಸಿದ್ಧ ಕಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಮಾತನಾಡಿ ಅವರ ಕಾಲಘಟದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದವರು. ಆಳುವ ಸರ್ಕಾರಕ್ಕೆ ತಮ್ಮ ರಂಗಭೂಮಿ ಮೂಲಕವೇ ಎಚ್ಚರಿಸಿದ ವೀರರು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಕೋಶಾಧ್ಯಕ್ಷ ಸಂತೋಷ ದೇಶಪಾಂಡೆ, ತಾಲೂಕು ಕಸಾಪ ಅಧ್ಯಕ್ಷ ಗೀರಿಶ ಪಾನಘಂಟಿ, ಕಾರ್ಯದರ್ಶಿ ರಮೇಶ ತುಪ್ಪದ, ರಂಗ ಕಲಾವಿದರು ಹಾಗೂ ಶಿಕ್ಷಕರಾದ ಪ್ರಾಣೇಶ ಪೂಜಾರ, ವೈಶಂಪಾಯ, ನ್ಯಾಯವಾದಿ ಬಸವರಾಜ, ಯಲಬುರ್ಗಾ ತಾಲೂಕು ಕಸಾಪ ಅಧ್ಯಕ್ಷ ದೇವೇಂದ್ರಪ್ಪ ಜರ್ಲಿ, ಶಿವಕುಮಾರ ಕುಕನೂರ ಶಿವಪ್ಪ ಹಡಪದ, ರಾಮಚಂದ್ರ ಗೊಂಡಬಾಳ ಇತರರು ಇದ್ದರು.

Please follow and like us:
error