ಮಾನವ ಕುಲದ ಒಳಿತಿಗಾಗಿ ಮಾರ್ಕ್ಸವಾದದ ಅಗತ್ಯತೆ ಇದೆ-ಎಂ.ಎ ಬೇಬಿ

ಕೇರಳದ ಮಾಜಿ ಶಿಕ್ಷಣ ಸಚಿವ ಎಂ.ಎ ಬೇಬಿ ಇಂದು ಕೊಪ್ಪಳದಲ್ಲಿ ಸಿಪಿಐ(ಎಂ)ನ ರಾಜ್ಯ ಅಧ್ಯಯನ ಶಿಬಿರದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿದರು.

ಕೇರಳದ ಮಾಜಿ ಶಿಕ್ಷಣ ಸಚಿವರ ಅಭಿಮತ :-

‘ಮಾನವ ಕುಲದ ಒಳಿತಿಗಾಗಿ ಮಾರ್ಕ್ಸವಾದದ ಅಗತ್ಯತೆ ಇದೆ’ ಎಂದು ಪೋಲಿಟ್ ಬ್ಯೂರೋ ಸದಸ್ಯ ಹಾಗೂ ಕೇರಳದ ಮಾಜಿ ಶಿಕ್ಷಣ ಸಚಿವ ಎಂ.ಎ ಬೇಬಿ ಹೇಳಿದರು.

ಕಾರ್ಲ್ ಮಾರ್ಕ್ಸ್ ರ ದ್ವಿ ಶತಮಾನೋತ್ಸವದ ಅಂಗವಾಗಿ ಭಾನುವಾರ ನಗರದಲ್ಲಿ ಕಾರ್ಲ್ ಮಾರ್ಕ್ಸ್ ರವರ ಹೇಳಿಕೆಗಳಿರುವ ಪೋಸ್ಟರ್ ಗಳ ಪ್ರದರ್ಶನದ ಉದ್ಘಾಟನೆ ಹಾಗೂ ಐದು ದಿನಗಳ ಕಾಲ ನಡೆಯುತ್ತಿರುವ ಸಿಪಿಐ(ಎಂ) ನ ರಾಜ್ಯ ಅಧ್ಯಯನ ಶಿಬಿರದ ಮೂರನೇ ದಿನದ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

‘ಮನುಷ್ಯನ ಮಟ್ಟಿಗೆ ಮನುಷ್ಯನೇ ಅತ್ಯುನ್ನತ ಜೀವಿಯಾಗಿದ್ದು, ಯಾವುದೇ ಪ್ರಶ್ನೆಯನ್ನಾದರೂ ಧಾರ್ಮಿಕ ದೃಷ್ಟಿ ಕೋನದಿಂದ ನೋಡದೆ, ಲೌಕಿಕ ದೃಷ್ಟಿಯಿಂದ ನೋಡಿ ಪರಿಹಾರ ಕಂಡು ಕೊಳ್ಳಬೇಕು’ ‘ಸ್ವರ್ಗ ಲೋಕದ ವಿಮರ್ಶೆಗಿಂತ ಭೂಲೋಕದ ವಿಮರ್ಶೆಯೆ ಹೆಚ್ಚು ಫಲಪ್ರದವಾಗಿದೆ ಎಂದು ಕಾರ್ಲ್ ಮಾರ್ಕ್ಸ್ ನಂಬಿದ್ದರು’ ಎಂದು ಹೇಳಿದರು.

‘ಎಷ್ಟೇ ದೊಡ್ಡ ಸೋಲಾದರೂ ಕೂಡ, ಅದರಿಂದ ಪಾಠ ಕಲಿತರೆ, ತಿರುಗಿ ಜಯಿಸಬಹುದು ಎಂದು ಮಾರ್ಕ್ಸ್ ರವರು ಹೇಳಿದ್ದರು. ಇಂದಿನ ಯುವ ಜನತೆ ಅದನ್ನು ಆದರ್ಶವಾಗಿ ತೆಗೆದುಕೊಳ್ಳಬೇಕು. ದೇಶದ ಶೋಷಿತ ವರ್ಗಕ್ಕೆ ಮಾರ್ಕ್ಸ್ ವಾದವೇ ಮದ್ದು’ ಎಂದು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಜಿ. ವಿ. ಶ್ರೀರಾಮರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಜಿ. ನಾಗರಾಜ, ರಾಜ್ಯ ಮುಖಂಡರಾದ ವಿಜಿಕೆ ನಾಯರ್, ಯು ಬಸವರಾಜ, ಎಸ್ ವರಲಕ್ಷ್ಮೀ, ಜಿ.ಎನ್ ನಾಗರಾಜ ಇದ್ದರು.

ಕಾರ್ಲ್ ಮಾರ್ಕ್ಸ್ ರವರ ಹೇಳಿಕೆಗಳಿರುವ ಪೋಸ್ಟರ್ ಗಳನ್ನು ವಿದ್ಯಾರ್ಥಿಗಳು, ಹೋರಾಟಗಾರರು, ಚಿಂತಕರು ಅಧ್ಯಯನಗಳಿಗೆ ಬಳಸಬಹುದಾಗಿದೆ. ಪೋಸ್ಟರ್ಗಳನ್ನು ಪಡೆವಂತೆ ಸಂಘಟಕರು ಇದೇ ವೇಳೆ ಮನವಿ ಮಾಡಿದರು.

Please follow and like us:
error