ಮಾನವೀಯತೆ ಮೆರೆದ ವೈದ್ಯ

koppal-doctor koppal-doctor-humanityಬಿರುಬಿಸಿಲಿಗೆ ಮನುಷ್ಯ ರಷ್ಟೇ ಅಲ್ಲ ಪ್ರಾಣಿಗಳೂ ಸಹ ಬಸವಳಿಯುತ್ತಿವೆ.  ಬಿರುಬಿಸಿಲಿಗೆ ತುತ್ತಾಗಿ ರಸ್ತೆ ಮದ್ಯೆಯೇ ಕುಸಿದು ಬಿದ್ದ ಆಕಳಿಗೆ ದಾರಿಹೋಕ  ವೈದ್ಯರೊಬ್ಬರು ಚಿಕಿತ್ಸೆ ನೀಡಿ ಮನುಷತ್ವ ಮೆರೆದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ ತಾಲೂಕಿನ ಬೆಟಗೇರಿಯ ವಿಠ್ಠಲ ಬನ್ನಿಗೋಳ ಎನ್ನುವ ರೈತ ತನ್ನ ಆಕಳನ್ನು ಹೊಡೆದುಕೊಂಡು ಬೆಟಗೇರಿಗೆ ಹೋಗುತ್ತಿದ್. ಬಿಸರಳ್ಳಿ ಗ್ರಾಮದ ಹತ್ತಿರ ಬಿಸಿಲಿನ ತಾಪಕ್ಕೆ ಬಳಲಿದ ಆಕಳು ಕುಸಿದು ಬಿದ್ದಿದೆ. ಜನಸಂಚಾರವೇ ಇರದಂತ ಸಮಯದಲ್ಲಿ ಊರ ಹೊರಗೆ ಘಟನೆ ನಡೆದಿದೆ. ಯಾರಿಗಾದರೂ ವಿಷಯ ತಿಳಿಸಬೇಕೆಂದರೆ ರೈತನ ಬಳಿ ಮೊಬೈಲ್ ಸಹ ಇಲ್ಲ. ಹೀಗಾಗಿ ರೈತ ಅಸಹಾಯಕನಾಗಿ ಕುಳಿತಿದ್ದಾನೆ. ಅದೇ  ಸಂದರ್ಭದಲ್ಲಿ ಅಲ್ಲಿಂದ ಹಾದು ಹೋಗುತ್ತಿದ್ದ ಡಾ.ಸಚಿನ್ ಎನ್ನುವವರು ಆಕಳನ್ನು ಕೆಳಗಡ ಬಿದ್ದಿದ್ದನ್ನು ನೋಡಿ ಕೆಳಗಿಳಿದಿದ್ದಾರೆ. ಅದೃಷ್ಟಕ್ಕೆ ಅವರು ಕೆಎಂಎಪ್ ನ ವೈದ್ಯರು. ಬೇರೆ ಯಾವುದೋ ಊರಿಗೆ ಹೋಗ್ತಾ ಇದ್ದರು. ಅಲ್ಲಿಯೇ ಆಕಳನ್ನು ಪರೀಕ್ಷಿಸಿದ ವೈದ್ಯರು ಆಕಳಿಗೆ ಇಂಜೆಕ್ಷನ್‌ ಮಾಡಿ ಸಲೈನ್ ಬಾಟಲಿ ಹಚ್ಚಿದ್ದಾರೆ. ತಮ್ಮ ಬಳಿ ಇದ್ದ ನೀರನ್ನು ಕುಡಿಸಿದ್ದಾರೆ. ವೈದ್ಯರ ಸತತ ಪ್ರಯತ್ನದಿಂದ ಸ್ವಲ್ಪ ಹೊತ್ತಿನ ನಂತರ ಆಕಳು ಚೇತರಿಸಿಕೊಂಡಿದೆ.  ದುಂಬಾಲು ಬಿದ್ದರೂ ವೈದ್ಯರು ಕೆಲವು ಸಲ ಸಹಾಯಕ್ಕೆ ಬರುವುದಿಲ್ಲ. ಹೀಗಿರುವಾಗ ವೈದ್ಯರೊಬ್ಬರು ಈ ರೀತಿ ಮಾನವೀಯತೆ ತೋರಿದ್ದು ರೈತರ ಶ್ಲಾಘನೆಗೆ ಒಳಗಾಗಿದೆ. ಮಾನವೀಯತೆ ಮೆರೆದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply