ಮಾಧ್ಯಮದಲ್ಲಿ 397 ಮಂದಿಗೆ ಕೋವಿಡ್ – 19 ಸೊಂಕು ಭೀತಿ – ಪ್ರಸಾರವಾದ, ಪ್ರಕಟವಾದ ವರದಿ ಸಂಪೂರ್ಣ ಸುಳ್ಳು ಸುದ್ದಿ- DC

Koppal ದಿನಾಂಕ : 29 – 04 – 2020 ರಂದು ಟಿವಿ9 ಕನ್ನಡ ಸುದ್ದಿ ವಾಹಿನಿ ಹಾಗೂ ಇತರೆ ಪತ್ರಿಕಾ ಮಾಧ್ಯಮದಲ್ಲಿ 397 ಮಂದಿಗೆ ಕೋವಿಡ್ – 19 ಸೊಂಕು ಭೀತಿ ಎಂಬ ಶಿರ್ಷಿಕೆಯಲ್ಲಿ ಆರೋಗ್ಯ ಅಧಿಕಾರಿಗಳ ಹೇಳಿಕೆಯನ್ನಾಧರಿಸಿ ಪ್ರಸಾರವಾದ / ಪ್ರಕಟವಾದ ವರದಿ ಸಂಪೂರ್ಣ ಸುಳ್ಳು ಸುದ್ದಿಯಾಗಿರುತ್ತದೆ . ಕಾರಣ ಕೋವಿಡ್ – 19 ಕುರಿತು ಜಿಲ್ಲಾಧಿಕಾರಿಗಳು ಕೊಪ್ಪಳ ಇವರನ್ನು ಹೊರತು ಪಡಿಸಿ ಜಿಲ್ಲೆಯಲ್ಲಿ ಯಾವುದೇ ಅಧಿಕಾರಿಗಳು ಮಾಧ್ಯಮಗಳಿಗೆ ಹೇಳಿಕೆ ನೀಡದಿರಲು ಸೂಚಿಸಿದೆ . ಹಾಗೂ ಮಾಧ್ಯಮ ಮಿತ್ರರು ಕೂಡ ಯಾವುದೇ ಅಧಿಕಾರಿಗಳನ್ನು ಸಂಪರ್ಕಿಸದೆ ನೇರವಾಗಿ ಜಿಲ್ಲಾಧಿಕಾರಿಗಳಿಂದ ಮಾತ್ರ ಮಾಹಿತಿ ಪಡೆದುಕೊಳ್ಳಲು ಕೋರಲಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Please follow and like us:
error