ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮರೆಯುತ್ತಿವೆ-ಸಿರಾಜ್ ಬಿಸರಳ್ಳಿ

ಕೊಪ್ಪಳ :  ನಮ್ಮ ಬದುಕಿನ ಎಲ್ಲಾ ಆಗುಹೋಗುಗಳನ್ನು ಮತ್ತು ಯಾವ ರೀತಿ ನಾವು ವರ್ತಿಸಬೇಕು ಎಂಬುದನ್ನು ಮಾಧ್ಯಮಗಳು ನಿರ್ಧರಿಸುತ್ತದೆ. ಮಾಧ್ಯಮಗಳಲ್ಲಿ ಮಹಿಳೆಯರು ನಿರ್ಣಯಕ ಸ್ಥಾನದಲ್ಲಿ ಇಲ್ಲ. ಮಹಿಳಾ ಪುರಾವಣಿಗಳಲ್ಲಿ ಸೌಂದರ್ಯದ ಕುರಿತು ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ ಹೊರತು ಸಮಾಜದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ವರದಿಗಳನ್ನು ಪ್ರಕಟಿಸುತ್ತಿಲ್ಲ. ಮಾಧ್ಯಮಗಳಿಗೆ ಮಹಿಳೆಯರು ಸರಕಾಗಿದ್ದಳೆ ಮತ್ತು ದೇಹವಾಗಿದ್ದಾಳೆ ಹೊರತು ಅವಳು ಜೀವಿಯಾಗಿಲ್ಲ ಎಂದು ಪ್ರಜಾ ಟಿವಿ ವಾಹಿನಿಯ ಕೊಪ್ಪಳ ಜಿಲ್ಲಾ ವರದಿಗಾರರಾದ ಸಿರಾಜ್ ಬಿಸರಳ್ಳಿ ಅವರು ಹೇಳಿದರು.
ಸೋಮವಾರ ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ೨೦೧೭-೧೮ ಸಾಲಿನ ಇಂಟರ್‌ನಲ್ ಕ್ವಾಲಿಟಿ ಅಶ್ಯೂರೆನ್ಸ್ ಸೆಲ್ ವತಿಯಿಂದ ಹಮ್ಮಿಕೊಂಡ ವಿಚಾರ ಸಂಕೀರಣದಲ್ಲಿ ಮಹಿಳೆಯರು ಮತ್ತು ಮಾಧ್ಯಮಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.
ಮಹಿಳೆಯರು ಪ್ರಶ್ನೆ ಮಾಡುವ ಗುಣ ಬೆಳಸಿಕೊಳ್ಳಬೇಕು. ಮಾಧ್ಯಮಗಳು ಮಹಿಳೆಯರ ಬಗ್ಗೆ ಚಾರಿತ್ರ್ಯೆವದೆ ಮಾಡುತ್ತಿವೆ. ಮಾಧ್ಯಮಗಳ ಸಾಮಜಿಕ ಜವಾಬ್ದಾರಿ ಮರೆಯುತ್ತಿವೆ. ನಗರ ಕೇಂದ್ರಿತ ಮತ್ತು ಉನ್ನತ ವರ್ಗದ ಮಹಿಳೆಯರ ಸಮಸ್ಯೆಗಳ ಬಗ್ಗೆ ಮಾತ್ರ ಸುದ್ದಿ ಮಾಡುತ್ತಿವೆ. ಕೆಳವರ್ಗದ ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಮಹಿಳೆಯರ ಸ್ಥತಿಗತಿ ಉನ್ನತ ಮಟ್ಟಕ್ಕೆ ಎರಿದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ವಿಶ್ವದಲ್ಲಿ ಅತಿ ಹೆಚ್ಚು ಚಳುವಳಿಗಳು ನಡೆದಿರುವುದು ಮಹಿಳೆಯರ ಕುರಿತು ಆಗಿವೆ. ಮಹಿಳೆಯರಿಗೆ ಕಡಿಮೆ ಶಿಕ್ಷಣ ದೊರುಕುತ್ತಿದೆ ಎಂದು ಹೇಳಿದರು.
ಗವಿಸಿದ್ದೇಶ್ವರ ಕಾಲೇಜಿನ ಉಪನ್ಯಾಸಕ ಅರುಣ್‌ಕುಮಾರ್ ಅವರು ಇಂಗ್ಲೀಷ್ ಸಾಹಿತ್ಯz ಕುರಿತು ವಿಶೇಷ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳು ಜೀವನದಲ್ಲಿ ಗುರಿಯಿಟ್ಟಕೊಳ್ಳಬೇಕು. ಕನಸ್ಸುಗಳನ್ನು ನನಸಗಾಲು ಕಠೀಣ ವಿದ್ಯಾಭ್ಯಾಸ ಮಾಡಬೇಕು. ಶ್ರಮ ಪಟ್ಟು ಕೆಲಸ ಮಾಡಿದರೆ ಯಶಸ್ಸು ಸಿಗುತ್ತದೆ. ಸಾಧನೆ ಮಾಡಿದ ವ್ಯಕ್ತಿಗಳನ್ನು ನೀವು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಆಧ್ಯಕ್ಷತೆಯನ್ನು ವಹಿಸಿರುವ ಕಾಲೇಜಿನ ಪ್ರಾಂಶುಪಾಲರಾದ ಡಾ. ಗಣಪತಿ ಲಮಾಣಿ ಅವರು ಈ ಕಾರ್ಯಕ್ರಮ ಉಧ್ಘಾಟನೆ ಮಾಡಿರುವ ಕೊಪ್ಪಳದ ಅಬಕಾರಿ ಉಪನೀರಿಕ್ಷಕ ಹೊನ್ನೂರು ವಲಿ ಅವರು ನನ್ನ ವಿದ್ಯಾರ್ಥಿ. ಇವರು ನಿಮ್ಮೆಲ್ಲಾರಿಗೂ ಮಾರ್ಗದರ್ಶಕರು. ನೀವು ಕೂಡ ಇವರ ರೀತಿಯಲ್ಲಿ ಚನ್ನಾಗಿ ವಿದ್ಯಾಭ್ಯಾಸ ಮಾಡಿ ಉತ್ತಮವಾದ ಸಾಧನೆ ಮಾಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮವನ್ನು ಕೊಪ್ಪಳದ ಅಬಕಾರಿ ಉಪನೀರಿಕ್ಷಕ ಹೊನ್ನೂರು ವಲಿ ಉಧ್ಘಾಟಿಸಿದರು. ಐಕ್ಯೂಎಸಿ ಸಂಯೋಜಕ ಮಹಾಂತೇಶ್ ಮುಧೋಳ, ಡಾ. ಮಂಜಪ್ಪ, ಸುಮಿತ್ರ, ವೆಂಕಟೇಶ್ ಗುಡ್ಲನೂರು, ಪರ್ವಿನ್, ತಾರಮತಿ, ಬಸವರಾಜ ಮತ್ತು ಕೀರ್ತಿ ಪಾಟಿಲ್ ಇದ್ದರು. ನಾಗರತ್ನ ತಮ್ಮಿನಾಳ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರದೀಪ್ ಕುಮಾರ್ ಯು ನಿರೂಪಿಸಿದರು. ನರಸಿಂಹ ಸ್ವಾಗತಿಸಿದರು. ದೀಪಾ ಅಂಗಡಿ ವಂದಿಸಿದರು.

Please follow and like us:
error