ಮಾದಿನೂರ ಹನುಮಂತಪ್ಪನಾಯಕ ನಿಧನ

ಕೊಪ್ಪಳ ಜ.೧೫: ತಾಲ್ಲೂಕಿನ ಮಾದಿನೂರ ಗ್ರಾಮದ ಹಿರಿಯ ಮುಖಂಡ ಹನುಮಂತಪ್ಪ ನಾಯಕ (೯೨) ಇಂದು ಹುಬ್ಬಳ್ಳಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಗುಪ್ತಾಚಾರ ವಿಭಾಗದ ಡಿಐಜಿ ರವಿನಾಯಕ ಸೇರಿದಂತೆ ನಾಲ್ವರು ಪುತ್ರರು ,ಓರ್ವ ಪುತ್ರಿ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಮೃತರು ಹೈದರಾಬಾದ್ ಉಸ್ಮಾನಿಯಾ ವಿ.ವಿ.ಯಿಂದ ಇಂಟರ್ ಮಿಡಿಯಟ್ ಪದವಿ ಪಡೆದಿದ್ದ ಅವರು.ಅಪಾರ ಜ್ಞಾನಿಯಾಗಿದ್ದರು. ಸಹಕಾರ ಹಾಗೂ ರಾಜಕೀಯ ರಂಗದ ಮೂಲಕ ಈ ಭಾಗದ ಗ್ರಾಮೀಣಾಭಿವೃದ್ಧಿ ಗೆ ಶ್ರಮಿಸಿದ್ದರು.ಸಂಕಷ್ಟದಲ್ಲಿದ್ದ ಕಿನ್ನಾಳದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಜವಾಬ್ದಾರಿ ವಹಿಸಿಕೊಂಡು ಅದರ ಪುನಶ್ಚೇತನಕ್ಕೆ ಕಾರಣರಾದರು.ಕೊಪ್ಪಳ ಜಿಲ್ಲೆಯ ಮಹರ್ಷಿ ವಾಲ್ಮೀಕಿ ನಾಯಕ ಸಮಾಜದ ಸಂಘಟನೆಗೆ ಬುನಾದಿ ಹಾಕಿದ ಅವರು ಜಿಲ್ಲೆಯ ರಾಜಕಾರಣದಲ್ಲಿ ದಟ್ಟ ಪ್ರಭಾವ ಹೊಂದಿದ್ದರೂ ಕೂಡ ,ಪ್ರಚಾರದ ಗೀಳಿಗೆ ಬೀಳಲಿಲ್ಲ.

ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ೧೬-೧-೨೦೧೮ ರಂದು ಬೆಳಿಗ್ಗೆ ೧೦.೩೦ ಕ್ಕೆ ಸ್ವಗ್ರಾಮ ಮಾದಿನೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ