ಮಾದಕ ವಸ್ತುಗಳ ಸೇವನೆಯಿಂದ ದೂರ ವಿರಬೇಕು-ವಿಶ್ವನಾಥ ಹಿರೇಗೌಡರ

ಅಂತರಾಷ್ಟ್ರೀ ಮಾದಕ ವಸ್ತುಗಳ ವಿರೋಧಿ ದಿನಾಚರಣೆ ಕಾರ್ಯಕ್ರಮ   

ಕುಡಿತದಿಂದ ಕುಟುಂಬದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ  ಮಾದಕ ವಸ್ತುಗಳ ಸೇವನೆಯಿಂದ ದೂರ ವಿರಬೇಕು ಅಂದಾಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಕಾರ್ಯಕ್ರಮದ ಅತಿಥಿಯಾದ ವಿಶ್ವನಾಥ ಹಿರೇಗೌಡರ ಪಿ.ಎಸ್.ಐ. ಕುಷ್ಟಗಿ  ಹೇಳಿದರು.  ಮದ್ಯ ಸೇವನೆಯಿಂದ ಆದಂತಹ ಪ್ರಕರಣಗಳ ಬಗ್ಗೆ ವಿದ್ಯಾರ್ಥಿಯೊಂದಿಗೆ ಚರ್ಚಿಸಿದರು.

ಸರ್ವೋದಯ ಐ.ಟಿ.ಐ ಕಾಲೇಜು ಕೊಪ್ಪಳದಲ್ಲಿ   ಸುರಭೀ ಸಮಗ್ರ ವ್ಯಸನಿಗಳ ಪುನರ್ವಸತಿ ಕೇಂದ್ರ ಕೊಪ್ಪಳ ಇವರ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನಾಚರಣೆಯನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ. ಮಲ್ಲಿಕಾರ್ಜುನ ರೆಡ್ಡಿ ವಹಿಸಿದ್ದರು. ಶ್ರೀಮತಿ ಶ್ರೀದೇವಿ ಪಿ. ಗದ್ದನಕೇರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯಾದ ಇವರು ಈ ಕಾರ್ಯಕ್ರವನ್ನು ಉದ್ಘಾಟಿಸಿ ಮಾದಕ ವಸ್ತುಗಳ ಸೇವನೆಯಿಂದ ಸಮಾಜದಲ್ಲಿ ಮತ್ತು ವ್ಯಕ್ತಿಯ ಜೀವನದ ಮೇಲೆ ತುಂಬಾ ಪರಿಣಾಮ ಬೀರಿದೆ ಹಾಗಾಗಿ ವಿದ್ಯಾರ್ಥಿಗಳು ಉತ್ತಮವಾದಂತಹ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು ಅಂದಾಗ ನಿಮ್ಮ ಭವಿಷ್ಯ ಚನ್ನಾಗಿ ರೂಪುಗೊಳ್ಳುತ್ತದೆ ಎಂದು ಹೇಳಿದರು.  ನಂತರ ಮುಖ್ಯ ಅತಿಥಿಯಾದ ಸವೇಕ್ಷಣಾ ಅಧಿಕಾರಿಯಾದ ಡಾ. ಎಂ.ಎಂ. ಕಟ್ಟಿಮನಿ ಯವರು ಇಂದಿನ ಯುವಕರು ಮಾದಕ ವಸ್ತುಗಳ ಸೇವನೆಯಿಂದ ಬಲಿಯಾಗುತ್ತಿದ್ದಾರೆ. ಮಾದಕ ವಸ್ತುಗಳಿಂದ ದೂರವಿರಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಈ ಇವರು ಮಾತನಾಡಿ  ಜಿಲ್ಲಾ ಅಂಗವಿಕಲರ ಕಲ್ಯಾಣ ಅಧಿಕಾರಿಯಾದ ಜಗದೀಶ ಕೆಂಪಲಿಂಗಣ್ಣನವರ ಇವರು ಮಾದಕ ವಸ್ತುಗಳ ಸೇವನೆ ಹೆಚ್ಚಾಗುತ್ತಿದೆ. ಇದು ಸಮಾಜದಲ್ಲಿ ದೊಡ್ಡ ಸಮಸ್ಯಯಾಗಿ ಬೆಳೆದಿದೆ. ಎಲ್ಲರು ಮಾದಕ ವಸ್ತುಗಳ ವಿರೋಧಿಯಾಗಬೇಕು ಎಂದು ಹೇಳಿದರು. ಸಮಾಜ ಕಾರ್ಯ ಅತಿಥಿ ಉಪನ್ಯಾಸಕರಾದಂತಹ ಶ್ರೀಕಾಂತ ಸಜ್ಜನ್ ಇವರು ಮದ್ಯಪಾನ ಸೇವಿಸುವಂತಹ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ಥಿತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಮಾದಕ ವಸ್ತುಗಳಲ್ಲಿ ಘನ, ದ್ರವ, ಅನಿಲ ಎಂದು ಮೂರು ರೀತಿಯ ಮಾದಕ ವಸ್ತುಗಳನ್ನು ನಾವು ಕಾಣಬಹುದು ಹಾಗೂ ಕುಡಿತದಿಂದ ಆಗುವಂತಹ ದುಷ್ಪರೀಣಾಮದ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸುರಭೀ ಕೇಂದದ್ರ ಸಿಬ್ಬಂದಿಯಾರಾದ ಅಶೋಕ ಎಸ್. ದರಿಯಪ್ಪನವರ ಯೋಜನಾ ನಿರ್ದೇಶಕರು, ಮರ್ದಾನಅಲಿ ಮಿರ್ಜಾ ಆಪ್ತಸಮಾಲೋಚಕರು, ವಿಶ್ವನಾಥ ಪಾಟೀಲ್, ಗವಿಸಿದ್ದಪ್ಪ, ವಿಠಲ್, ಕನಕಪ್ಪ ಕೆ, ಗುಡದಪ್ಪ ಸರ್ವೋದಯ ಐ.ಟಿ.ಐ ಕಾಲೇಜಿನ ಎಲ್ಲಾ ಸಿಬ್ಬಂದಿಯರು ಹಾಜರಿದ್ದರು.
ಕುಡಿತದಿಂದ ಮುಕ್ತರಾಗಿ ಉತ್ತಮ ಜೀವನವನ್ನು ನಡೆಸುತ್ತಿರುವ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. ಕವಿತಾ ನಿರೂಪಿಸಿದರು. ಶೀಲ್ಪಾ ಸ್ವಾಗತಿಸಿದರು. ಗವಿಸಿದ್ಧಪ್ಪ ವಂದನಾರ್ಪಣೆ ಮಾಡುವ ಮೂಲಕ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply