ಮಾತೃ ಭಾಷೆ ಬದುಕಿನ ಜೀವ ದ್ರವ್ಯ- ಶಿ.ಕಾ ಬಡಿಗೇರ್


ಕೊಪ್ಪಳಃ ಕನ್ನಡ ರಾಜ್ಯೋತ್ಸವ ಕೇವಲ ಆಚರಣೆ ಮಾತ್ರ ಅಷ್ಟೇ ಆಗಬಾರದು.ಮಾತೃ ಭಾಷೆ ಪ್ರತಿ ಮನುಷ್ಯನ ಜೀವದ್ರವ್ಯ. ಮಾನಸಿಕ ನೆಮ್ಮೆದಿಯ ಜೊತೆಗೆ ಪರಸ್ಪರ ಮನುಷ್ಯನನ್ನು ಸಂವೇದಿಗೊಳಿಸುತ್ತದೆ ಎಂದು ಕವಿಗಳು ಅನುವಾದಕರಾದ ಶಿ.ಕಾ ಬಡಿಗೇರ್ ಅವರು. ಭಾಗ್ಯನಗರ ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಅಯೋಜಿಸಿದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮಕಾಲೀನ ಕನ್ನಡ ಭಾಷೆ ಬಿಕ್ಕಟ್ಟು ವಿಚಾರ ಸಂಕಿರಣದಲ್ಲಿ ಆಂಗ್ಲ ಭಾಷೆ ಮತ್ತು ಕನ್ನಡ ಭಾಷೆಗಿರುವ ಸಂಘರ್ಷ ಕುರಿತ ವಿಷಯ ಮಂಡನೆಯಲ್ಲಿ ಅವರು ಪ್ರಬಂಧ ಮಂಡಿಸುತ್ತಾ. ಅನ್ಯಭಾಷೆ ಮಾತೃಭಾಷೆಯಷ್ಟು ವಿಶಾಲತೆಯನ್ನು ಪಡೆದಿರುವುದಿಲ್ಲ ಮಾತೃ ಭಾಷೆ ಆತ್ಮ ವಿಶ್ವಾಸದ ಬದುಕನ್ನು ಕಲಿಸಿಕೊಡುತ್ತದೆ ಎಂದರು. ಆಶಯ ನುಡಿಗಳಾನ್ನಾಡಿದ ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಮಾತನಾಡುತ್ತಾ ಮಾತು ಭಾಷೆಯಾಗಲಾರದು. ಅನಿವಾರ್ಯವಾಗಿ ಹುಟ್ಟುವ ಮಾತುಗಳು ಕ್ಷಣದಲ್ಲೇ ಹುಟ್ಟಿ ಸಾಯುತ್ತವೆ ಆದರೆ ಭಾಷೆಯು ಸಾಂಸ್ಕೃತಿಕ ಮತ್ತು ಚಾರಿತ್ರಿಕವಾಗಿ ವಿಸ್ತರಣೆಯನ್ನು ಪಡೆಯುತ್ತಿರುತ್ತದೆ. ಕನ್ನಡ ಭಾಷೆ ಮಾತಿನ ರೂಪ ಪಡೆಯ ಬಾರದು. ಸಾಹಿತಿಕ ಚೌಕಟ್ಟಿನೊಳಗೆ ಕನ್ನಡಿಗರು ಕನ್ನಡ ನುಡಿಯನ್ನು ಬಳಸಬೇಕು ಆಗ ಮಾತ್ರ ಕನ್ನಡ ಭಾಷೆ ಸಮೃದ್ಧಿಯನ್ನು ಕಾಣಲು ಸಾಧ್ಯ ಎಂದರು. ವಿಚಾರ ಗೋಷ್ಠಿ ಮತ್ತು ನಾಟಕ ಪ್ರರ್ದರ್ಶನ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಶಂ ನಿಂ ತಿಮ್ಮನ ಗೌಡರ್ ಮಾತನಾಡಿ ಕನ್ನಡ ಭಾಷೆ ಬೆಳೆಯಲು ಪ್ರಾಚೀನ ಕಾವ್ಯದಿಂದ ಹಿಡಿದು ಈಗ ಬರೆಯುವರಿಂದಲೂ ಶ್ರಮವಿದೆ. ಪಂಪ. ರನ್ನ. ಜನ್ನರಂತ ಪೂರ್ವ ಸೂರಿಗಳು ಹಾಕಿಕೊಟ್ಟ ಸೂತ್ರಗಳು ಕನ್ನಡ ಭಾಷೆಯನ್ನು ಅಮರವಾಗಿಸಿವೆ ಎಂದರು. ಚಲನಾಚಿತ್ರ ನಿರ್ದೇಶಕ ನಟರಾದ ಬಸವರಾಜ್ ಕೊಪ್ಪಳ ಅವರು ಕನ್ನಡ ಭಾಷೆ ಮತ್ತು ಸಿನೆಮಾದಲ್ಲಿ ಭಾಷಾ ಪ್ರಯೋಗ ವಿಷಯ ಮಂಡಿಸುತ್ತಾ ಸಿನೆಮಾ ಮಾದ್ಯಮ ಕನ್ನಡ ಭಾಷೆಯನ್ನು ಹಲವು ವಿದ್ಯಮಾನಗಳಲ್ಲಿ ವಿನೂತನ ಭಾಷೆ ಕಟ್ಟುತ್ತಾ ಬರುತ್ತಿದೆ ಸಿನೆಮಾ ರಂಗಕ್ಕೆ ಭಾಷೆಯೆ ಜೀವಾಳ ಮತ್ತು ಪರಿಣಾಮಕಾರಿ ದೃಶ್ಯ ಮಾದ್ಯಮ. ಪ್ರೇಕ್ಷಕರು ಸಿನೆಮಾದಲ್ಲಿ ಬರುವ ಸಂಭಾಷಣೆ ಮತ್ತು ಹಾಡುಗಳ ಪ್ರಭಾವಕ್ಕೆ ಒಳಗಾಗಿ ಬದುಕುತ್ತಿರುತ್ತಾರೆ ,ನಾವು ಸಿನೆಮಾದಲ್ಲಿ ಕನ್ನಡ ಭಾಷೆಯನ್ನ ವಸ್ತು ನಿಷ್ಟವಾಗಿ ಬಳಸಬೇಕು ಎಂದರು. ಗಿಣಗೇರ ಜ್ಞಾನ ಭಾರತೀ ಶಾಲೆಯ ಪ್ರಾಂಶುಪಾಲರಾದ ದೇವರಾಜ್ ಮೇಟಿಯವರು ಶೈಕ್ಷಣಿಕ ವಲಯದಲ್ಲಿ ಭಾಷಾ ನಿರೂಪಣೆ ವಿಷಯ ಮಂಡಿಸುತ್ತಾ ಕನ್ನಡ ಭಾಷೆ ಕಲಿಯುವ ಮಕ್ಕಳ ವರ್ತನೆಗೂ ಮತ್ತು ಅನ್ಯ ಭಾಷೆ ಕಲಿಯುವ ಮಕ್ಕಳ ವರ್ತನೆಗೂ ವಿಪರೀತ ವ್ಯತ್ಸಾಸವನ್ನು ಗುರುತಿಸಬಹುದು, ಮಾತೃ ಭಾಷೆಯಲ್ಲಿ ಕಲಿಯುವ ಮಕ್ಕಳು ಪ್ರತಿ ಕೆಲಸವನ್ನು ಅತ್ಮ ವಿಶ್ವಾಸದಿಂದ ಮಾಡುತಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಸಿ ಮಾತನಾಡಿದ ಹಿರಿಯ ಸಾಹಿತಿಗಳಾದ ಎ ಎಂ ಮದರಿಯವರು ಹಿಂದೆಂದಿಗಿಂತಲ್ಲೂ ಇಂದು ಭಾಷಾ ಬಿಕ್ಕಟ್ಟು ಹೆಚ್ಚಿದೆ. ಕನ್ನಡಿಗರಾದವರು ಕನ್ನಡ ಭಾಷೆಯನ್ನು ಮಾತನಾಡುವುದರ ಜೊತೆಗೆ ಕನ್ನಡ ಸಾಹಿತ್ಯವನ್ನು ಓದುವುದು ಮತ್ತು ಬರೆಯುವುದನ್ನು ಅಭಿರುಚಿ ಬೆಳೆಸಿಕೊಂಡರೆ ಸಮಕಾಲೀನ ಕನ್ನಡ ಭಾಷಾ ಬಿಕ್ಕಟ್ಟಿಗೆ ಉತ್ತರ ಕಂಡುಕೊಳ್ಳಬಹುದು ಎಂದರು. ವಿಚಾರ ಸಂಕಿರಣ ಕಾರ್ಯಕ್ರಮದ ನಂತರ ಹಾಲ್ಕುರಿಕೆ ಡ್ರಾಮಾ ಸ್ಕೂಲಿನ ವಿದ್ಯಾರ್ಥಿ ಹನುಮಂತ್ ವೀರಾಪುರ ಅಭಿನಯದ ಧರೆ ಮುನಿದರೆ ಏಕವ್ಯಕ್ತಿ ನಾಟಕ ಪ್ರದರ್ಶನವಾಯಿತು. ಕಾರ್ಯಕ್ರಮದಲ್ಲಿ ಹಾಲ್ಕುರಿಕೆ ಡ್ರಾಮಾ ಸ್ಕೂಲ್ ಮೆನೇಜರ್ ಪ್ರಶಾಂತ್ ಎಸ್ ಮದ್ಲಿ, ರವಿಕುಮಾರ್, ಹಾಗು ಡ್ರಾಮಾ ಸ್ಕೂಲ್ ವಿದ್ಯಾರ್ಥಿಗಳು ಪೋಷಕರು ಭಾಗವಹಿಸಿದ್ದರು.

Please follow and like us:
error