ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ವಯಸ್ಸು ಇದೆ, ಮುಂದಿನ ಚುನಾವಣೆಯಲ್ಲಿ ಅವರೇ ಸಿಎಂ

ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ವಯಸ್ಸು ಇದೆ, ಮುಂದಿನ ಚುನಾವಣೆಯಲ್ಲಿ ಅವರೇ ಸಿಎಂ ಆಗಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಚಿವ ಆರ್ ಶಂಕರ್ ಹೇಳಿದ್ರು. ಕೊಪ್ಪಳದಲ್ಲಿ ಮಾತನಾಡಿದ ಅವರು, ಸದಸ್ಯ ಮಟ್ಟಿಗೆ ಸಿಎಂ ಬದಲಾವಣೆ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ನಿನ್ನೆಯೂ ಸಹ ಸಮನ್ವಯ ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ. ಅದ್ದರಿಂದ ಇದರ ಬಗ್ಗೆ ಚರ್ಚೆ ಮಾಡೋ ಅವಶ್ಯಕತೆ ಇಲ್ಲ ಎಂದ್ರು. ಇನ್ನು ಸಿಎಂ ಬದಲಾವಣೆ ಆಗೋ ಸಂಧರ್ಭ ಬಂದ್ರೆ ನಾನು ಯಾರಿಗೂ ಬೆಂಬಲ ಕೊಡಬೇಕು ಅನ್ನೊದನ್ನು ನಾಣು ಯೋಚನೆ ಮಾಡ್ತೀನಿ ಆದ್ರೆ ಇದೀಗ ಬದಲಾವಣೆ ಆಗೋ ವಿಚಾರವೇ ಇಲ್ಲ ಎಂದು ಸ್ಪಷ್ಟಪಡಿಸಿದ್ರು.