ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಜನ್ಮದಿನ : ಬೆಂಬಲಿಗರ ಮಾದರಿ ಕಾರ್ಯ

ದೇವಸ್ಥಾನ, ಮಸೀದಿ, ಚರ್ಚೆಗಳ ಮುಖ್ಯಸ್ಥರಿಗೆ ಥರ್ಮಲ್ ಸ್ಕ್ರೀನಿಂಗ್ ಮಷೀನ್ ವಿತರಣೆ

KOPPAL : ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ 58ನೇ ಹುಟ್ಟು ಹಬ್ಬವನ್ನು ಬೆಂಬಲಿಗರು, ಸ್ನೇಹಿತರು ಹಾಗೂ ಕಾರ್ಯಕರ್ತರು ಮಾದರಿ ಎನ್ನುವ ರೀತಿಯಲ್ಲಿ ಆಚರಿಸಿದರು. ವಿಜೃಂಭಣೆ ಬದಲು ಮಾದರಿ ಕಾರ್ಯಕ್ಕೆ ಮುಂದಾದ ಕಾರ್ಯಕರ್ತರು.ಉಚಿತವಾಗಿ 58 ಸ್ಕ್ರೀನಿಂಗ್ ಮಷಿನ್ ವಿತರಣೆ ಮಾಡಿದರು. ಕೊಪ್ಪಳದ ಗಂಗಾವತಿಯ ಎಲ್ಲಾ ದೇವಸ್ಥಾನ, ಮಸೀದಿ, ಚರ್ಚಗಳಿಗೆ ಸ್ಕ್ರೀನಿಂಗ ಮಷೀನ್  ವಿತರಣೆ ಮಾಡಲಾಯಿತು.ಅತಿಯಾದ ಜ್ವರ ಗುರುತಿಸೋ ಸ್ಕ್ರೀನಿಂಗ್ ಮಷಿನ್ ಕರೋನಾ ಸಂದರ್ಭದಲ್ಲಿ ಅವಶ್ಯಕವಾದ ವಸ್ತುವಾಗಿದೆ. ಭಕ್ತರು ಗುಡಿ ಗಳಿಗೆ, ದೇವಸ್ಥಾನ  , ಚರ್ಚ ಮತ್ತು ಮಸೀದಿಗಳಿಗೆ ತೆರಳುವುದು ಹೆಚ್ಚಾಗಿದೆ. ಅದರ ಜೊತೆಯಲ್ಲಿ ಕರೋನಾ ಪಾಜಿಟಿವ್ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಇದನ್ನು ಮನಗಂಡ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರ ಬೆಂಬಲಿಗರು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದಾರೆ. ಕರೋನಾ ಸಂದರ್ಭದಲ್ಲಿ ಅನ್ಸಾರಿಯವರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ. ದೇವಸ್ಥಾನ, ಮಸೀದಿ, ಚರ್ಚಗಳ ಮುಖ್ಯಸ್ಥರಿಗೆ ಸ್ಕ್ರೀನಿಂಗ್ ಮಷೀನ್ ವಿತರಣೆ ಮಾಡಲಾಯಿತು. ಒಟ್ಟು 58 ಮಷಿನ್ ಖರೀದಿಸಿ ವಿತರಣೆ ಮಾಡಲಾಗಿದ್ದು ಅವಶ್ಯಕವೆನಿಸಿದರೆ ಇನ್ನಷ್ಟು ಮಷಿನ್ ಗಳನ್ನು ವಿತರಿಸಲಾಗುವುದು ಎಂದು ನಗರಸಭೆ ಸದಸ್ಯ , ಕಾಂಗ್ರೇಸ್ ಮುಖಂಡ ಶ್ಯಾಮೀದ  ಮನಿಯಾರ್ ಹೇಳಿದ್ದಾರೆ. ವಿತರಣೆ ಕಾರ್ಯದಲ್ಲಿ ಮನೋಹರಸ್ವಾಮಿ, ಸೈಯದ್ ಅಲಿ ಸೇರಿದಂತೆ ನಗರಸಭೆ ಸದಸ್ಯರು, ಕಾರ್ಯಕರ್ತರು ಭಾಗಿಯಾಗಿದ್ದರು.

Please follow and like us:
error