You are here
Home > Koppal News > ಮಾಜಿ ಸಂಸದ ಹಾಗೂ ಜೆಡಿಎಸ್‌ನ ರಾಜ್ಯ ಮುಖಂಡ ಹೆಚ್.ವಿಶ್ವನಾಥ ಆಗಮನ

ಮಾಜಿ ಸಂಸದ ಹಾಗೂ ಜೆಡಿಎಸ್‌ನ ರಾಜ್ಯ ಮುಖಂಡ ಹೆಚ್.ವಿಶ್ವನಾಥ ಆಗಮನ


ಕೊಪ್ಪಳ :  ೨೮ ರ ಸೋಮವಾರರಂದು ಜೆಡಿಎಸ್ ಪಕ್ಷದ ರಾಜ್ಯ ಮುಖಂಡ ಹಾಗೂ ಮಾಜಿ ಸಂಸದರಾದ ಹೆಚ್ ವಿಶ್ವನಾಥ ರವರು ಹೈದರಾಬಾದ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ಬೆಳಿಗ್ಗೆ ೧೦: ೩೦ ಕ್ಕೆ ನಗರದ ಜೆಡಿಎಸ್ ಜಿಲ್ಲಾ ಕಾರ್ಯಾಲಯಕ್ಕೆ ಆಗಮಿಸಲಿದ್ದಾರೆ ನಂತರ ಪಕ್ಷ ಸೇರ್ಪಡೆ ಕಾರ್ಯಕ್ರಮ ಜರುಗುವುದು ಈ ಕಾರ್ಯಕ್ರಮದಲ್ಲಿ ಹಲವಾರು ಹಿರಿಯರು, ಯುವಕರು, ವಿವಿಧ ಪಕ್ಷಗಳನ್ನು ತ್ಯೇಜಿಸಿ ಹೆಚ್ ವಿಶ್ವನಾಥರವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷವನ್ನು ಸೇರಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ವಿಕ್ಷಕರಾದ ಸಿ.ಎಂ ನಾಗರಾಜ, ಜಿಲ್ಲಾದ್ಯಕ್ಷ ಪ್ರದೀಪಗೌಡ ಮಾಲಿ ಪಾಟೀಲ್, ಮುಖಂಡರಾದ ವೀರೇಶ ಮಾಹಾಂತಯ್ಯನಮಠ, ಕೆ.ಎಂ ಸೈಯದ್, ಜಿಲಾನ್ ಕಿಲ್ಲೆದಾರ ಭಾಗವಹಿಸಲಿದ್ದು ಪಕ್ಷದ ಮುಖಂಡರು, ಪದಾಧಿಕಾರಿಗಳು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಪಕ್ಷದ ಜಿಲ್ಲಾ ವಕ್ತಾರ ಮೌನೇಶ ಎಸ್ ವಡ್ಡಟ್ಟಿ   ತಿಳಿಸಿದ್ದಾರೆ.

Top