ಮಾಜಿ ಶಾಸಕನ ಕಾರ್ ಗೆ ಬಾಲಕ ಬಲಿ

ರಸ್ತೆ ದಾಟುತ್ತಿದ್ದ ಬಾಲಕನಿಗೆ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದ ಮಾಜಿ ಬಿಜೆಪಿ ಶಾಸಕನ ಕಾರ್ ಡಿಕ್ಕಿ ಹೊಡೆದು ಬಾಲಕ ಸಾವನ್ನಪ್ಪಿದ ಘಟನೆ ಕೊಪ್ಪಳದಲ್ಲಿ ನಡೆದಿದೆ

.

ಗಂಗಾವತಿ ತಾಲೂಕಿನ ಮುಕ್ಕುಂಪಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದೆ. ಗಂಗಾವತಿಯ ಬಿಜೆಪಿಯ ಮಾಜಿ ಶಾಸಕ ಪರಣ್ಣ ಮುನವಳ್ಳಿ ಬೆಳಿಗ್ಗೆ ಇಂದಿರಾನಗರ ಗ್ರಾಮಕ್ಕೆಂದು ಡ್ರೈವರ್, ಪಿಎ ಜೊತೆ ಇನ್ನೋವೊ ಕಾರನಲ್ಲಿ ತೆರಳುತ್ತಿದ್ದರು.ಈ ವೇಳೆ ಮುಕ್ಕುಂಪಿ ಕ್ರಾಸ್ ಬಳಿ ಗಂಗಾವತಿ ಕಡೆ ಬರಲು ಬಸ್ ಗಾಗಿ ಅಜ್ಜ ಅಜ್ಜಿ ಜೊತೆ ಕಾಯುತ್ತಿದ್ರು. ಅಜ್ಜನ ಕಡೆ ಮೊಮ್ಮಗ ಬಸವರಾಜ್ ಏಕಾಏಕೀ ರಸ್ತೆ ದಾಟಲು ಮುಂದಾದಾಗ ವೇಗವಾಗಿ ಬಂದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಇದ್ದ ಕಾರ್ ಡಿಕ್ಕಿ ಹೊಡದಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕ ಬಸವರಾಜ್ ನನ್ನು ಮಾಜಿ ಶಾಸಕರ ಕಾರನಲ್ಲಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ರು ಚಿಕಿತ್ಸೆ ಫಲಿಸದೆ ಬಾಲಕ ಸಾವನ್ನಪ್ಪಿದ್ದಾನೆ. ಕನಕಗಿರಿ ಗೆ ತಮ್ಮ ದೊಡ್ಡಮ್ಮಳನ್ನು ಮಾತನಾಡಿಸಲು ತೆರಳುತ್ತಿದ್ದ ಬಾಲಕ ಈಗ ಬಾರದ ಲೋಕಕ್ಕೆ ಹೋಗಿದ್ದಾನೆ. ರೊಕ್ಕ ಕೊಡ್ತಿನಿ ಶಾಲೆಗೆ ಹೋಗು ಅಂತ ಅಜ್ಜಿ ಹೇಳಿದ್ರು. ಅಜ್ಜಿ ಮಾತ್ ಕೇಳದೆ ಹಠ ಮಾಡಿ ಬಂದ ಮೊಮ್ಮಗ ಕಣ್ಣಮುಂದೆ ಅನಾಹುತಕ್ಕೆ ತುತ್ತಾಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.