ಮಾಜಿ ರಾಷ್ಟ್ರಪತಿ ಕ್ಷಿಪಣಿ ತಜ್ಞ ಡಾ ಎಪಿಜೆ ಅಬ್ದುಲ್ ಕಲಾಂ ಜಯಂತಿ ಆಚರಣೆ

ಗಂಗಾವತಿ  :  ಗಂಗಾವತಿ ನಗರದ ಸರಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ಬ್ರೇಡ್ ವಿತರಿಸಿ ನಂತರ  ನಗರದ ಕೆನರಾ ಬ್ಯಾಂಕ್ ಹತ್ತಿರವಿರುವ ಡಾ ಎಪಿಜೆ ಅಬ್ದುಲ್ ಕಲಾಂ ವೃತ್ತದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಸಿಹಿ ಹಂಚುವ ಮೂಲಕ 87 ನೇ ಜನ್ಮದಿನವನ್ನು ಸಮಾಜ ಸೇವಕರಾದ ರಫೀಕ ಸುಲ್ತಾನ್ ರವರ ನೇತೃತ್ವದ ಗೆಳೆಯರ ಬಳಗದಿಂದ ಸರಳವಾಗಿ ಆಚರಿಸಲಾಯಿತು.
ನಂತರ ಮಾತನಾಡಿದ ರಫೀಕ್ ಸುಲ್ತಾನ್ ಭಾರತ ದೇಶಕ್ಕಾಗಿ ಪರಮಾಣು ಕ್ಷಿಪಣಿ ತಯಾರಿಸಿ ನೀಡುವ ಮೂಲಕ ಪ್ರಪಂಚದ ಪರಮಾಣು ಶಕ್ತಿ ಹೊಂದಿದ ಕೆಲವೇ ದೇಶಗಳ ಪಟ್ಟಿಯಲ್ಲಿ ಸೇರುವಂತೆ ಮಾಡಿದ ಮತ್ತು ಐದು ವರ್ಷಗಳ ಕಾಲ ಭಾರತದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಹುದ್ದೆಯನ್ನು ಸಮರ್ಥವಾಗಿ ನಿಭಾಯಿಸಿ ವಿಶ್ವವನ್ನು ಬೆರಗಾಗುವಂತೆ ಮಾಡಿದ ಅಣು ವಿಜ್ಞಾನಿ ಡಾ.ಕಲಾಂ ರವರನ್ನು ನಾವು ಸ್ಮರಿಸಬೇಕು ಹಾಗು ಅವರ ಆದರ್ಶಗಳನ್ನು ಜೀವನ ಅಳವಡಿಸಿಕೊಂಡು ದೇಶದ ಏಕತೆ ಹಾಗು ಸಾರ್ವಭೌಮತೆಗೆ ಕೊಡುಗೆ ನೀಡಬೇಕಾಗಿದೆ ಎಂದರು.

ಡಾ.ಕಲಾಂರನ್ನು ಮರೆತ ರಾಷ್ಟ್ರೀಯ ಪಕ್ಷಗಳು : ಅಂತರರಾಷ್ಟ್ರೀಯ ವಿಶ್ವವಿಧ್ಯಾಲಯಗಳಿಂದ 40 ಡಾಕ್ಟರೇಟ್, ಪದ್ಮಭೂಷಣ, ಪಧ್ಮವಿಭೂಷಣ, ಹಾಗು ಭಾರತದ ಅತ್ಯುನ್ನತ ಪ್ರಶಸ್ತಿಯಾದ ಭಾರತರತ್ನ ಗೌರವಕ್ಕೆ ಪಾತ್ರರಾದ ಡಾ ಕಲಾಂ ರವರನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಅವರ ಜನ್ಮದಿನದಂದು ಮರೆತಿರುವುದು ವಿಷಾದನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ತುಂಗಾವಾಣಿ ಸಂಪಾದಕರಾದ ಶಾಹಬುದ್ದೀನ ಮುಧೋಳ,ಸಲೀಮ ಬಾಗವಾನ, ಸೈಯದ್ ಇಮ್ತಿಯಾಜ್, ಸಮೀಉಲ್ಲಾ, ಅಫ್ರೋಜ್, ಅಮ್ಜದ್,ಪಾಷಿ,ಅನ್ಸರ,ರಹಮತ್ ಸಂಪಂಗಿ,ಇತರರು ಇದ್ದರು.

Please follow and like us:
error