ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ, ಆ.  :  ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಿಗೆವಾಡ ಗ್ರಾಮದ ನಿವಾಸಿ ಶಂಕ್ರಮ್ಮ (೨೦) ಗಂಡ ಹನುಮೇಶ ತಳವಾರ ಎಂಬ ಮಹಿಳೆ ಕಳೆದ ಜುಲೈ. ೧೪ ರಿಂದ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಪಿ.ಎಸ್.ಐ  ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಶಂಕ್ರಮ್ಮ (೨೦) ಗಂಡ ಹನುಮೇಶ ತಳವಾರ ಎಂಬ ಮಹಿಳೆ ಜುಲೈ. ೧೪ ರಂದು ಬೆಳಿಗ್ಗೆ ೧೧-೩೦ ಗಂಟೆ ಸುಮಾರಿಗೆ ಲಾಚನಕೇರಿ ಗ್ರಾಮಕ್ಕೆ ಹೋಗಲು, ಕೊಪ್ಪಳದ ಬಸವೇಶ್ವರ ಸರ್ಕಲ್ ಹತ್ತಿರದಿಂದ ಸಿಹಿತಿನಿಸುಗಳನ್ನು ತರಲೆಂದು ಅಂಗಡಿಗೆ ಹೋಗಿದ್ದು, ವಾಪಸ್ ಬಾರದೆ

ಕಾಣೆಯಾಗಿದ್ದಾರೆ.         ಕಾಣೆಯಾದ ಮಹಿಳೆಯ ಚಹರೆ ವಿವರ ಇಂತಿದೆ: ಹೆಸರು: ಶಂಕ್ರಮ್ಮ ಗಂಡ ಹನುಮೇಶ ತಳವಾರ (೨೦), ಎತ್ತರ ೫ ಅಡಿ, ಸಾಧಾರಣ ಮೈಕಟ್ಟು, ಸಾದಾ ಗೋದಿಗೆಂಪು ಮೈಬಣ್ಣ, ಕಪ್ಪು ಕೂದಲು, ಗೋಲು ಮುಖ ಹೊಂದಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ.  ಕಾಣೆಯಾದಾಗ ಕೆಂಪು ಬಣ್ಣದ ನಡುವಳಿ ಬಿಳಿ ಗರೆಗಳುಳ್ಳ ಸೀರೆ, ಆಕಾಶ ನೀಲಿ ಬಣ್ಣದ ಜಂಪರ್ ಧರಿಸಿದ್ದು, ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ ಕೊಪ್ಪಳ- ೦೮೫೩೯-೨೩೦೧೦೦ ಮತ್ತು ೨೩೦೨೨೨, ಪೊಲೀಸ್ ಇನ್ಸಪೆಕ್ಟರ್ ನಗರ ಪೊಲೀಸ್ ಠಾಣೆ – ೯೪೮೦೮೦೩೭೪೫, ನಗರ ಪೊಲೀಸ್ ಠಾಣೆ – ೦೮೫೩೯-೨೨೦೩೩ ಇಲ್ಲಿಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Related posts