ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಡಿ. 22 ೆ): ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವಿಠಲಾಪುರ ಗ್ರಾಮದ ಮಹಿಳೆ ಆಶಾ ಗಂಡ ಬಸವರಾಜ ಪಿನ್ನಿ ವಯಸ್ಸು 23 ವರ್ಷ, ಎಂಬ ಮಹಿಳೆಯು ಕೊಪ್ಪಳದ ಮಹಿಳಾ ಸಾಂತ್ವಾನ ಕೇಂದ್ರದಿಂದ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಹಿಳಾ ಸಾಂತ್ವಾನ ಕೇಂದ್ರ ಕೊಪ್ಪಳ ಕನಕಗಿರಿ ರವರು ಆಶಾ ಗಂಡ ಬಸವರಾಜ ಪಿನ್ನಿ ವಯಾ: 23 ವರ್ಷ ಸಾ. ವಿಠಲಾಪುರ ತಾ. ಕನಕಗಿರಿ ಈಕೆಯನ್ನು ಕೊಪ್ಪಳದ ಸ್ವಾಧಾರ ಕೇಂದ್ರಕ್ಕೆ ವರ್ಗಾಯಿಸಿದ್ದು, ಈ ಮಹಿಳೆಯು ಆಗಸ್ಟ್. 28 ರಂದು ಬೆಳಗ್ಗೆ 08 ಗಂಟೆ ಸುಮಾರಿಗೆ ಸ್ವಾಧಾರ ಕೇಂದ್ರದಲ್ಲಿರುವ ಶೌಚಾಯಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ವಾಪಾಸ ಬಾರದೇ ಎಲ್ಲಯೋ ಹೋಗಿ ಕಾಣೆಯಾಗಿದ್ದಾಳೆ. ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಣೆಯಾದ ಮಹಿಳೆಯ ಚಹರೆ ವಿವರ ಇಂತಿದೆ. ಆಶಾ ಗಂಡ ಬಸವರಾಜ ಪಿನ್ನಿ ವಯಸ್ಸು 23 ವರ್ಷ, ಎತ್ತರ 4.9 ಫೀಟ, ಸಾದಾರಣ ಮೈಕಟ್ಟು, ಕೋಲು ಮುಖ, ಕೆಂಪನೇಯ ಮೈ ಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದು, ಕಾಣೆಯಾದಾಗ ಬಿಳಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಈ ಮಹಿಳೆಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಕೊಪ್ಪಳ ಕಂಟ್ರೋಲ್ ರೂಂ.ನಂ. 08539-230100 & 230222, ನಗರ ಪೊಲೀಸ ಠಾಣೆ ಪೊಲೀಸ ಇನ್ಸಪೆಕ್ಟರ್ ಮೊ.ಸಂ. 9480803745, ಪೊಲೀಸ ಸಬ್ ಇನ್ಸಪೆಕ್ಟರ್ ಮೊ.ಸಂ. 9449995353, ನಗರ ಪೊಲೀಸ ಠಾಣೆ ದೂರವಾಣಿ ಸಂಖ್ಯೆ. 08539-220333 ಇಲ್ಲಿಗೆ ಮಾಹಿತಿ ನೀಡುವಂತೆ ತಿಳಿಸಿದೆ.

Please follow and like us:
error