ಮಹಿಳೆ ಕಾಣೆ : ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ ಅ. ೆ): ಕೊಪ್ಪಳ ತಾಲೂಕಿನ ಚುಕನಕಲ್ ಗ್ರಾಮದ ನಿವಾಸಿ ಯಶೋಧ @ ರಾಜೇಶ್ವರಿ ಗಂಡ ರಾಜಪ್ಪ ವಡ್ರ (30) ಎಂಬ ಮಹಿಳೆ ಸೆ. 23 ರಂದು ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯ ಎಸ್.ಹೆಚ್.ಓ (ಎಂ) ಅವರು ಸಾರ್ವಜನಿಕರಲ್ಲಿ ಮನವಿ

ಮಾಡಿದ್ದಾರೆ.
ಯಶೋಧ @ ರಾಜೇಶ್ವರಿ ಗಂಡ ರಾಜಪ್ಪ ವಡ್ರ (30) ಎಂಬ ಮಹಿಳೆ ಸೆ. 23 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಚುಕನಕಲ್ ಗ್ರಾಮದ ಮನೆಯಿಂದ ಹೋಗಿದ್ದು, ವಾಪಸ್ ಬಾರದೆ ಕಾಣೆಯಾಗಿದ್ದಾಳೆ. ಕಾಣೆಯಾದ ಮಹಿಳೆಯ ಚಹರೆ ವಿವರ ಇಂತಿದೆ, ಯಶೋಧ @ ರಾಜೇಶ್ವರಿ ಗಂಡ ರಾಜಪ್ಪ ವಡ್ರ (30), ಎತ್ತರ 5.2 ಫೀಟ್, ತಳ್ಳನೆಯ ಮೈಕಟ್ಟು, ಕಪ್ಪು ಮೈಬಣ್ಣ, ಕಪ್ಪು ತಲೆ ಕೂದಲು, ದುಂಡು ಮುಖ ಹೊಂದಿದ್ದು, ಕಾಣೆಯಾದಾಗ ಹಸಿರು ಬಣ್ಣದ ಹೂ ಡಿಸೈನ್‍ವುಳ್ಳ ಸೀರೆ ಮತ್ತು ಹಸಿರುಬಣ್ಣದ ರವಿಕೆ ಧರಿಸಿದ್ದು, ಕನ್ನಡ ಹಾಗೂ ತಮಿಳು ಭಾಷೆಯನ್ನು ಮಾತನಾಡುತ್ತಾಳೆ.
ಈ ಮಹಿಳೆಯ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಪಿ.ಎಸ್.ಐ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ – 08539-221333, 9480803746, ಗ್ರಾಮೀಣ ಸಿ.ಪಿ.ಐ – 9480803731, ಡಿ.ವೈ.ಎಸ್.ಪಿ 08539-230342, 9480803720, ಕೊಪ್ಪಳ ಎಸ್.ಪಿ – 08539-230111 ಹಾಗೂ ಜಿಲ್ಲಾ ಕಂಟ್ರೋಲ್ ರೂಂ – 08539-22022-100, ಇಲ್ಲಿಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
(ಫೋಟೋ – ಯಶೋಧ @ ರಾಜೇಶ್ವರಿ)

Please follow and like us:
error