ಮಹಿಳೆಯ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸಿ – ಎಂ. ಸರ್ವಮಂಗಳ


ಕೊಪ್ಪಳ : ಮಾ.೮ ಮಹಿಳೆಯ ಸಾಧನೆಗಳನ್ನು ಗುರುತಿಸಿ ವಿವಿಧ ಅವಕಾಶಗಳನ್ನು ಒದಗಿಸಿ ಪ್ರೋತ್ಸಾಹಿಸುವುದೇ ನಿಜವಾದ ಅರ್ಥದಲ್ಲಿ ಮಹಿಳೆಯ ದಿನಾಚರಣೆ ಮಹಿಳೆ ತನ್ನ ಉನ್ನತಿಯನ್ನು ತಾನೇ ಸಾಧಿಸಬೇಕಾಗಿದೆ ಎಂದು ಎಂ. ಸರ್ವಮಂಗಳ ಹೇಳಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದಲ್ಲಿ ಏರ್ಪಡಿಸಿದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸಂಚಾಲಕಿ ಬಿ.ಕೆ. ಯೋಗಿನಅಕ್ಕನವರು ಪ್ರವಚನ ನೀಡುತ್ತಾ ಇಂದು ಮಹಿಳೆಯರು ಶಿಕ್ಷಣ ಸಔಲಭ್ಯ ಪಡೆದು ಉದ್ಯೋಗಸ್ಥರಾಗಿದ್ದಾರೆ. ಆರ್ಥಿಕವಾಗಿ ಸ್ವಾವಲಂಬಿಗಳು ಸಹ ಆಗಿದ್ದಾರೆ. ಆದರೆ ಚರ್ತಮಾನ ಸಮಯದಲ್ಲಿ ವಿವಿಧ ಸಮಸ್ಯಗಳಾದ ಆನಾರೋಗಯ, ಮಾನಸಿಕ ಒತ್ತಡ, ಅನೈತಿಕತೆ ಮೊದಲಾದ ನಕರಾತ್ಮಕ ಪ್ರವೃತ್ತಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಮಹಿಳೆಯರು ಜೀವನದಲ್ಲಿ ನೆಮ್ಮದಿ ಕಡಿಮೆಯಾಗಿದೆ. ಇಂದು ಮಹಿಳೆಯರು ಶಾರೀರಿಕ ಯೋಗ ಇತ್ಯಾದಿಗಳಲ್ಲಿ ಭಾಗವಹಿಸುತ್ತಿದ್ದರೂ ಪರಿಣಾಮಕಾರಿಯಾದ ಆಧ್ಯಾತ್ಮಿಕ ಅಭ್ಯಾಸವು ಅಗತ್ಯವಾಗಿದೆ ಅದಕ್ಕಾಗಿ ಈಶ್ವರಿ ವಿಶ್ವ ವಿದ್ಯಾಲಯವು ಸರಳವಾಗಿ ಆಧ್ಯಾತ್ಮಿಕ ಜ್ಞಾನ ಬೆಳಕನ್ನು ನೀಡಿ ನಿತ್ಯ ಜೀವನದಲ್ಲಿ ಶಾಮರಿಯನ್ನು ಪಡೆಯಲು ಮಾರ್ಗವನ್ನು ಬೋಧಿಸುತ್ತದೆ ಇದರ ಪೂರ್ಣ ಸದುಪಯೋಗವನ್ನು ಎಲ್ಲ ಮಹಿಳೆಯರು ಪಡೆಯಬೇಕಾಗಿದೆ ಎಂದರು.
ಮುಖ್ಯಅತಿಥಿಯಾಗಿ ಆಗಮಿಸಿದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಲಲಿತಾ ರವರು ಮಾತನಾಡಿ ಆಧ್ಯಾತ್ಮ ಜ್ಞಾನ ಮಹಿಳೆಯರ ಶ್ರೇಷ್ಠ ಸಂಸ್ಕಾರವನ್ನು ರೂಢಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ೩೫ ವರ್ಷಗಳಿಂದ ಪಲ್ಸ್ ಪೋಲಿಯೋ ಹನಿ ಹಾಕುವ ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ಡಾ|| ರಾಧಾ ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಡಾ|| ಚಂದ್ರಕಲಾ, ಅನ್ನಪುರ್ಣ ಮಾಹಾಂತಯ್ಯನಮಠ, ಮಮತಾ ಶೆಟ್ಟರ ಸೇರಿದಂತೆ ಇತರರು ಇದ್ದರು.

Please follow and like us:
error