fbpx

ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೈನುಗಾರಿಕೆ ಅತ್ಯವಶ್ಯಕ : ಶಾಸಕ ಕೆ. ರಾಘವೇಂದ್ರ ಹಿಟ್ನಾಳ

ಕೊಪ್ಪಳ : ೨೬ ಕೊಪ್ಪಳ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಕಾಟ್ರಳ್ಳಿ ಗ್ರಾಮದಲ್ಲಿ ಶಾಸಕರ ಅನುದಾನ ಹಾಗೂ ಕೆ.ಎಮ್.ಎಫ್ ಅನುದಾನದಲ್ಲಿ ನಿರ್ಮಿಸಿದ ಸುಮಾರು ೧೦.೦೦ ಲಕ್ಷದ ಹಾಲು ಉತ್ಪಾದಕರ ಡೈರಿ ಕಟ್ಟಡ ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳರವರು ಹೈನುಗಾರಿಕೆಯು ಮೊದಲು ರೈತರ ಉಪಕಸುಬಾಗಿತ್ತು, ಇಂದು ಪ್ರತಿ ಗ್ರಾಮದಲ್ಲಿ ಗ್ರಾಮಿಣ ಜನರನ್ನು ಹಸ್ಸನ್ನಾಗಿ ಮಾಡಲು ಮೂಲ ಕಸಬಾಗಿ ಮಾಡಲ್ಪಟಿದೆ. ಗ್ರಾಮೀಣ ಬಾಗದಲ್ಲಿ ಇರುವ ಅನೇಕ ವಿದ್ಯಾವಂತರು ಸರಕಾರಿ ನೌಕರಿಗಳಿಗೆ ಹೋಗದೆ ಉತ್ತಮ ತಳಿಯ ರಾಸುಗಳನ್ನು ಪಡೆದು ಪ್ರತಿ ತಿಂಗಳು ರೂ. ೮೦೦೦-೧೦೦೦೦ ಸಾವಿರವರೆಗೆ ಆದಾಯ ಬರುವಂತೆ ಹೈನುಗಾರಿಕೆಯಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿ ೧೮ ವರ್ಷ ಮೇಲ್ಪಟ್ಟ ಯುವಕ -ಯುವತಿಯರಿಗೆ ಅಂದಿನ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಪಶುಭಾಗ್ಯ ಯೋಜನೆ ನೀಡುವ ಮೂಲಕ ರೂ. ೧ ಲಕ್ಷ ೨೦ ಸಾವಿರಗಳನ್ನು ಸಹಾಯ ಧನವನ್ನು ನೀಡಿ ಹೈನುಗಾರಿಕೆಗೆ ಸಹಾಯ ಹಸ್ತ ನೀಡಿದ್ದರು. ವಿಶೇಷವಾಗಿ ರಾಸುಗಳನ್ನು ಕರಿದಿ ಮಾಡುವಾಗ ಗುಣಮಟ್ಟದ ರಾಸುಗಳಾದ ಘೀರು ತಳಿ, ಎಫ್.ಎಮ್ ತಳಿ, ಕರ್ನಾಟಕದ ದೇಶಿ ತಳಿಗಳು ಮತ್ತು ಮಹಾರಾಷ್ಟ್ರದ ಹಲುವು ವಿಶೇಷವಾದ ತಳಿಗಳನ್ನು ಕೊಂಡುಕೊಂಡು ಅವುಗಳು ಸುಮಾರು ೩೦೦-೩೫೦ಕೆ.ಜಿ ಇರುವ ರಾಸಗಳನ್ನು ಕರಿದಿ ಮಾಡಬೇಕು. ಇಡೀ ಜಗತ್ತಿನಲ್ಲೇ ನಮ್ಮ ಭಾರತವು ಹೈನುಗಾರಿಕೆಯಲ್ಲಿ ಪ್ರಥಮ ಸ್ಥಾನವನ್ನು ಹೊಂದಿದ್ದು ಬ್ರೆಜಿಲ್ ನಂತರದ ಸ್ಥಾನದಲ್ಲಿದೆ. ಗ್ರಾಮೀಣ ಭಾಗದ ಯುವಜನತೆ ನಗರ/ಪಟ್ಟಣದ ಶೈಲಿಗೆ ಆಕರ್ಷಣೆಗೆ ಒಳಗಾಗದೆ ತಮ್ಮ ಗ್ರಾಮದಲ್ಲಿಯೆ ಹೈನುಗಾರಿಕೆಗೆ ಹೆಚ್ಚು ಒಲವು ನೀಡಿ ಆರ್ಥಿಕ ಸ್ವಾವಲಂಬನೆ ಪಡೆಯಬೇಕೆಂದು ವಿಶೇಷವಾಗಿ ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಬೇಕೆಂದು ಕರೆ ನೀಡಿದರು.ಈ ಸಂದಂರ್ಭದಲ್ಲಿ ಮಾತನಾಡಿದ ಸಂಸದ ಕರಡಿ ಸಂಗಣ್ಣನವರು ಕೃಷಿ ಹಾಗೂ ಹೈನುಗಾರಿಕೆಯು ಒಂದೆ ನಾಣ್ಯದ ಎರಡು ಮುಖಗಳಿದಂತೆ, ಅದಕ್ಕಾಗಿ ಯುವಕರು ಹಾಗೂ ಮಹಿಳೆಯರು ಕೃಷಿಯೊಂದಿಗೆ ಹೈನುಗಾರಿಕೆಯ ಚಟುವಟಿಕೆಗಳಲ್ಲಿ ಪಾಲ್ಗೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಕರೆ ನೀಡಿದರು.ಈ ಸಂದಂರ್ಭದಲ್ಲಿ ಕೆ.ಎಮ್.ಎಫ್ ಮಾಜಿ ಅಧ್ಯಕ್ಷ ವೆಂಕನಗೌಡ್ರ ಹಿರೇಗೌಡ್ರ, ಮಾಜಿ ಜಿಪಂ ಸದಸ್ಯ ಈಶಪ್ಪ ಮಾದನೂರ, ತಾಪಂ ಅಧ್ಯಕ್ಷ ಬಾಲಚಂದ್ರನ್, ತಾಪಂ ಸದಸ್ಯ ನಿಂಗಪ್ಪ ಯತ್ನಟ್ಟಿ, ಮುಖಂಡರುಗಳಾದ ಕೇಶವ ರೆಡ್ಡಿ, ಗಾಳೆಪ್ಪ ಪೂಜಾರ ಹಾಗೂ ಗ್ರಾಮದ ಗುರು-ಹಿರಿಯರು, ಮುಖಂಡರುಗಳು ಯುವಕರು ಮಹಿಳೆಯರು ಮತ್ತು ಮಾದ್ಯಮ ವಕ್ತಾರಾದ ಕುರಗೋಡ ರವಿ ಹಾಗೂ ಇನ್ನೀತರರು ಉಪಸ್ಥಿತರಿಸದ್ದರು.

Please follow and like us:
error
error: Content is protected !!