ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು

ಮಹಿಳೆಗೆ ಹಿಗ್ಗಾಮುಗ್ಗ ಥಳಿಸುತ್ತಿದ್ದರೂ ಸುಮ್ಮನೆ ನೋಡುತ್ತಾ ನಿಂತ ಜನರ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿತ್ತು ಆದರೆ ಈ ಥಳಿತದ ಹಿಂದಿನ ಸುದ್ದಿ ಕೇಳಿದರೇ ನೀವೆ ಆಶ್ಚರ್ಯಪಡುತ್ತೀರ. ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ ಪಕ್ಕದ ಬಾರ್ ಮತ್ತು ರೆಸ್ಟೋರೆಂಟ್ ಗಳಿರುವ ಸಂದಿಯಲ್ಲಿ ಇಂತಹದ್ದೊಂದು ಘಟನೆ ನಿನ್ನೆ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಅಮಾನವೀಯವಾಗಿ ಮಹಿಳೆಯನ್ನು ಥಳಿಸುತ್ತಿರುವ ದೃಶ್ಯಗಳನ್ನು ನೋಡಿದರೆ ಯಾರಿಗಾದರೂ ರೋಷ ಉಕ್ಕಿ ಬರುತ್ತೆ. ಹಗಲು ಹೊತ್ತಿನಲ್ಲಿಯೇ ಈ ರೀತಿ ಅಟ್ಟಾಡಿಸಿ ದರದರ ಎಳೆದುಕೊಂಡು ಹೋಗಿ ಹೊಡೆಯುತ್ತಿದ್ದರೂ ಅಕ್ಕಪಕ್ಕದಲ್ಲಿಯ ಜನ ತಡೆಯದೇ ಇರುವದು ಎಲ್ಲರಲ್ಲಿ ಸಿಟ್ಟು ತರಿಸಿತ್ತು. ಆದರೆ ಅಲ್ಲಿ ನಡೆದ ಸಂಗತಿಯೇ ಬೇರೆ

ನಿನ್ನೆ ಸಂಜೆ ಹಳ್ಳಿಯ ವ್ಯಕ್ತಿಯೊಬ್ಬ ತನ್ನಲ್ಲಿದ್ದ ದುಡ್ಡನ್ನು ಎಣಿಸುತ್ತಾ ಕುಳಿತಿದ್ದಾನೆ ಈ ಸಂದರ್ಭದಲ್ಲಿ ಈ ಮಹಿಳೆ ಜೊತೆ ಇನ್ನೊರ್ವ ಮಹಿಳೆ ಹಾಗೂ ಓರ್ವ ಪುರುಷ ಬಂದು ಆತನ ಪಕ್ಕ ಕುಳಿತಿದ್ದಾರೆ. ಆ ವ್ಯಕ್ತಿಯ ಜೊತೆ ಮಾತನಾಡಿದಂತೆ ಮಾಡಿ ಪುಸಲಾಯಿಸುತ್ತಾ ಈ ಮಹಿಳೆ ಅವನ ದುಡ್ಡಿಗೆ ಕೈ ಹಾಕಿದ್ಧಾಳೆ. ಇದರಿಂದ ಸಿಟ್ಟಿಗೆದ್ದ ಆ ಹಳ್ಳಿಯ ವ್ಯಕ್ತಿ ಇವರನ್ನು ತರಾಟೆಗೆ ತೆಗೆದುಕೊಂಡಾಗ ಮಹಿಳೆ ಇವನ ಮೇಲೆಯೇ ಜೋರು ಮಾಡಿದ್ದಾಳೆ. ಇದರಿಂದ ಅಕ್ಕಪಕ್ಕದವರು ಸೇರಿ ಅವರನ್ನು ಬೈಯ್ದಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಇದ್ದಾಗ ಮಹಿಳೆ ಮತ್ತು ತಂಡದವರ ಏಟು ಹಾಕಿದ್ಧಾರೆ. ಇನ್ನೂ ನಮ್ಮ ತಂತ್ರ ನಡೆಯೋಲ್ಲ ಎಂದುಕೊಂಡು ಇನ್ನೊರ್ವ ಮಹಿಳೆ ಹಾಗೂ ಪುರುಷ ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಸಿಕ್ಕಿ ಬಿದ್ದದ್ದು ಈ ಮಹಿಳೆ . ಸಿಟ್ಟಿಗೆದ್ದ ಜನ ಇವಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಸ್ ಸ್ಟಾಂಡ್ ಅಕ್ಕಪಕ್ಕದಲ್ಲಯೇ ಬಾರ್ ಮತ್ತು ರೆಸ್ಟೋರೆಂಟ್ ಗಳಿವೆ ಇಲ್ಲಿ ಕುಡುಕರ ಕಾಟವೂ ಜಾಸ್ತಿ ಅಲ್ಲದೇ ಈ ಭಾಗದಲ್ಲಿ ವೇಶ್ಯಾವಾಟಿಕೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಭ್ಯರನ್ನೂ ಮುಜುಗರಕ್ಕೀಡು ವೇಶ್ಯೆಯರ ಕಾಟವೂ ಹೆಚ್ಚಿದೆ. ಕುಡಿದ ಅಮಲಿನಲ್ಲಿ ಹೊಡೆದಾಟಗಳೂ ನಡೆಯುತ್ತವೆ.

Please follow and like us:
error