ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಿ- ಮನಿಯಾರ್

ಗಂಗಾವತಿ.ಮೇ 20
ಗಂಗಾವತಿ ಇಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಲಿ ನಗರಸಭೆ ಸದಸ್ಯರಾದ ಶಾಮೀದ್ ಮನಿಯಾರ್ ಕಾರ್ಯಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಲಿ ನಗರಸಭೆ ಸದಸ್ಯರಾದ ಶಾಮೀದ್ ಮನಿಯರ್ ಮಾತನಾಡಿ ರಾಜ್ಯದಲ್ಲಿ ಇರುವ ಮಹಿಳಾ ಸ್ವ-ಸಹಾಯ ಗುಂಪುಗಳಲ್ಲಿ ಪಡೆದಿರುವ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರಿಗೆ ಹಾಗೂ ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮತ್ತು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನವರಿಗೆ ಸರಕಾರಕ್ಕೆ
ಮನವಿಯನ್ನು ಕೊರಿಯರ್ ಮ‌ೂಲಕ ಮನವಿಯನ್ನು ಮಾಡಿಲಾಗಿತ್ತು
ಸಂಭಂಧಿಸಿದಂತೆ ಪ್ರಸ್ತುತ ರಾಜ್ಯದಲ್ಲಿ ಕೋಪಡ್-19 ಮಹಾಮಾರಿ ಸೋಂಕು
ವ್ಯಾಪಕವಾಗಿ ಹರಡುತ್ತಿದ್ದು ಇದರಿಂದ ದಿನಗೂಲಿ ಕಾರ್ಮಿಕರು, ರೈತರು, ಬಡವರು, ಮಹಿಳೆಯರು ಹಾಗೂ ಶ್ರಮಿಕರು
ಕೆಲಸವಿಲ್ಲದೆ ತುತ್ತು ಅನ್ನಕ್ಕಾಗಿ ಪರದಾಡುವ ಪಲಸ್ಥಿತಿ ಕಳೆದ 4 ತಿಂಗಳುಗಳಿಂದ ಆಗುತ್ತಿದ್ದು, ಕಾರಣ ರಾಜ್ಯದಲ್ಲಿ ಇರುವ
ಸ್ವ-ಸಹಾಯ ಮಹಿಳಾ ಗುಂಪುಗಳು ಸಾಲ ಪಡೆದಿರುವ ಗುಂಪುಗಳಿಗೆ ಮೈಕ್ರೋ ಫೈನಾನ್ಸ್ ಏಜೆನ್ಸಿಗಳು ಈಗಾಗಲೆ
ಹಣ ಉಸುಲಿಗಾಗಿ ಜನರಿಗೆ ತೊಂದರೆಕೊಡುತ್ತಿದ್ದು ಕಾರಣ ಸದರಿ ಸಂಘಗಳ ಕನಿಷ್ಠ ರೂ. 50.000/- ಒಳಗಿನ ಸಾಲ ಪಡೆದಿರುವ ಸಂಘಗಳ ಫಲಾನುಭವಿಗಳ ಸಾಲವನ್ನು ಸರ್ಕಾರದಿಂದ ಮನ್ನಾ ಮಾಡಿಸಿಬೇಕು ಬಡವರ ಮುಂದಿನ ಜೀವನ
ಸುಗಮವಾಗಿ ನಡೆಸಲು ಅನುಕೂಲ ಕಲ್ಪಿಸಿಕೊಡಲು ತಮ್ಮಲ್ಲ ಮನವಿಯನ್ನು ಕೊರಿಯರ್ ಮೂಲಕ ನೀಡಲಾಯಿತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಾಮೀದ್ ಮನಿಯಾರ್ ಹೇಳಿದರು

ಈ ಸಂದರ್ಭಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸೈಯದ್‌ ಅಲಿ ಅಯೂಬುಖಾನ್ ಸೈಯದ್ ನಿಜಾಮದ್ದಿನ್ ಸಾಧಿಕ್ ಮೌಲಾನ್ ಸೇರಿದಂತೆ ಇತ್ತರರು ಇದ್ದರು

Please follow and like us:
error