ಮಹಿಳಾ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥಸಂಚಲನ

ಕೊಪ್ಪಳ :   ಕೊಪ್ಪಳ ಜಿಲ್ಲಾ ಪೊಲೀಸ್ ನ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ 8ನೇ ತಂಡದ ಮಹಿಳಾ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮವನ್ನು ಮಾರ್ಚ್.15 ರಂದು ಬೆಳಿಗ್ಗೆ 8.30 ಗಂಟೆಗೆ ಹಮ್ಮಿಕೊಳ್ಳಲಾಗಿತ್ತು..ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು

ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್ಪಿ ಟಿ.ಶ್ರೀಧರ್  ಇತಿಹಾಸ ಪ್ರಸಿದ್ದ ಕೋಪಣ ನಗರ ಎಂದೇ ಖ್ಯಾತಿ ಪಡೆದ ಮತ್ತು ಸ್ವಾತಂತ್ರ ಸಂಗ್ರಾಮದಲ್ಲಿ ಮಹತ್ವವಾದ ಪಾತ್ರವಹಿಸಿದ ಕೊಪ್ಪಳ ಜಿಲ್ಲೆಯ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆಯ 08 ನೇ ತಂಡದ ಜೈಲ್ ವಾರ್ಡರ್ ಮಹಿಳಾ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿಯ ನಿರ್ಗಮನ ಪಥ ಸಂಚಲನದ ಈ ಶುಭ ಸಮಾರಂಭದಲ್ಲಿ ತರಬೇತಿಯ ಸಂಪೂರ್ಣ ವರದಿಯನ್ನು ತಮ್ಮ ಮುಂದೆ ಹೇಳಲು ನನಗೆ ಹರ್ಷವೆನಿಸುತ್ತದೆ . ಈ ತರಬೇತಿ ಶಾಲೆಯು 2005 ನೇ ಸಾಲಿನಲ್ಲಿ

ಪ್ರಾರಂಭಗೊಂಡಿದ್ದು ಅಲ್ಲಿಂದ ಇಲ್ಲಿಯವರಿಗೆ 08 ತಂಡಗಳಿಂದ ಒಟ್ಟು 728 ಪ್ರಶಿಕ್ಷಣಾರ್ಥಿಗಳಿಗೆ ಬುನಾದಿ ತರಬೇತಿಯನ್ನು ನೀಡಲಾಗಿದೆ , ಅದರಲ್ಲಿ 434 ನಾಗರೀಕ ಪೊಲೀಸ್ ಪ್ರತೀಕ್ಷಣಾರ್ಥಿಗಳು , 162 ಸಶಸ್ತ್ರ ಪೊಲೀಸ್ ಪ್ರಶಿಕ್ಷಣಾರ್ಥಿಗಳು , ಹಾಗೂ 104 ನಾಗರೀಕ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿಯನ್ನು ನೀಡಲಾಗಿರುತ್ತದೆ . ಹಾಲಿ ಪೊಲೀಸ್ ತರಬೇತಿ ಶಾಲೆಗೆ ಕಾರಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಿಂದ ಒಟ್ಟು 30 ಜನ ಪ್ರಶಿಕ್ಷಣಾರ್ಥಿಗಳು ಹಂಚಿಕೆಯಾಗಿದ್ದು , ಅದರಲ್ಲಿ 28 ಜನ ಪ್ರಶಿಕ್ಷಣಾರ್ಥಿಗಳು ದಿ : 15-06-2020 ರಂದು ತರಬೇತಿಗೆ ವರದಿ ಮಾಡಿಕೊಂಡಿದ್ದು , ಒಬ್ಬ ಪ್ರಶಿಕ್ಷಣಾರ್ಥಿಯವರು ತುಮಕೂರ ಜಿಲ್ಲೆಗೆ ನಾಗರೀಕ ಪೊಲೀಸ್ ಕಾನ್ಸಟೇಬಲ್ ಆಯ್ಕೆಯಾಗಿ ರಾಜೀನಾಮೆ ನೀಡಿರುತ್ತಾರೆ . ದಿನಾಂಕ : 15-06-2020 ರಿಂದ ಮೂಲ ಬುನಾದಿ ತರಬೇತಿಯನ್ನು ಪ್ರಾರಂಭಿಸಿ ಈ ದಿನ 15-03-2021 ರಂದು ಅಂತಿಮ ನಿರ್ಗಮನ ಪಥ ಸಂಚಲನದಲ್ಲಿ 27 ಜನ ಜೈಲ್ ವಾರ್ಡರ್ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದಾರೆ . ಈ ತಂಡದಲ್ಲಿನ ಪ್ರಶಿಕ್ಷಣಾರ್ಥಿಗಳ ಪೈಕಿ 04 ಜನ ಸ್ನಾತಕೋತ್ತರ ಪದವಿದರರು , 20 ಜನ ಪದವಿಧರರು , ಒಬ್ಬರು ಬಿ.ಇ .. 02 ಜನ ಪಿ.ಯು.ಸಿ. ವಿದ್ಯಾರ್ಹತೆಯನ್ನು ಹೊಂದಿರುತ್ತಾರೆ . ಸದರಿ ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ಶಾಲೆಯ ವೇಳಾ ಪಟ್ಟಿಯಂತೆ ಬೆಳಿಗ್ಗೆ 06:00 ರಿಂದ ಪಿ.ಟಿ. ಪುಟ್ ಡೀಲ್ , ಆರ್ಮ್‌ ಡೀಲ್ ಮತ್ತು ದೈಹಿಕ ಕವಾಯತುಗಳ ತರಬೇತಿಯನ್ನು ನೀಡಲಾಗಿರುತ್ತದೆ . ನಂತರ ಬೆಳಿಗ್ಗೆ 09:30 ರಿಂದ ಮದ್ಯಾಹ್ನ 01:30 ರವರೆಗೆ ಒಳಾಂಗಣ ವಿಷಯಗಳ ಬಗ್ಗೆ ಬೋಧನೆ ಮಾಡಿಸಲಾಗಿರುತ್ತದೆ . ರಿಂದ 06:00 ರವರೆಗೆ ಹೊರಾಂಗಣ ವಿಷಯಗಳ ತರಬೇತಿಯನ್ನು ನೀಡಲಾಗಿರುತ್ತದೆ . ಒಳಾಂಗಣ ತರಬೇತಿ : ಒಳಾಂಗಣ ತರಬೇತಿ ವಿಷಯಕ್ಕೆ ಸಂಬಂಧಿಸಿದಂತೆ ನುರಿತ ಹಿರಿಯ ಪೋಲೀಸ್ ಅಧಿಕಾರಿಗಳು , ಮಹಾವಿದ್ಯಾಲಯದ ನುರಿತ ಅತಿಥಿ ಉಪನ್ಯಾಸಕರಿಂದ ಮತ್ತು ಕಾರಾಗೃಹದ ಹಿರಿಯ ಅಧಿಕಾರಿಗಳಿಂದ , ನ್ಯಾಯವಾದಿಗಳಿಂದ ಕಾನೂನು ವಿಷಯಗಳು , ಕರ್ನಾಟಕ ಕಾರಗೃಹ ಕೈಪಿಡಿ -1978 & ಕರ್ನಾಟಕ ಕಾರಗೃಹ -1974 ಕಾನೂನುಗಳ , ಮನ : ಶಾಸ್ತ್ರ , ಅಪರಾದ ಶಾಸ್ತ್ರ , ಬಲಿಪಶು ಶಾಸ್ತ್ರ , ಶಿಕ್ಷಾ ಶಾಸ್ತ್ರ , ಭಾರತೀಯ ದಂಡ ಸಂಹಿತೆ , ದಂಡ ಪ್ರಕ್ರೀಯಾ ಸಂಹಿತೆ , ವಿಶೇಷ ಮತ್ತು ಸ್ಥಳೀಯ ಕಾನೂನು , ಭಾರತೀಯ ಸಂವಿಧಾನ & ಮಾನವ ಹಕ್ಕುಗಳು , ಸಮಾಜ ಶಾಸ್ತ್ರ & ಸಾಮಾಜಿಕ ಕಾರ್ಯಗಳು , ಕಂಪ್ಯೂಟರ್ & ವೈರಲೆಸ್ , ಕರ್ನಾಟಕ ನಾಗರಿಕ ಸೇವೆಗಳು & ಆಡಳಿತ ಕಛೇರಿ , ಪ್ರಥಮ ಚಿಕಿತ್ಸೆ , ಬೆರಳು ಮುದ್ರೆ , ಈ ಎಲ್ಲಾ ವಿಷಯಗಳ ಬಗ್ಗೆ ವಿಶೇಷ ತರಬೇತಿಯನ್ನು ನೀಡಲಾಗಿದೆ

ಪ್ರಶಿಕ್ಷಣಾರ್ಥಿಗಳಿಗೆ ಅಗ್ನಿಶಾಮಕ ಅಧಿಕಾರಿಗಳಿಂದ ಅಗ್ನಿ ಶಾಮಕದ ಜ್ಞಾನ , ಮಾವ ರಿಡೀಂಗ್ , ವೈದ್ಯಾಧಿಕಾರಿಗಳಿಂದ ಪ್ರಥಮ ಚಿಕಿತ್ಸೆ , ವಿಧಿ ವಿಜ್ಞಾನ ಪ್ರಯೋಗಾಲಯ , ಹಾಗೂ ಪಶು ವೈದ್ಯಾಧಿಕಾರಿಗಳಿಂದ ಕಾರಾಗೃಹದಲ್ಲಿ ಹೈನುಗಾರಿಕೆ , ಪಶುಗಳ ನಿರ್ವಹಣೆ & ರೋಗ ರುಜನಿಗಳ ಬಗ್ಗೆ ಮಾಹಿತಿ , ತೋಟಗಾರಿಕೆ & ವ್ಯವಸಾಯ , ಬಾಲ ನ್ಯಾಯ ಮಂಡಳಿ , ಬಾಲ ಮಂದಿರ . ವಿಶೇಷ ಮಕ್ಕಳ ಹಕ್ಕುಗಳು ಮತ್ತು ಹಿರಿಯ ನಾಗರೀಕರ ಹಕ್ಕುಗಳು , ಎನ್.ಜಿ.ಓ , ವರ್ಕರ್ , ವಿದ್ಯುತ್ ನಿರ್ವಹಣೆ & ರಿಪೇರಿ , ವಾಹನಗಳ ನಿರ್ವಹಣೆ ಮತ್ತು ರಿಪೇರಿ , ಆಪ್ತ ಸಮಾಲೋಚನೆ . ವ್ಯಕ್ತಿತ್ವ ವಿಕಸನ ಶಿಬಿರ & ಕರ್ತವ್ಯದಲ್ಲಿ ಭ್ರಷ್ಟಾಚಾರ ರಹಿತ ಕರ್ತವ್ಯ ನಿರ್ವಹಿಸಬೇಕಾದ ಆದರ್ಶ ಹಾಗೂ ಮನೋಬಲಗಳ ಕುರಿತು ಪ್ರಶಿಕ್ಷಣಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಲಾಗಿದೆ . ಹೊರಾಂಗಣ ತರಬೇತಿ : ಪ್ರಶಿಕ್ಷಣಾರ್ಥಿಗಳಿಗೆ ಹೊರಾಂಗಣ ವಿಷಯದಲ್ಲಿ ಪಿ.ಟಿ ಫುಟ್ ಲಾಠಿ ಡ್ರಿಲ್ , ಟಿಯರ್ ಗ್ಯಾಸ್ , ದೂಂಬಿ ನಿಯಂತ್ರಣ ಕಾರ್ಯಾಚರಣೆ , ಫೀಲ್ಡ್ ಕ್ರಾಫ್ಟ್ , ಸೆರಮೋನಿಯಲ್ ಪರೇಡ್ , ಅಡೆ – ತಡ ಓಟ ಯು.ಎ.ಸಿ. ( ಅನ್ ಆರ್ಮಡ್ ಕಾಂಬ್ಯಾಟ್ ) ಯೋಗ , ಟ್ರಾಕಿಂಗ್ , ಸ್ಫೋಟಕ ವಸ್ತುಗಳ ಪತ್ತೆ ಹಾಗು ತತಕ್ಷಣ ಕೈಗೊಳ್ಳಬೇಕಾದ ಸೂಕ್ತ ಕ್ರಮಗಳು , ಡಿ.ಎಫ್.ಎಂ.ಡಿ ಮತ್ತು ಹೆಚ್.ಹೆಚ್.ಎಂ.ಡಿ ಉಪಯೋಗಿಸುವ ಬಗ್ಗೆ ರಸ್ತೆ ತರಬೇತಿಯಲ್ಲಿ .22 ರೈಫಲ್ , 410 ಮಸ್ಕಟ್ , 303 ರೈಫಲ್ , 7.62 ಎಂ.ಎಂ ಎಸ್.ಎಲ್.ಆರ್ ಇನ್ಸಾಸ್ , ಎ.ಕೆ .47 , 9 ಎಂ.ಎಂ.ಪಿಸ್ತೂಲ್ ಗನ್ , ಗ್ಲಾಕೋ ಪಿಸ್ತೂಲ್ ಗಳು ಮುಂತಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಉಪಯೋಗ ಹಾಗು ನಿರ್ವಹಣೆಗಳ ಬಗ್ಗೆ ಸಂಪೂರ್ಣ ತರಬೇತಿ ನೀಡಲಾಗಿದೆ ಹಾಗು ಪ್ರತಿ ದಿನ ಪ್ರಶಿಕ್ಷಣಾರ್ಥಿಗಳನ್ನು ದೈಹಿಕವಾಗಿ ಸದೃಢರನ್ನಾಗಿಸಲು ವಿವಿಧ ಕ್ರೀಡೆಗಳು ರೂಡ್‌ ವಾಕ್‌ ಆ್ಯಂಡ್ ರನ್ & ಬೈಕ ರೈಡಿಂಗ್ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇರುತ್ತದೆ . ಕ್ಷೇತ್ರ ಭೇಟಿ : ತರಬೇತಿ ಶಾಲೆಯ ವೇಳಾ ಪಟ್ಟಿ ಪ್ರಕಾರ ಪ್ರಶಿಕ್ಷಣಾರ್ಥಿಗಳಿಗೆ ಕೊಪ್ಪಳ ಜಿಲ್ಲಾ ಕಾರಗೃಹ ಜಿಲ್ಲಾ ಪೊಲೀಸ್ ಕಛೇರಿ ಓ.ಎ.ಆರ್ ಘಟಕ , ನಗರ ಠಾಣೆ & ಮಹಿಳಾ ಠಾಣೆ , ಜಿಲ್ಲಾ ಅಗ್ನಿ ಶಾಮಕ ಠಾಣೆ , ಸಂಚಾರಿ ಠಾಣೆ , ಜಿಲ್ಲಾ ನಿಸ್ತಂತು ಘಟಕ , ವಿಶೇಷ ಘಟಕಗಳು , ಜಿಲ್ಲಾ ಆಸ್ಪತ್ರೆ , ಐ.ಆರ್.ಬಿ. & ಕೆ.ಎಸ್.ಆರ್.ಪಿ. ತರಬೇತಿ ಶಾಲೆ .ಮುನಿರಾಬಾದ , ಜಿಲ್ಲಾ ಬಾಲ ಮಂದಿರ , ಬಾಲ ನ್ಯಾಯ ಮಂಡಳಿ , ವಿದ್ಯುತ್ ಪವರ್ ಹೌಸ್ , ತುಂಗಭದ್ರಾ ಡ್ಯಾಂ , ಹೊಸಪೇಟೆ , ಜಿಲ್ಲಾ ಕೇಂದ್ರ ಕಾರಗೃಹ ಬಳ್ಳಾರಿ ಕ್ಷೇತ್ರ ಭೇಟಿ ನೀಡುವ ಮೂಲಕ ಪ್ರಾಯೋಗಿಕ ಜ್ಞಾನ ನೀಡಲಾಗಿರುತ್ತದೆ . ಕೊನೆಯದಾಗಿ ಕೊಪ್ಪಳ ಜಿಲ್ಲೆಯಿಂದ ನಿರ್ಗಮಿಸುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಮುಂದಿನ ವೃತ್ತಿ ಜೀವನಕ್ಕೆ ಶುಭ ಕೋರುತ್ತೇನೆ . ಅದರಂತೆ ಈ ತರಬೇತಿ ಮತ್ತು ಪಥ ಸಂಚಲನ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲಾ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ನನ್ನ ಮತ್ತು ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ . ಪ್ರಶಿಕ್ಷಣಾರ್ಥಿಗಳು ತಮ್ಮ ಮಾತೃ ಘಟಕದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ ಈ ತರಬೇತಿ ಶಾಲೆಗೆ ಹಾಗೂ ಇಲಾಖೆಗೆ ಕೀರ್ತಿ ತರುತ್ತಾರೆಂಬ ವಿಶ್ವಾಸ ಇದೆ ಎಂದು  ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ  ಐಆರ್ ಬಿ ಕಮಾಂಡೆಂಟ್ ಮಹಾದೇವ ಪ್ರಸಾದ ಮಾತನಾಡಿ ಇದೊಂದು ಹೆಮ್ಮೆಯ ಕ್ಷಣ ಪ್ರಮಾಣವಚನ  ಸ್ವೀಕರಿಸಿದ ಪ್ರಶಿಕ್ಷಣಾರ್ಥಿಗಳು ತಮ್ಮ ಮಾತೃ ಘಟಕದಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ  ತರಬೇತಿ ಶಾಲೆಗೆ ಹಾಗೂ ಇಲಾಖೆಗೆ ಕೀರ್ತಿ ತರಲು ಎಂದು ಹಾರೈಸಿದರು.  ಎಸ್ಪಿ ಟಿ.ಶ್ರೀ ಧರ್ , ಐಆರ್ ಬಿ ಕಮಾಂಡೆಂಟ್ ಮಹಾದೇವ ಪ್ರಸಾದ, ಡಿಎಸ್ಪಿ ವೆಂಕಟಪ್ಪ ನಾಯಕ, ಡಿಎಸ್ಪಿ ಆರ್ ಎಸ್ ಉಜ್ಜನಿಕೊಪ್ಪ ಸೇರಿದಂತೆ ಜಿಲ್ಲೆಯ ಸಮಸ್ತ ಹಿರಿಯ ಪೋಲಿಸ್ ಅಧಿಕಾರಿಗಳು, ಪ್ರಶಿಕ್ಷಣಾರ್ಥಿಗಳ ಪೋಷಕರು ಭಾಗವಹಿಸಿದ್ದರು.

Please follow and like us:
error