ಮಹಿಳಾ ಕಾಲೇಜು ಸ್ಥಳಾಂತರಕ್ಕೆ ಕರಡಿ ಮನವಿ.. 

ಕೊಪ್ಪಳ : ಸಾರ್ವಜನಿಕ ತಾಲೂಕ ಹೋರಾಟ ಮತ್ತು ರಕ್ಷಣೆ ಸಮಿತಿಯ ಹಮ್ಮಿಕೊಂಡಿದ್ದ ಅನಿರ್ಧಿಷ್ಟಾವದಿ ಧರಣಿಯನ್ನು ಉದ್ದೇಶಿಸಿ ಕರಡಿ ಸಂಗಣ್ಣ ರವರು ಮಹಿಳಾ ಕಾಲೇಜನ್ನು ಬೇರೆ ಕಡೆ ಸ್ಥಳಾಂತರಿಸಲು ಮೈದಾನವನ್ನು ಉಳಿಸಿ ಧರಣಿಗೆ ಬೆಂಬಲ ಸೂಚಿಸಿದರು.

ಅವರು  ಕೇವಲ ೧. ೮ ಎಕರೆ ಜಮೀನಲ್ಲಿ  ಮಹಿಳಾ ಕಾಲೇಜನ್ನು ಮಾಡಲು ಸಾಧ್ಯವಿಲ್ಲ ಕಾರಣ ಕಾಲೇಜಿಗೆ ಎರಡು ಕಡೆ ರಸ್ತೆ ಮತ್ತು ಮೈದಾನ ಇರುವುದರಿಂದ ಶಬ್ಧಮಾಲಿನ್ಯವಾಗುತ್ತದೆ ಹಾಗೂ ಅಲ್ಲಿ ಅಪಘಾತ ಸ್ಥಳ ಇರುವುದರಿಂದ ಕೇವಲ ೨೫ ಪೂಟ್ ೬೦೦ ಪೂಟನಲ್ಲಿ ಯಾವುದೇ ಕಾಲೇಜನ್ನು ನಿರ್ಮಾಣ ಮಾಡಲು ಸಾದ್ಯವಿಲ್ಲ ಮತ್ತು ವಿದ್ಯಾರ್ಥಿಗಳು ಸ್ವತಂತ್ರವಾಗಿ ವಿದ್ಯಾಬ್ಯಾಸ ಮಾಡಲು ಸಾದ್ಯವಿಲ್ಲ. ಈ ಮೈದಾನವು  ಧಾರ್ಮಿಕ, ಸಂಸ್ಕೃತಿಕ, ಕ್ರೀಡೆಗಳು, ರಾಜಕೀಯ ಸಮಾವೇಶ ಮುಂತಾದ ಕಾರ್ಯಕ್ರಮಗಳ ನಡೆಯುತ್ತಾ ಇರುತ್ತವೆ ಆದ್ದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸಕ್ಕೆ ತುಂಬಾ ತೊಂದರೆಯಾಗುತದೆ ಆದ್ದರಿಂದ ಜಿಲ್ಲಾಡಳಿತವು ಈ ಎಲ್ಲಾ ವಿಷಯಗಳನ್ನು ಗಮನಕ್ಕೆ ತಗೆದುಕೊಂಡು ಕಾಲೇಜನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.

Leave a Reply