ಮಹಾತ್ಮ ಗಾಂಧೀಜಿ ಹಾಗೂ ಶಾಸ್ತ್ರಿಯವರು ರಾಷ್ಟ್ರಕಂಡ ಅಪ್ರತಿಮ ನಾಯಕರು-ಇಂದಿರಾ ಭಾವಿಕಟ್ಟಿ

ಕೊಪ್ಪಳ:02.ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ಇಂದು ಬೆಳೆಗ್ಗೆ ನಡೆದ ರಾಷ್ಟ್ರಪೀತ ಮಹಾತ್ಮ ಗಾಂದಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರಶಾಸ್ರ್ತಿಯವರ ಜನ್ಮದಿನಾಚಾರಣೆ ಅಂಗವಾಗಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷಣಿಯಾದ ಇಂದಿರಾಭಾವಿ ಕಟ್ಟಿಯವರು ಸ್ವತಂತ್ರ್ಯ ಸಂಗ್ರಾಮದ ಮಹಾನ್ ಸೇನಾನಿಯಾದ ಮಹತ್ಮಾಗಾಂದಿಜಿಯವರು ಅಹಿಂಸಾ ತತ್ವದಡಿಯಲ್ಲಿ ನಮ್ಮ ರಾಷ್ಟ್ರಕ್ಕೆ ಸ್ವತಂತ್ರ್ಯ ತಂದುಕೊಟ್ಟರು. ಯಾವುದೇ ಒಂದು ಹುದ್ದೆಗೆ ಆಶೆಪಡೆದೆ ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಮುಡುಪಾಗಿಟ್ಟಿದ್ದರು. ರಾಮಾರಾಜ್ಯದ ಕನಸನ್ನು ಸಹಕಾರಗೊಳಿಸಲು ಮಹಾತ್ಮಗಾಂದಿಜಿಯವರು ದೇಶದ ಬಡವರ ಉದ್ದಾರಕ್ಕಾಗಿ ತಮ್ಮ ಜೀವನವನ್ನು ಸರಳಸಜ್ಜನೆಕೆ ರೂಪದಲ್ಲಿ ಕಾರ್ಯನ್ಯಮುಖ ಗೊಳಿಸದರು. ಇಂತಹ ಮಹಾನ್ ನಾಯಕರ ತತ್ವದರ್ಶಗಳನ್ನು ಪ್ರತಿಯೊಬ್ಬ ಭಾರತೀಯರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅದೇ ರೀತಿ ಲಾಲ್ ಬಹದ್ದೂರ ಶಾಸ್ತ್ರಿಜಿಯವರು ಭಾರತ ಕಂಡ ಅತ್ಯಂತ ಮಹಾನ್ ಪ್ರಧಾನಮಂತ್ರಿಯಾಗಿದ್ದು, ಜೈಜವಾನ್-ಜೈಕೀಸಾನ್ ತತ್ವದಡಿಯಲ್ಲಿ ಆಡಳಿತಭಾರ ನಡೆಸಿ ಯಾವುದೇ ಆಶೆ, ಆಮೀಷಗಳನ್ನು ಬಯಸದೆ ಅತ್ಯಂತ ಸರಳರೀತಿಯಲ್ಲಿ ತಮ್ಮ ಜೀವನ್ನು ನಡೆಸಿ ಇಂದಿನ ಪಿಳಿಗೆಗೆ ಮಾದರಿಯ ವ್ಯಕ್ತಿಯಾಗಿರುವ ಶಾಸ್ರ್ತಿಯವರು ರಾಷ್ಟ್ರಕಂಡ ಅಪ್ರತೀಮ ನಾಯಕರೆಂದು ಇವರ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರುಗಳಾದ ಶಾಂತಣ್ಣ ಮುದುಗಲ್, ಜುಲ್ಲುಖಾದ್ರಿ, ದ್ಯಾಮಣ್ಣ ಚಿಲವಾಡಗಿ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಎಸ್.ಹಿರೇಮಠ, ರಾಜ್ಯ ಮಹಿಳಾ ಕಾರ್ಯದರ್ಶಿ ಕಿಶೋರಿ ಬೂದನೂರು, ಶೈಲಜಾ ಹಿರೇಮಠ, ಕೃಷ್ಣ ಇಟ್ಟಂಗಿ, ಸೇವಾದಳದ ಜಿಲ್ಲಾ ಅದ್ಯಕ್ಷ ನಿಂಗಪ್ಪ ಕಾಳಿ, ಅನುಸುಯಮ್ಮ ವಾಲ್ಮೀಕಿ, ಮಂಜುನಾಥ ಗೊಂಡಬಾಳ, ಶಿವಾನಂದ ಹೂದ್ಲೂರು, ಮಹಿಬೂಬ ಅರಗಂಜಿ, ಅಜ್ಜಪ್ಪ ಸ್ವಾಮಿ, ವೀರನಗೌಡ, ವಾಯ್ ಶಿಲ್ಪಾ, ಚನ್ನಮ್ಮ, ಉಮಾ ಜನಾದ್ರಿ ಇನ್ನೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error