ಮಹರ್ಷಿ ವಾಲ್ಮೀಕಿ ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದಾರೆ : ಕರಡಿ ಸಂಗಣ್ಣ

ಕೊಪ್ಪಳ ಅ. ): ಮಹರ್ಷಿ ವಾಲ್ಮೀಕಿರವರು ಸಮೃದ್ಧ ಪುಣ್ಯ ಪುರಷರಾಗಿದ್ದು, ನಮ್ಮೆಲ್ಲರಿಗೂ ದಾರಿ ದೀಪವಾಗಿದ್ದಾರೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.  

ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಅಂಗವಾಗಿ ನಗರದ ಸಾಹಿತ್ಯ ಭವನದಲ್ಲಿ ಶನಿವಾರದಂದು ಹಮ್ಮಿಕೊಳ್ಳಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಸಮಾಜವನ್ನು ಸುಧಾರಿಸುವ ನಿಟ್ಟಿನಲ್ಲಿ ವಾಲ್ಮೀಕಿಯ ಕೆಲಸ ಅಪಾರವಾದದ್ದು, ಇವತ್ತಿನ ಅನೇಕ ಕವಿಗಳು ಪ್ರಖ್ಯಾತರಾಗಿರುವದಕ್ಕೆ ವಾಲ್ಮೀಕಿ ರಾಮಾಯಣ ಮಹಾಕಾವ್ಯ ಪ್ರೆÃರಣೆಯಾಗಿದೆ.  ರಾಮಾಯಣದ ಮೂಲಕ ನೈತಿಕ ಸಂವಿಧಾನದ ತಳಹದಿ ಹಾಕಿಕೊಟ್ಟಿದ್ದು ಮಹರ್ಷಿ ವಾಲ್ಮೀಕಿ, ಈ ಕೃತಿ ಅನೇಕ ಸಾಧಕರಿಗೆ ಮಾರ್ಗಸೂಚಿಯಾಗಿದೆ.  ವಾಲ್ಮೀಕಿ ರಾಮಾಯಣವು ಜನಸಾಮಾನ್ಯರ ಬದುಕಿಗೆ ಬೆಳಕಾಗಿದೆ.  ಒಬ್ಬ ಸಾಮಾನ್ಯ ವ್ಯಕ್ತಿ ಸುಸಂಸ್ಕೃತನಾಗುತ್ತಾನೆ ಹಾಗೂ ಮಹರ್ಷಿಯಾಗುತ್ತಾನೆ ಎಂಬುವುದಕ್ಕೆ ಮಹರ್ಷಿ ವಾಲ್ಮಿÃಕಿಯವರೇ ವಿಶೇಷ ಉದಾಹರಣೆ.  ಬಾಲ್ಯದಲ್ಲಿ ನಾದರಿಂದ ಬೋಧನೆಪಡೆದಿರುತ್ತಾರೆ.  ಇವರು ಶಬ್ಧವೇದಿ ವಿದ್ಯೆಯನ್ನು ಬಲ್ಲವರಾಗಿದ್ದರು.  ಇಂತಹ ಮಹಾನಿಯರನ್ನು ನೆನಪಿಸಿಕೊಳ್ಳುವ ದಿನ ಇಂದು.  ವಾಲ್ಮಿÃಕಿರವರು ಮಾರ್ಗದರ್ಶನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ.  ವಾಲ್ಮಿÃಕಿ ಸಮುದಾಯದವರು ಅನೇಕ ಬೇಟಿಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಇವುಗಳಿಗೆ ಸ್ಪಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು.  ಅಲ್ಲದೇ ಕೊಪ್ಪಳ ಜಿಲ್ಲೆಯಲ್ಲಿ ಮಹರ್ಷಿ ವಾಲ್ಕಿÃಕಿಯವರ ಪುತ್ಥಳಿ ಸ್ಥಾಪನೆ ಸಾಮುದಾಯದ ಪ್ರಮುಖ ಬೇಡಿಕೆಯಾಗಿದ್ದು, ರಾಜ್ಯದ ಉಪ ಮುಖ್ಯಮಂತ್ರಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷö್ಮಣ ಸವದಿರವರು ಜಿಲ್ಲೆಗೆ ಆಗಮಿಸಿದಾಗ ಈ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.  ಶಿಕ್ಷಣಕ್ಕೆ ಈ ಸಮುದಾಯ ಹೆಚ್ಚಿನ ಮಹತ್ವ ಕೊಡಬೇಕು.  ಶಿಕ್ಷಣ ಸಿಕ್ಕಾಗಲೇ ಆರ್ಥಿಕ ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ.  ಆದ್ದರಿಂದ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂದು ಕರೆ ನೀಡಿದರು.   
ಕೊಪ್ಪಳದ ಅಳವಂಡಿ-ಬೆಟಗೇರಿ ಏತನೀರಾವರಿ ಯೋಜನೆಯಡಿ ಕಳೆದ ರಾಜ್ಯ ಸರ್ಕಾರವು 2 ಅವಧಿಯಲ್ಲಿ ಹಣವನ್ನು ಬಿಡುಗಡೆ ಮಾಡಿದೆ.  ಈಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರವು ಏತನೀರಾವರಿ ಯೋಜನೆಯಡಿ 3ನೇ ಅವಧಿಗೆ ಕೊಪ್ಪಳ, ಕುಷ್ಟಗಿ ಹಾಗೂ ಯಲಬುರ್ಗಾ ಸೇರಿ ಜಿಲ್ಲೆಗೆ ಒಟ್ಟು 1630 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಟೆಂಡರ್ ಪ್ರಕ್ರಿಯೆ ಶೀಘ್ರ ಪ್ರಾರಂಭವಾಗಲಿದೆ ಎಂದರು.   
ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ. ವಿರುಪಾಕ್ಷಿ ಪೂಜಾರಹಳ್ಳಿ ಅವರು ಮಹರ್ಷಿ ವಾಲ್ಮೀಕಿರವರ ಕುರಿತು ವಿಶೇಷ ಉಪನ್ಯಾಸ ನೀಡಿ, ಮಹರ್ಷಿ ವಾಲ್ಮೀಕಿ ಭಾರತ ಆದಿಕವಿ, ಆದಿಸಂತ, ಐತಿಹಾಸಿಕ ಪುರುಷರಾಗಿದ್ದಾರೆ.  ಮಹರ್ಷಿ ವಾಲ್ಮೀಕಿರವರು ರಚಿಸಿದ ರಾಮಾಯಣವು ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ರೂಪಿಸುವಂತಹಾ ಮಹಾ ಕಾವ್ಯವಾಗಿದೆ.  ವರ್ಣಾಶ್ರಮ ಪದ್ಧತಿಯ ತೀವ್ರ ಆಚರಣೆ ಇದ್ದ ಕಾಲದಲ್ಲಿ ಅಕ್ಷರ ಲೋಕ ಪ್ರವೇಶಿಸಿದ ಬೇಡರ ಯುವಕನೊಬ್ಬ ನಿರಂತರ ಸಾಧನೆ, ಶ್ರದ್ಧೆಯಿಂದ ಮಹಾ ಕಾವ್ಯ ರಚಿಸುವ ಎತ್ತರಕ್ಕೆ ಬೆಳೆದ. ಕಾಡಿನ ದಟ್ಟ ಪರಿಚಯ ಹೊಂದಿದ್ದ ವಾಲ್ಮೀಕಿಯ ಕೃತಿಯಲ್ಲಿ ಅರಣ್ಯ, ಪ್ರಾಣಿ ಪಕ್ಷಿ, ನದಿ, ಸರೋವರ, ಸಮುದ್ರಗಳ ಪರಿಚಯ ಮತ್ತು ಜೀವನ, ಕೌಟಂಬಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ ಎಂದು ವಿವರಿಸಿದರು.  
ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಮಾತನಾಡಿ, ಆದಿಕವಿ ಮಹರ್ಷಿ ವಾಲ್ಮೀಕಿಯವರು ರಚಿಸಿದ ರಾಮಾಯಣವು ವಿಶ್ವಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.  ರತ್ನಕರ, ಅಗ್ನಿಚೇತನ ಎಂಬುವು ಇವರ ಬಾಲ್ಯದ ಹೆಸರುಗಳು ಎಂದು ತಿಳಿಯುತ್ತವೆ.  ಗುರು ವ್ಯಾಸರಾಯರು ಮಹರ್ಷಿ ವಾಲ್ಮೀಕಿಯವರ ಜೀವನವನ್ನು ಬದಲಿಸುತ್ತಾರೆ.  ಮಹರ್ಷಿ ವಾಲ್ಮೀಕಿಯವರು ರಾಮಾಯಣ ಕಾವ್ಯವನ್ನು ಬರೆಯದೇ ಇದ್ದರೇ ನಮ್ಮ ಜಿಲ್ಲೆಯಲ್ಲಿರುವ ಆಂಜನೇಯನ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟ ಇಂದು ನಮಗೆ ತಿಳಿಯುತ್ತಿರಲಿಲ್ಲ.  ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ಕುವೆಂಪು ಸೇರಿದಂತೆ ಯಾವುದೇ ಮಹನೀಯರನ್ನು ನಿರ್ದಿಷ್ಟ ಸಮುದಾಯದ ಪ್ರತಿನಿಧಿಗಳಾಗಿ ಸೀಮಿತಿಗೊಳಿಸದೆ ಒಟ್ಟು ಮನುಕುಲದ ವಿಕಾಸಕ್ಕೆ ಶ್ರಮಿಸಿದ ಸಾಮಾಜಿಕ ಹೋರಾಟಗಾರರನ್ನಾಗಿ ನೋಡಬೇಕು. ಅಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಸಾಧ್ಯ.  ವಾಲ್ಮಿÃಕಿ ಹೆಸರಿನಲ್ಲಿರುವ ಈ ಜನಾಂಗ ಶೈಕ್ಷಣಿಕವಾಗಿ ಮುಂದೆ ಬರಬೇಕು.  ಅಲ್ಲದೇ ಸಮುದಾಯದವರು  ಸಂಘಟಿತರಾಗುವದು ಮುಖ್ಯವಾಗಿದೆ ಎಂದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಗೂಳಪ್ಪ ಹಲಗೇರಿ, ಸದಸ್ಯ ರಾಮಣ್ಣ ಚೌಡ್ಕಿ, ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಮುತ್ತುರಾಜ ಕುಷ್ಟಗಿ, ಸವೇಶ್ವರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಸಮಾಜ ಕಲ್ಯಾಣ ಇಲಾಖೆ ಪಭಾರಿ ಉಪನಿರ್ದೇಶಕ ಈರಪ್ಪ ಆಶಾಪೂರ, ತಹಶೀಲ್ದಾರ ಜೆ.ಬಿ ಮಜ್ಗಿ, ಮಹರ್ಷಿ ವಾಲ್ಮೀಕಿ ಎಸ್.ಟಿ. ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಪರಮೇಶ, ಸಮಾಜದ ಮುಖಂಡರಾದ ಯಮನೂರಪ್ಪ ನಾಯಕ, ಹನುಮಂತಪ್ಪ ನಾಯಕ, ತಿಪ್ಪೆಸ್ವಾಮಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. 

Please follow and like us:
error