ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ


ಯಲಬುರ್ಗಾ : ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ನವ್ಹಂಬರ ೧೭ ರಂದು ಹಿರೇವಂಕಲಕುಂಟಾ ಹೋಬಳಿಯ ವಾಲ್ಮೀಕಿ ಮಹಾಸಭಾ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಸಮಾರಂಭವನ್ನು ಆಯೋಜಿಸಲಾಗಿದೆ.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿಕೊಳ್ಳುವರು, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವರು, ಮೊಳಕಾಲ್ಮೂರ ಶಾಸಕ ಬಿ. ಶ್ರೀರಾಮುಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ, ಮುಖ್ಯಅತಿಥಿಗಳಾಗಿ ಸಂಸದ ಸಂಗಣ್ಣ ಕರಡಿ ಶಾಸಕರಾದ ಹಾಲಪ್ಪ ಆಚಾರ, ರಾಘವೇಂದ್ರ ಹಿಟ್ನಾಳ, ಬಸವರಾಜ ದಡೇಸೂಗುರು, ಪರಣ್ಣ ಮುನವಳ್ಳಿ, ಅಮರೇಗೌಡ ಪಾಟೀಲ ಬಯ್ಯಾಪುರ ಸೇರಿದಂತೆ ಮಾಜಿ ಶಾಸಕರು ಸಚಿವರು ಮುಖಂಡರು, ಗ್ರಾಮದ ಹಿರಿಯರು, ಯುವಕರು ಹಾಗೂ ವಾಲ್ಮೀಕಿ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಅಂದು ಬೆಳಿಗ್ಗೆ ೧೦:೩೦ಕ್ಕೆ ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ.
ಹನುಮಂತಪ್ಪ ನರೇಗಲ್ ಹಾಗೂ ವಿದ್ಯಾರ್ಥಿಗಳಿಂದ ನಾಟಗೀತೆ, ಡಿ.ಎಸ್. ಪೂಜಾರ ಹಾಗೂ ಹೆಚ್ ಸುಭಾಸಚಂದ್ರ ಲಿಂಗದಳ್ಳಿ ಯವರಿಂದ ವಾಲ್ಮೀಕಿ ಗೀತಗಾಯನ.
ರಾಮಣ್ಣ ತಳವಾರವರಿಂದ ನಿರೂಪಣೆ, ಬಾಲದಂಡಪ್ಪ ತಳವಾರ ಸ್ವಾಗತ, ರಾಮಣ್ಣ ತಳವಾರ ನಿರ್ವಹಣೆ ಹಾಗೂ ದೇವೇಂದ್ರಪ್ಪ ಜಿರ್ಲಿ ಯವರಿಂದ ವಂದನಾರ್ಪಣೆ ಕಾರ್ಯಕ್ರಮ ನೆರವೇರಲಿದೆ.

Please follow and like us:
error