ಮಸ್ಜಿದ್ ದರ್ಶನ ಕಾರ್ಯಕ್ರಮ

ಕೊಪ್ಪಳ : ನೆರೆಹೊರೆಯವರು, ಸ್ನೇಹಿತರು, ಸಹೋದರ, ಸಹೋದರಿಯರು, ವಿದ್ಯಾರ್ಥಿಗಳು ಮತ್ತು ಎಲ್ಲ ಸಾರ್‍ವಜನಿಕರಿಗೆ ಮಸೀದಿಯ ಒಳಭಾಗವನ್ನು ವೀಕ್ಷಿಸಲು ನೇರ ಪ್ರಾರ್ಥನೆ, ಇಸ್ಲಾಂ ಧರ್ಮದ ಬಗ್ಗೆ ತಿಳಿದುಕೊಳ್ಳಲು ಕೊಪ್ಪಳ ಜಮಾತೆ ಇಸ್ಲಾಮಿ ಹಿಂದೆ ವಿಶಿಷ್ಟ ಕಾಯೃಕ್ರಮ ಹಮ್ಮಿಕೊಂಡಿದೆ.


ಮಸ್ಜಿದ್ ದರ್ಶನ ಎಂಬ ಕಾರ್ಯಕ್ರಮವನ್ನು ದಿ ೦೮-೧೨-೨೦೧೯ ರವಿವಾರ ಬೆಳಿಗ್ಗೆ ೧೧:೦೦ರಿಂದ ಸಾಯಾಂಕಾಲ ೫:೦೦ ಗಂಟೆಯವರಗೆ ನಡೆಯುತ್ತಿದ್ದ ಆಸಕ್ತರು ಯಾವುದೇ ಸಮಯದಲ್ಲಾದರೂ ಭೇಟಿ ನೀಡಿ ವಿಕ್ಷಿಸಬಹುದು. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಸಂಸ್ಥಾನ ಶ್ರೀಗವಿಮಠ ರವರು ಕಾಯಕ್ರಮದಲ್ಲಿ ಉಪಸ್ಥಿತರಿರುವರು. ಕೊಪ್ಪಳದ ಸ್ಟೇಷನ್ ರಸ್ತೆಯ ಮಸ್ಜೀದ್-ಎ-ಆಲಾ ದಲ್ಲಿ ನಮಾಜ್ ಮಾಡುವ ಸಮಯ ಜೊಹರ್(ಮಧ್ಯಾಹ್ನ) ೨:೦೦ಗಂಟೆಗೆ ಅಸರ್ (ಸಾಯಾಂಕಾಲ) ೪:೪೫ ಗಂಟೆಗೆ ಈ ಎರಡು ಸಮಯದಲ್ಲಿ ಮುಸ್ಲಿಮರು ನಮಾಜ್ ಮಾಡುವ ವಿಧಿವಿಧಾನಗಳು ನೇರವಾಗಿ ವಿಕ್ಷೀಸಬಹುದು ಹಾಗೂ ನಮಾಜ್ ಮತ್ತು ಅಂಗ ಶುದ್ಧಿ ಇನ್ನು ಅನೇಕ ವಿಷಯಗಳ ಬಗ್ಗೆ ಕೇಳಿತಿಳಿದು ಕೊಳ್ಳಬಹುದು. ತಮಗಾಗಿ ವಿವರಣೆಗಾರರು ಉಪಸ್ಥಿತರಿರುವರು ಎಂದು ಅಬ್ದುರ್ ಶುಕುರ್ ಸಾಬ್ ಅಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್, ಕೊಪ್ಪಳ ಹಾಗೂ ಕೆ.ಐ.ಶೇಕ್ ಸಾಬ್ ಧಾರವಾಡ ಜಿಲ್ಲಾ ವಲಯ ಸಂಚಾಲಕರು ಪತ್ರಿಕಾಗೋಷ್ಠಿಯ ಮೂಲಕ ಆಗಮಿಸಲು ಕೋರಿದ್ದಾರೆ.

Please follow and like us:
error