ಮಸ್ಜಿದ್-ಎ-ಯುಸೂಫಿಯಾ (ಸುನ್ನಿ) ಸದಸ್ಯತ್ವ ಶುಲ್ಕದ ಬಗ್ಗೆ ಸಂಘಟನೆಗಳಿಂದ ತಕರಾರು

ಕೊಪ್ಪಳ:ಫೆ-೨೬, ಮಸ್ಜಿದ್-ಎ-ಯುಸೂಫಿಯಾ (ಸುನ್ನಿ) ಸದಸ್ಯತ್ವ ಶುಲ್ಕವನ್ನು ವಿಪರೀತ ನಿಗದಿಪಡಿಸಿರುವದರಿಂದ ನಗರದ ಸುನ್ನಿ ಯುವಜನ ಸಂಘ, ಹೈದರಾಬಾದ ಕರ್ನಾಟಕ ರಕ್ಷಣಾ ವೇದಿಕೆ, ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಮುಂತಾದವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಆಡಳಿತಾಧಿಕಾರಿ ಎಂ.ಕನಗವಲ್ಲಿ ಅವರಿಗೆ ತಕರಾರು ಅರ್ಜಿ ಸಲ್ಲಿಸಿದರು.
ನಗರದ ಜವಾಹರ ರಸ್ತೆಯಲ್ಲಿರುವ ಮಸ್ಜಿದ್-ಎ-ಯುಸೂಫಿಯಾ (ಸುನ್ನಿ)ಕ್ಕೆ ಸದ್ಯ ಆಡಳಿತಾಧಿಕಾರಿ ಇದ್ದು, ಸುಮಾರು ನಾಲ್ಕು ವರ್ಷಗಳು ಗತಿಸಿದೆ. ತದ ನಂತರ ಈಗ ಸಾಮಾನ್ಯ ಸಮಿತಿ ಮಾಡಲಿಕ್ಕೆ ಸದಸ್ಯತ್ವ ನೊ೮ಂದಣಿ ನಡೆಯುತ್ತಿದ್ದು, ಸದಸ್ಯತ್ವ ಶುಲ್ಕ ಎಂಟು ನೂರು ರೂಪಾಯಿಗಳು ಮಾಡಿದ್ದಾರೆ. ಇದರಿಂದ ಸಾಮಾನ್ಯ ಜನರಿಗೆ ಸದಸ್ಯತ್ವ ಪಡೆಯಲು ಸಾಧ್ಯವಾಗದೆ ಕೇವಲ ಶ್ರೀಮಂತರಿಗೆ ಮಾತ್ರ ಅವಕಾಶ ಕಲ್ಪಿಸಿದೆ, ಇದು ಧಾರ್ಮಿಕ ಸಂಸ್ಥೆಯಾಗಿದೆ. ಕಾರಣ ಸದರಿ ಭಾರಿ ಶುಲ್ಕವನ್ನು ತಕ್ಷಣ ರದ್ದುಪಡಿಸಿ, ಕನಿಷ್ಠ ಶುಲ್ಕ ಪ್ರತಿ ಸದಸ್ಯರಿಗೆ ೨೦ ರಿಂದ ೫೦ ರೂಪಾಯಿಗಳ ಒಳಗೆ ನಿಗದಿಪಡಿಸಿ, ಸದಸ್ಯತ್ವ ಪಡೆಯಲು ಕಾಲಾವಕಾಶ ನೀಡಿದರೆ ಸಾಮಾನ್ಯ ಮಂಡಳಿಯಲ್ಲಿ ಸಾಮಾನ್ಯ ಜನರು ತಮ್ಮ ಹೆಸರನ್ನು ನೋಂದಾಯಿಸಿ ಪಾಲ್ಗೊಳ್ಳುವಂತಾಗುತ್ತದೆ. ಇಲ್ಲದಿದ್ದರೆ ಶ್ರೀಮಂತರ ಪಾಲಾಗುವದರಲ್ಲಿ ಸಂಶಯವೇ ಇಲ್ಲಾ. ದೇಶದ ಸಂವಿಧಾನದಲ್ಲೇ ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ಮತ್ತು ಮತ ಚಲಾಯಿಸಲು ಯಾವುದೇ ಶುಲ್ಕವಿಲ್ಲದೆ ಉಚಿತವಾಗಿದೆ. ಇದನ್ನು ಗಮನಿಸಿ ತಕ್ಷಣ ನೋಂದಣಿ ತಡೆಹಿಡಿದು ರದ್ದುಪಡಿಸಬೇಕು. ಯಾವುದೇ ಮಸೀದಿ ನಿಗದಿತ ಓಣಿಗಳಿಗೆ ಸೀಮಿತವಾಗಿರುತ್ತದೆ. ಆ ಮಸೀದಿ ವ್ಯಾಪ್ತಿ ಓಣಿಗಳು ಒಳಗೊಳ್ಳುತ್ತದೆ. ಈದಗಾ, ದರ್ಗಾ, ಶಾದಿ ಮಹಲ್ ಮುಂತಾದ ಧಾರ್ಮಿಕ ಸಂಸ್ಥೆಗಳು ಇಡಿ ಊರಿಗೆ ಸಂಬಂಧಿಸಿರುತ್ತವೆ. ಹೀಗಾಗಿ ಮಸ್ಜಿದ್-ಎ-ಯುಸೂಫಿಯಾ ಕನಕಗಿರಿ ಓಣಿ, ಅತ್ತಾರಗಲ್ಲಿ, ಕುಮಬಾರ ಓಣಿಗಳ ವ್ಯಾಪ್ತಿಯಲ್ಲಿದೆ. ಸದರಿ ಓಣಿಗಳ ಜನರೆ ಸದಸ್ಯತ್ವ ಪಡೆಯಲು ಅರ್ಹರು, ಈ ಪ್ರಕ್ರಿಯೆಯು ಸಾರ್ವಜನಿಕರ ಹಿತಾಸಕ್ತಿಗೆ ಧಕ್ಕೆಯಾದಲ್ಲಿ ಇಲಾಖೆಯು ಹೊಣೆಯಾಗುತ್ತದೆ ಎಂಬ ಸೂಕ್ಷ್ಮ ವಿಷಯವನ್ನು ಅರಿತು ತಾವು ಹೊಸ ಆದೇಶ ನೀಡಿ ಸಾಮಾನ್ಯ ಜನರು ಪಾಲ್ಗೊಳ್ಳುವಂತೆ ಕ್ರಮ ಕೈಗೊಳ್ಳಲು ಈ ಮೂಲಕ ಕೋರುತ್ತೇವೆ.

ಈ ಸಂದರ್ಭದಲ್ಲಿ ಸುನ್ನಿ ಯುವಜನ ಸಂಘದ (ಎಸ್.ವೈ.ಎಸ್) ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯ್ಯದ್ ಸಲೀಮುದ್ದೀನ್ ಅಲ್ವಿ, ಹೈದರಾಬಾದ ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಮುನೀರ ಸಿದ್ದೀಕಿ, ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್.ಎಸ್.ಎಫ್.) ನಗರ ಘಟಕದ ಅಧ್ಯಕ್ಷ ಹಾಫೀಸ್ ಮೊಹಮ್ಮದ್ ಜಮಾಲ್ ಅಹಮ್ಮದ್, ನಗರಸಭೆ ಮಾಜಿ ಸದಸ್ಯ ಶಾಬುದ್ದೀನಸಾಬ ಕುಕನೂರ ಮುಂತಾದವರು ಉಪಸ್ಥಿತರಿದ್ದರು.

Please follow and like us:
error