ಮಳೆಗೆ  ಹಾನಿಯಾದ ರೈತರ ಜಮೀನುಗಳಿಗೆ ಶಾಸಕ, ಸಂಸದರ ಭೇಟಿ ನೀಡಿ ಪರಿಶೀಲನೆ

ಯಲಬುರ್ಗಾ: ತಾಲ್ಲೂಕಿನ ಕುಕನೂರ ವಿಭಾಗದ ಲಕಮಾಪುರ ಗ್ರಾಮದಲ್ಲಿ ಆದ ಮಳೆಗೆ ಬಾಳೆ ತೋಟ ಬೆಳೆ ಸೇರಿ ಇತರ ಜಮೀನುನಲ್ಲಿ ನಾಶವಾದ ಬೆಳೆಗಳ ವೀಕ್ಷಿಸುವ ನಿಟ್ಟಿನಲ್ಲಿ ಶಾಸಕರಾದ ಹಾಲಪ್ಪ ಆಚಾರ ಮತ್ತು ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿ ಬೆಳೆ ಪರಿಹಾರದ ಭರವಸೆ ನೀಡಿದರು.       ಬಳಿಕ ಶಾಸಕರಾದ ಹಾಲಪ್ಪ ಆಚಾರ ಮಾತನಾಡಿ ರೈತರು ಮೊದಲೇ ಸಂಕಷ್ಟದಲ್ಲಿದ್ದು ಈ ಬೆಳೆ ಹಾನಿಯಿಂದ ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಈ ಬೆಳೆ ಹಾನಿಗೆ ಸರಕಾರದಿಂದ ದೊರೆಯುವ ಪರಿಹಾರ ನೀಡಲಾಗುವದು ಎಂದರು. ಈ ಸಂದರ್ಭದಲ್ಲಿ ರೈತರು ಸೇರಿ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Please follow and like us:
error