ಮರಿಶಾಂತವೀರ ಮಹಾಸ್ವಾಮೀಜಿಗಳ ೫೩ ನೇ ಪುಣ್ಯ ಸ್ಮರಣೆಯ ಆಚರಣೆ

ಶ್ರೀ ಮ.ನಿ.ಪ್ರ.ಜ. ಮರಿಶಾಂತವೀರ ಮಹಾಸ್ವಾಮಿಗಳ ೫೩ ನೇ ಪುಣ್ಯಸ್ಮರಣೋತ್ಸವ

ಕೊಪ್ಪಳ: ನಗರದ ಶ್ರಿಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ ಅಡಿಯಲ್ಲಿ ಬರುವ ಶ್ರೀಮತಿ ಶಾರದಮ್ಮ ವ್ಹಿ. ಕೊತಬಾಳ ಮಹಾವಿದ್ಯಾಲಯದಲ್ಲಿ ಸಂಸ್ಥಾನ ಶ್ರೀಗವಿಮಠದ ೧೬ನೇ ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಜ.ಲಿಂ. ಮರಿಶಾಂತವೀರ ಮಹಾಸ್ವಾಮೀಜಿಗಳ ೫೩ ನೇ ಪುಣ್ಯ ಸ್ಮರಣೆಯನ್ನು ಆಚರಿಸಲಾಯಿತು.

ಸರಳ ಸಮಾರಂಭದಲ್ಲಿ ಉಪನ್ಯಾಸಕ ಪ್ರಕಾಶ ಬಳ್ಳಾರಿ ಮಾತನಾಡಿ ಲಿಂ. ಮರಿಶಾಂತವೀರ ಮಹಾಸ್ವಾಮಿಗಳವರು ಹಿತ-ಮಿತ ಭಾಷಿಗಳಾಗಿದ್ದರು. ಸದಾ ಲಿಂಗಪೂಜೆಯಲ್ಲಿಯೇ ನಿರತರಾಗಿರುತ್ತಿದ್ದರು. ಮಹಾತಪಸ್ವಿಗಳಾಗಿ, ಶಿವಾನುಭವಿಗಳಾಗಿ ತ್ರಿವಿಧ ದಾಸೋಹ ಮೂರ್ತಿಗಳಾಗಿ ಶ್ರೀಗವಿಮಠದ ಹೆಸರನ್ನು ಬಹುಎತ್ತರಕ್ಕೇರಿಸಿದ್ದಾರೆ. ಸ್ವತಃ ವಿದ್ಯಾವಂತರು ಆಗಿದ್ದ ಇವರು ೧೯೫೧ ರಲ್ಲಿ ಶ್ರೀಗವಿಸಿದ್ಧೇಶ್ವರ ಮಿಡ್ಲ ಸ್ಕೂಲ್ ಸ್ಥಾಪಿಸಿ ಅಕ್ಷರದ ಬೀಜಗಳನ್ನು ಈ ಭಾಗದಲ್ಲಿ ಮೊದಲ ಬಾರಿಗೆ ಬಿತ್ತಿದರು.. ಇದಾದನಂತರ ೧೯೬೩ ಶ್ರೀಗವಿಸಿದ್ಧೇಶ್ವರ ವಿದ್ಯಾವರ್ದಕ ಸಂಸ್ಥೆಯನ್ನು ಆರಂಭಿಸಿದರು. ಸುತ್ತಲಿನ ಹಳ್ಳಿಗಳ ಬಡ ವಿದ್ಯಾರ್ಥಿಗಳನ್ನು ಶ್ರೀಗವಿಮಠಕ್ಕೆ ಕರೆತಂದು ಶಿಕ್ಷಣದ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರು. ಶ್ರೀಮಠದ ಭೂ ಆಸ್ತಿಯನ್ನೆಲ್ಲ ಶಿಕ್ಷಣ ಸಂಸ್ಥೆಗೆ ದಾನ ನೀಡಿ ಶಿಕ್ಷಣ ಬಿತ್ತರಿಸುವ ಜ್ಞಾನದಾಸೋಹದ ಜೊತೆಗೆ ಅನ್ನದಾಸೋಹವನ್ನು ನಿರಂತರವಾಗಿ ಶ್ರೀಗವಿಮಠದಲ್ಲಿ ಇಟ್ಟಿದ್ದರು ಆಯುರ್ವೇದದಲ್ಲಿ ಅಪಾರ ಪಾಂಡಿತ್ಯ ಹೊಂದಿದ ಪೂಜ್ಯರು ಈ ನಾಡಿನಲ್ಲಿ ಸಹಸ್ರಾರು ಜನ ಆಯುರ್ವೇದ ವೈದ್ಯರನ್ನು ಸಮಾಜಕ್ಕೆ ನೀಡಿದ್ದಾರೆ. ಭಕ್ತರ ನಾಡಿ ಹಿಡಿದು ರೋಗಗಳನ್ನು ಪರೀಕ್ಷಿಸಿ ಆಯುರ್ವೇದದ ಚಿಕಿತ್ಸೆ ನೀಡಿ ರೋಗಿಗಳನ್ನು ಗುಣಪಡಿಸುತ್ತಿದ್ದ ಕೀರ್ತಿ ಪೂಜ್ಯರಿಗಿದೆ ಇಂತಹ ಶ್ರೀಗಳನ್ನು ಈ ದಿನ ನೆನೆಯುವದು ನಮ್ಮ ಪುಣ್ಯವೆಂದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ರಾಜರಾಜೇಶ್ವರ ರಾವ್, ಆರ್.ವಿ ವಡಕಿ, ಜಯಸಿಂಹ ಎಂ.ಆರ್, ಈಶಪ್ಪ ಮೇಟಿ, ಖಾಜಾವಲಿ, ಮಹೇಶರಾವ್,ಹನುಮಪ್ಪ ಶಲೂಡಿ ಹಾಗೂ ಶಿಕ್ಷಕಕೇತರ ಸಿಬ್ಭಂಧಿ ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಡಾ.ಮಾರ್ಕಂಡೇಯ ಹಂದ್ರಾಳ್ ನಿರೂಪಿಸಿದರು.

Please follow and like us:
error