ಮನೆ ಕಟ್ಟುವುದಕ್ಕಿಂತಲೂ ಸಮಾಜ ಕಟ್ಟುವುದು ಮುಖ್ಯ: ಹಾಲ್ಕುರಿಕೆ ಶಿವಶಂಕರ್


Koppal News ಕೊಪ್ಪಳಃ ಬದುಕಿನ ಅನಂತತೆಯನ್ನು ಅನುಭವಿಸಲು ಸಮಾಜದ ಸ್ವಾಥ್ಯ ಅತ್ಯಗತ್ಯ. ಕಲೆ ಸಾಂಸ್ಕೃತಿಕ ಮಜಲುಗಳು ಮನುಷ್ಯನ ಅಂತಸತ್ವವನ್ನು ಮಾನವೀಯತೆಯತ್ತ ಸೆಳೆಯಬಲ್ಲದು. ಮನೆ ಕಟ್ಟುವುದಕ್ಕಿಂತಲೂ ಸಮಾಜ ಕಟ್ಟುವುದು ಮುಖ್ಯವೆಂದು ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಸಹಜ ಟ್ರಸ್ಟ್ ಸಹಯೋಗದಲ್ಲಿ ಭಾಗ್ಯನಗರದ ಪಟ್ಟಣ ಪಂಚಾಯಿತಿ ಬಯಲು ರಂಗ ಮಂದಿರದಲ್ಲಿ ಆಯೋಜನೆ ಮಾಡಿದ ಚಿನ್ನರ ಚಿಲಿಪಿಲಿ ರಂಗಜಾಥ ಆರನೇ ಪ್ರದರ್ಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ ಇಂದಿನ ತಂದೆ ತಾಯಿಗಳು ಜಾಗತಿಕ ಬಿರುಗಾಳಿಗೆ ಬಲಿಯಾಗಿ ಮಕ್ಕಳನ್ನು ಯಂತ್ರಗಳನ್ನಾಗಿ ರೂಪಿಸುತ್ತಿದ್ದಾರೆ ಸಮಾಜಕ್ಕೆ ನೆರವಾಗುವ ಸಾಹಿತ್ಯ,ರಂಗಭೂಮಿ. ಕಲೆ,ಸಂಗೀತಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಇದು ಮುಂದಿನ ಭವಿಷ್ಯದಲ್ಲಿ ಹಾನಿಕಾರಕವಾಗಿ ಉಲ್ಬಣಿಸುತ್ತದೆ ಎಂದರು.ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿಯವರು ರಂಗಭೂಮಿಯು ಮಕ್ಕಳಲ್ಲಿ ಅತ್ಮ ವಿಶ್ವಾಸ ಮೂಡಿಸುವುದರ ಜೊತೆಗೆ ಕ್ರಿಯಾತ್ಮಕ ಚಿಂತನೆಗೆ ಕಾರಣವಾಗುತ್ತದೆ.ಈ ಚಿಣ್ಣರ ಚಿಲುಮೆ ಕಾರ್ಯಕ್ರಮದಲ್ಲಿ ೨೫ಕ್ಕೂ ಹೆಚ್ಚು ಮಕ್ಕಳು ಕಲಾವಿದರಾಗಿ ಹುಟ್ಟು ಪಡೆದಿದ್ದಾರೆ ಜೊತೆಗೆ ಹತ್ತಾರು ನಾಟಕ ಪ್ರದರ್ಶನದ ಮೂಲಕ ತಮ್ಮ ಅಭಿನಯದ ಕಲೆಯನ್ನು ಸಾವಿರಾರು ಜನಕ್ಕೆ ತೋರಿಸಿದ್ದಾರೆ ಎಂದರು. ಹಿರಿಯ ವಕೀಲರಾದ ರಾಘವೇಂದ್ರ ಪಾನಗಂಟಿಯವರು ಮಾತನಾಡುತ್ತಾ , ಶೈಕ್ಷಣಿಕವಾಗಿ ಮಕ್ಕಳು ಪ್ರಾವಿನ್ಯತೆ ಪಡೆಯಲು ಅಭಿನಯ ನೆರೆವಿಗೆ ಬರುತ್ತದೆ ಅಲ್ಲದೆ ಜೀವದ ಮೌಲ್ಯಗಳನ್ನು ಕಲಿಯುತ್ತಾರೆ ಅಂದರು.ಸಹಜ ಟ್ರಸ್ಟ್ ಕಾರ್ಯದರ್ಶಿಗಳು ಚಿಣ್ಣರ ಚಿಲಿಪಲಿ ರಂಗಜಾಥದ ಸಂಚಲಕರಾದ ಶೀಲಾ ಹಾಲ್ಕುರಿಕೆ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗು ಸಹಜ ಟ್ರಸ್ಟ್ ಸಹಯೋಗದಲ್ಲಿ ಹಮ್ಮೀಕೊಂಡಿರುವ ಕಾರ್ಯಕ್ರಮವನ್ನು ಇಲ್ಲಿ ಅಭಿನಯಿಸುತ್ತಿರುವ ಮಕ್ಕಳಿಗೆ ಒಂದು ತಿಂಗಳ ರಂಗ ತರಬೇತಿಯ ಕೊಟ್ಟು. ನಾಟಕವನ್ನು ಸಿದ್ಧಗೊಳಿಸಿ ಮಕ್ಕಳನ್ನು ಕಲಾದರನ್ನಾಗಿ ಮಾಡಲಾಗಿದೆ ಕೊಪ್ಪಳ ತಾಲೋಕಿನ ಗ್ರಾಮಗಳಲ್ಲಿ ಪ್ರದರ್ಶನಗೊಂಡು ಜನ ಮೆಚ್ಚಿಗೆ ಗಳಿಸಿದೆ. ಕೊಪ್ಪಳ ಜಿಲೆಯನ್ನು ಅಧುನಿಕ ರಂಗ ಕೇಂದ್ರವನ್ನಾಗಿ ರೂಪಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ನಾಟಕದಲ್ಲಿ ಅಭಿನಯಿಸಿದ ಇಪ್ಪತ್ತು ಮಂದಿ ಬಾಲ ಕಲಾವಿದರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಭಾಗ್ಯನಗರ ಪಟ್ಟಣ ಪಂಚಾಯಿತಿ ಅದ್ಯಕ್ಷರಾದ ಶಕುಂಲಾ,ಉಪಾದ್ಯಕ್ಷರಾದ ಯಶೋಧಮ್ಮ ಮರಡಿ, ಲಕ್ಷ್ಮಣ ಪಿರದಾರ , ರೋಹಿಣಿ ಕೊಟಗಾರ, ಕೀರ್ತಪ್ಪ ಗೋಟೂರು ಮುತಾದಂವರು ಉಪಸ್ಥಿತಿಇದ್ದರು. ಕಾರ್ಯಕ್ರಮದ ನಂತರ ಮಲ್ಲಮ್ಮ ರಚನೆಯ , ಸಹರಾ ಹಡಗಲಿ ನಿರ್ದೇಶನzಲ್ಲಿ ಸರ್ಕಾರಿ ಬಾಲಕರ ಬಾಲ ಮಂದಿರ ಮತ್ತು ಸರ್ಕಾರಿ ಬಾಲಕಿಯರ ಬಾಲ ಮಂದಿರ ಮಕ್ಕಳಿಂದ ಬೋದಿರಾಜ ಬಯಲಾಟ ನಾಟಕವನ್ನು ಪ್ರದರ್ಶಿಸಲಾಯಿತು

Please follow and like us: