ಮನೆಯಲ್ಲಿಯೇ ಬಸವ ಜಯಂತಿ

ಇದೇ ದಿನಾಂಕ 26-04-2020 ರಂದು ಮಹಾಮಾನವತಾವಾದಿ ವಿಶ್ವಗುರು ಬಸವಣ್ಣನವರ ಜಯಂತಿ ಇದ್ದು, ಪ್ರತಿ ವರ್ಷವೂ ಕೊಪ್ಪಳದಲ್ಲಿ ಅದ್ಧೂರಿ ಹಾಗೂ ಅರ್ಥಗರ್ಭಿತವಾಗಿ ಆಚರಿಸಲಾಗುತ್ತಿತ್ತು. ಆದರೆ ಈ ವರ್ಷ ಕೊರೋನಾ ವೈರಸ್ ಸಾಂಕ್ರಾಮಿಕ ರೋಗದ ಅಪಾಯ ಇರುವುದರಿಂದ, ಸರಕಾರದ ಆದೇಶವನ್ನು ಪಾಲಿಸುತ್ತಲೇ ಬಸವ ಜಯಂತಿ ಆಚರಣೆ ಮಾಡಬೇಕಿದೆ. ಹೀಗಾಗಿ ಎಲ್ಲ ಬಸವಾಭಿಮಾನಿಗಳು, ಬಸವಾನುಯಾಯಿ ಸಂಘ ಸಂಸ್ಥೆಗಳು ಮನೆಯಲ್ಲಿದ್ದುಕೊಂಡೇ ಬಸವ ಜಯಂತಿ ಆಚರಿಸಬೇಕು. ಜಗತ್ತು ಕೊರೋನಾ ಸಮಸ್ಯೆಯಿಂದ ಬಹುಬೇಗ ಮುಕ್ತಿ ಹೊಂದಲಿ ಎಂಬ ಪ್ರಾರ್ಥನೆ ಮತ್ತು ಸಂಕಲ್ಪ ಮಾಡುತ್ತ ಮನೆಯನ್ನೇ ಅನುಭವ ಮಂಟಪ ಮಾಡಿಕೊಂಡು ವಚನ ಪಠಣ, ಬಸವ ಧ್ಯಾನದೊಂದಿಗೆ ಈ ಸಲದ ಬಸವ ಜಯಂತಿಯನ್ನು ವಿಭಿನ್ನವಾಗಿ ಆಚರಿಸಿ, ಜಗದ ಒಳಿತಿಗಾಗಿ ಪ್ರಾರ್ಥನೆ ಮಾಡೋಣ. ಇದಲ್ಲದೇ ಗ್ಲೊಬಲ್ ಬಸವ ಫೌಂಡೇಶನ್ ವತಿಯಿಂದ ಆ ದಿನ ಸಂಜೆ 7.30 ರಿಂದ 9.30 ರ ವರೆಗೆ ಬಸವ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಪ್ರಸಾರ ಮಾಡಲಿದ್ದಾರೆ. ನಾಡಿನ, ರಾಷ್ಟ್ರದ, ಅಂತಾರಾಷ್ಟ್ರೀಯ ಮಟ್ಟದ ಬಸವ ಚಿಂತಕರು, ಪೂಜ್ಯರುಗಳು ಲೈವ್ ಆಗಿ ಆನ್ ಲೈನ್ ಮೂಲಕ ಬಸವ ಚಿಂತನೆ ನೀಡಲಿದ್ದಾರೆ. https://youtu.be/qNoQqQQsrzk ಲಿಂಕ್ ಮೂಲಕ ಎಲ್ಲ ಬಸವಾಭಿಮಾನಿಗಳು ಬಸವ ಸಂದೇಶ ಕೇಳಬೇಕೆಂದು ಕೊಪ್ಪಳ ಬಸವ ಜಯಂತಿ ಉತ್ಸವ ಸಮಿತಿ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳ್ಳಿ ಕೋರಿದ್ದಾರೆ.

Please follow and like us:
error