ಮನೆಗೆ ನುಗ್ಗಿ ಸಂಸದರ ಬಂಧನಕ್ಕೆ ಯತ್ನ : ಖಂಡನೆ

ಸಂಸದೀಯ ಹಕ್ಕುಗಳ ಉಲ್ಲಂಘನೆ | ಪೊಲೀಸರ ಉದ್ಧಟತನ ವರ್ತನೆಗೆ ತೀವ್ರ ಖಂಡನೆ

ಮನೆಗೆ ನುಗ್ಗಿ ಸಂಸದರ ಬಂಧನಕ್ಕೆ ಯತ್ನ
ಕೊಪ್ಪಳ: ತುಂಗಭದ್ರಾ ಎಡದಂಡೆ ಕಾಲುವೆ ರೈತರ ಬೆಳೆಗಳಿಗೆ ನೀರು ಸ್ಥಗಿತಗೊಳಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕೊಪ್ಪಳ
ಸಂಸದ ಸಂಗಣ್ಣ ಕರಡಿ ಅವರು ಪ್ರತಿಭಟನೆಗೆ ಇಳಿಯಬಹುದೆಂಬ ಊಹೆಯಲ್ಲಿ ಪೊಲೀಸರು ಅವರನ್ನು ಅವರ ನಿವಾಸದಲ್ಲಿಯೇ
ಬಂಧಿಸಲು ಯತ್ನಿಸಿದ ಘಟನೆ ತೀವ್ರಖಂಡನೆಗೆ ಕಾರಣವಾಗಿದೆ.
ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಪ್ಪಳ ಭೇಟಿ ನಿಗದಿಯಾಗಿತ್ತು. ಈ ಸಂದರ್ಭದಲ್ಲಿ ಎಡದಂಡೆ ಕಾಲುವೆ
ಭಾಗದ ರೈತರು, ಇನ್ನೂ ಕೆಲ ಕಾಲ ಕಾಲುವೆಯಲ್ಲಿ ನೀರು ಹರಿಸುವಂತೆ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದರು. ಈ ಕುರಿತು
ಜಿಲ್ಲಾಡಳಿತ ಭವನದ ಎದುರು ಶಾಂತಿಯುತವಾಗಿ ಮನವಿ ಸಲ್ಲಿಸಲು ಉದ್ದೇಶಿಸಿದ್ದು, ಸಂಸದ ಸಂಗಣ್ಣ ಕರಡಿ ಕೂಡಾ ಇದರಲಿ ್ಲ
ಪಾಲ್ಗೊಳ್ಳಲು ನಿರ್ಧರಿಸಿದ್ದರು.
ಆದರೆ, ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟಪಡಿಸಿದ್ದರು. ರೈತರು ಪ್ರತಿಭಟನೆ
ನಡೆಸುವುದಿಲ್ಲ. ಶಾಂತಿಯುತವಾಗಿ ಕೂತಿರುತ್ತಾರೆ. ಮುಖ್ಯಮಂತ್ರಿಗಳು ಆಗಮಿಸಿದಾಗ, ಅವರಿಗೆ ಮನವಿ ಮಾತ್ರ ಸಲ್ಲಿಸಲಾಗುವುದೇ
ಹೊರತು ಯಾವುದೇ ಪಿಕೆಂಟಿಂಗ್ ಇರುವುದಿಲ್ಲ ಎಂದು ಸಂಸದರು ಸ್ಪಷ್ಟಪಡಿಸಿದಾಗ್ಯೂ ಅವರಿಗೆ ಅನುಮತಿಯನ್ನು
ನಿರಾಕರಿಸಲಾಗಿತ್ತು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಸೋಮವಾರ ಸಂಸದ ಸಂಗಣ್ಣ ಕರಡಿ ಅವರ ಹೊಸಪೇಟೆ ರಸ್ತೆಯಲ್ಲಿರುವ ನಿವಾಸಕ್ಕೆ ಆಗಮಿಸಿದ
ಡಿವೈ.ಎಸ್ಪಿ. ಎಸ್.ಎಂ. ಸಂದಿಗವಾಡ, ಒಬ್ಬರು ಎಸ್‍ಐ ಹಾಗೂ ಇನ್ನೊಬ್ಬ ಸಿಬ್ಬಂದಿ ಇದ್ದ ತಂಡ ಅನೌಪಚಾರಿಕವಾಗಿ ಮಾತನಾಡಿತು.
ನಂತರ, ಯಾವುದೇ ವಾರೆಂಟ್ ತೋರಿಸದೇ, ಏಕಾಏಕಿ, ನಮ್ಮೊಂದಿಗೆ ಬನ್ನಿ ಎಂದು ತೋಳು ಹಿಡಿದು ಹೊರಗೆ ಕರೆದೊಯ್ಯಲು
ಯತ್ನಿಸಿದರು.
ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಇದರಿಂದ ಕೆರಳಿ, ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಬಂಧನ ವಾರೆಂಟ್ ಇಲ್ಲದೇ,
ಕಾರಣಕೂಡಾ ಹೇಳದೇ, ಜನಪ್ರತಿನಿಧಿಯೊಬ್ಬರನ್ನು ಅವರ ನಿವಾಸದಲ್ಲಿ ಬಂಧಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ
ವ್ಯಕ್ತಪಡಿಸಿದರು.
ಬಂಧನ ಪ್ರಯತ್ನ ಕೈಬಿಟ್ಟ ಡಿವೈ.ಎಸ್ಪಿ. ಮತು ್ತ ತಂಡ, ಸಂಸದರು ಹೊರಗೆ ಬರುವುದನ್ನು ಕಾಯುತ್ತ ನಿವಾಸದ ಹೊರಗೆ
ಠಳಾಯಿಸತೊಡಗಿತು. ಹೆಚ್ಚುವರಿ ಸಿಬ್ಬಂದಿಯನ್ನೂ ಕರೆಯಿಸಿಕೊಂಡು, ಸಂಸದರ ನಿವಾಸದ ಸುತ್ತಮುತ್ತಲಿನ ರಸ್ತೆಗಳಲ್ಲಿ ನಿಂತರು.
ಪೊಲೀಸರು ಒತ್ತಡ ಹೇರುತ್ತಿರುವ ಕ್ರಮಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿದ ಅವರ ಅಭಿಮಾನಿಗಳು ಸಂಸದರ ಮನೆಯ ಕಡೆ
ಧಾವಿಸತೊಡಗಿದರು.
ಕೊನೆಗೆ ಸಂಸದರು ನಿಗದಿತ ಅವಧಿಯಲ್ಲಿ, ತಮ್ಮ ನಿವಾಸದಿಂದ ಕಾಲ್ನಡಿಗೆಯಲ್ಲಿ ಹೊರಬಿದ್ದು, ಪೊಲೀಸರ ಕಣ ್ತಪ್ಪಿಸಿ ರಾಷ್ಟ್ರೀಯ
ಹೆದ್ದಾರಿ ತಲುಪಿದರು. ಆಗ, ಅಲ್ಲಿ ಅವರನ್ನು ಕಾರಣ ಕೂಡಾ ಹೇಳದೇ ಬಂಧಿಸಲು ಯತ್ನಿಸಿದಾಗ, ಮತ್ತೆ ಪ್ರತಿಭಟನೆ ಎದುರಾಯಿತು.
ಕೊನೆಗೆ ಸಂಗಣ್ಣ ಕರಡಿ ಅವರನ್ನು ಜಿಲ್ಲಾಡಳಿತ ಭವನದ ಹತ್ತಿರ ಬಂಧಿಸಲಾಯಿತು.
ಜಿಲ್ಲಾ ಪೊಲೀಸರ ಈ ಕ್ರಮಕ್ಕೆ ಸಂಸದರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಶಾಂತಿಯುತ ಪ್ರತಿಭಟನೆ ನಡೆಸುವುದಕ್ಕೆ ಮುನ್ನವೇ,
ತಮ್ಮ ನಿವಾಸಕ್ಕೆ ಆಗಮಿಸಿ ಬಂಧನಕ್ಕೆ ಯತ್ನಿಸಿದ ಕ್ರಮ ಹಿಟ್ಲರ್ ಆಡಳಿತ ನೆನಪಿಸುತ್ತದೆ ಎಂದು ಟೀಕಿಸಿದ್ದಾರೆ.
ರೈತರ ಬೇಡಿಕೆಗಳನ್ನು ಬೆಂಬಲಿಸಿ, ಮುಖ್ಯಮಂತ್ರಿಗಳಿಗೆ ಮನವಿ ನೀಡುವುದು ನಮ್ಮ ಉದ್ದೇಶವಾಗಿತ್ತು. ಜನರು ತಮ್ಮ ದೂರನ್ನು
ಯಾರ ಮುಂದೆ ಹೇಳಿಕೊಳ್ಳಬೇಕು. ಜನರ ಅಹವಾಲು ಹೇಳಿಕೊಳ್ಳುವುದು ಸಮಾಜವಿರೋಧಿ ಕೆಲಸವೇ ಎಂದು ಅವರು
ಪ್ರಶ್ನಿಸಿದ್ದಾರೆ.
ಸಂಸದರ ಬಂಧನಕ್ಕೆ ಬಿಜೆಪಿ ಜಿಲ್ಲಾಮಟ್ಟದ ವಿವಿಧ ಘಟಕಗಳೂ ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಈ ಪ್ರಕರಣ ರಾಜ್ಯ ಸರ್ಕಾರದ
ಹತಾಶ ಮನೋಭಾವನೆ ಬಿಂಬಿಸುತ್ತದೆ ಎಂದು ಪಕ್ಷದ ಯುವ ಮುಖಂಡ ಅಮರೇಶ ಕರಡಿ ಹೇಳಿದ್ದು, ಸರ್ಕಾರದ ಜನವಿರೋಧಿ
ಧೋರಣೆ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.

Please follow and like us:
error

Related posts