ಮನೆಗಳ್ಳರ ಬಂಧನ – ಆಭರಣಗಳ ಜಪ್ತಿ

Koppal  ಮನೆಗಳ್ಳರ ಬಂಧನ – ಆಭರಣಗಳ ಜಪ್ತಿ ” ಖಚಿತ ಮಾಹಿತಿಯ ಮೇರೆಗೆ ಗಂಗಾವತಿ ನಗರ ಪೊಲೀಸ್ ಠಾಣೆಯ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ವೃತ್ತಿಪರವಾಗಿ ಮನೆಗಳ್ಳತನ ಮಾಡುವ 05 ಜನ ಮನೆಗಳ್ಳರನ್ನು ಬಂಧಿಸಿ 03 ಮನೆಗಳ್ಳತನಕ್ಕೆ ಸಂಬಂಧಿಸಿದ ಸುಮಾರು 5 ಲಕ್ಷ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಪಡಿಸಿಕೊಂಡಿದ್ದಾರೆ.
 ಇತ್ತೀಚಿಗೆ ಗಂಗಾವತಿ ನಗರದ ಅಮರ ಭಗತಸಿಂಗ್ ನಗರ , ಹಿರೇಜಂತಕಲ್ , ವಡ್ಡರಹಟ್ಟಿಯ ಸಮರ್ಥ ಮೋಟಾರ್ ಹಿಂಭಾಗದಲ್ಲಿ ಮನೆಗಳ್ಳತನ ಪ್ರಕರಣಗಳು ನಡೆದಿದ್ದವು.

  ಮನೆಗಳ್ಳತನ ಪತ್ತೆಗಾಗಿ ಎಸ್ . ಪಿ  ಶ್ರೀಮತಿ ಸಂಗೀತಾ ,  . ರವರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು , ಸದರಿಯವರ ಹಾಗೂ ಡಿ . ಎಸ್ . ಪಿ . ಸಾಹೇಬರು ಗಂಗಾವತಿ ರವರ ಮಾರ್ಗದರ್ಶನದಲ್ಲಿ ಸದರಿ ವಿಶೇಷ ತಂಡದ ಸದಸ್ಯರಾದ ಗಂಗಾವತಿ ನಗರ ಪೊಲೀಸ್ ಠಾಣೆಯ ಉದಯರವಿ , ಪಿ . ಐ ,ತಿಪ್ಪಣ್ಣ ನಾಟೇಕರ್ ಎ . ಎಸ್ . ಐ . ಚಿರಂಜೀವಿ , ವಿಶ್ವನಾಥ , ಮೈಲಾರಪ್ಪ , ರಾಘವೇಂದ್ರ , ಅಜೀಜಸಾಬ , ನರಸಪ್ಪ ರವರನ್ನೊಳಗೊಂಡ ತಂಡ ವೃತ್ತಿಪರವಾಗಿ ತನಿಖೆ ಕೈಗೊಂಡು ಆರೋಪಿತರಾದ 01 ) ಧನರಾಜ ತಂದೆ ಲಕ್ಷ್ಮಣರಾವ್ 19 ವರ್ಷ ಸಾ : ಅಮರ ಭಗತಸಿಂಗ್ ನಗರ , ಗಂಗಾವತಿ . 02 ) ಮಂಜುನಾಥ ( @ ವಾಂಟೆಡ್ ಮಂಜ ತಂದೆ ವಿರೇಶ 20 ವರ್ಷ , ಇಬ್ಬರು ಸಾ : ಅಮರ ಭಗತಸಿಂಗ್ ನಗರ , ಗಂಗಾವತಿ 03 ) . ಹುಲ್ಲೇಶ ತಂದೆ ದೇವೆಂದ್ರಪ್ಪ ಭಜೆಂತ್ರಿ ವಯಸ್ಸು 22 ವರ್ಷ ಸಾ : ಹಮಾಲರ ಕಾಲೋನಿ , ಗಂಗಾವತಿ , 04 ) . ರಮೇಶ @ ರಾಮ ತಂದೆ ಪುಂಡಲೀಕಪ್ಪ ಸಾ : ವಿವೇಕಾನಂದ ಕಾಲೋನಿ , ಗಂಗಾವತಿ . ಹಾಗೂ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ದಸ್ತಗಿರಿ ಮಾಡಿದ್ದು , ಸದರಿ ಆರೋಪಿತರು ತನಿಖೆಯ ಕಾಲಕ್ಕೆ 03 ಮನೆಗಳ್ಳತನ ಮಾಡಿದ ಬಗ್ಗೆ ತಿಳಿಸಿದ್ದು , ಸದರಿಯವರಿಂದ ಕಳ್ಳತನವಾದ 01 ) 170 ಗ್ರಾಂ ಬಂಗಾರದ ಆಭರಣಗಳು ( ಒಂದು ಮಾಂಗಲ್ಯ ಸರ , ಒಂದು ಬಂಗಾರದ ಸರ , ಕಿವಿಯೋಲೆ , ಬೋರಮಳ ಸರ , ಉಂಗುರ ಹಾಗೂ ಇತರೆ ) 02 ) 50 ಗ್ರಾಂ ಬೆಳ್ಳಿಯ ಆಭರಣ . ( ಕಾಲುಬೈನ ಮತ್ತು ಕುಂಕುಮ ಭರಣಿ ) – ಹೀಗೆ ಒಟ್ಟು ಅ೦ . 05 ಲಕ್ಷ ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳನ್ನು ಜಪ್ತಿ ಮಾಡಿ 03 ಮನೆಗಳ್ಳತನ ಪ್ರಕರಣಗಳನ್ನು ಭೇದಿಸಿರುತ್ತಾರೆ . ಪ್ರಕರಣವನ್ನು ಬೇಧಿಸುವಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ತನಿಖಾ ತಂಡದ ಕಾರ್ಯವನ್ನು  ಎಸ್ . ಪಿ ಯವರು ಶ್ಲಾಘಿಸಿ ವಿಶೇಷ ಬಹುಮಾನ ಘೋಷಿಸಿರುತ್ತಾರೆ .

Please follow and like us:
error