ಮನುಷ್ಯರು ಕೃತಕವಾಗಿ ಸೃಷ್ಟಿಸಲಾರದಂತಹ ವಸ್ತು ರಕ್ತ : ಲಾಯಖ್ ಅಲಿ

ಕೊಪ್ಪಳ : ಮನುಷ್ಯರು ಕೃತಕವಾಗಿ ಸೃಷ್ಟಿಸಲಾರದಂತಹ ವಸ್ತು ಎಂದರೆ ಅದು ರಕ್ತ ಮಾತ್ರ ರಕ್ತವನ್ನು ದಾನ ಮಾಡುವುದರ ಮೂಲಕ ಮನುಷ್ಯ ಮನುಷ್ಯನ ಜೀವ ಉಳಿಸಬೇಕು ಮತ್ತು ಯಾವುದೇ ಜಾತಿಭೇದವಿಲ್ಲದೆ ರಕ್ತ ದಾನ ಮಾಡಬೇಕು ಒಬ್ಬರು ರಕ್ತದಾನ ಮಾಡುವುದರ ಮೂಲಕ ಮೂರು ಜನರ ಪ್ರಾಣವನ್ನು ಉಳಿಸ ಬಹುದು ಎಂದು
ರಾಬಿತೆ ಮಿಲ್ಲತ್ ಜಿಲ್ಲಾಧ್ಯಕ್ಷ ಲಾಯಖ್ ಅಲಿ ಹೇಳಿದರು.
ಅವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹಾಗೂ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಘಟಕ ಮತ್ತು ಇನ್ನು ಅನೇಕ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆನೀಡಿ ಮಾತನಾಡುತ್ತಿದ್ದರು.
ಅವರು ಆರೋಗ್ಯವಂತ ಮನುಷ್ಯನ ದೇಹದಲ್ಲಿ ರಕ್ತ ಆರು ಲೀಟರ್ ವರೆಗೂ ರಕ್ತವಿರುತ್ತದೆ ಅದರಲ್ಲಿ ಒಂದು ಸಾರಿ ರಕ್ತದಾನ ಮಾಡಿದರೆ ಕೇವಲ ೩೫೦ಯೂನಿಟ್ ರಕ್ತ ಮಾತ್ರ ಮಾಡುತ್ತಾನೆ ಹಾಗಾಗಿ ಪ್ರತಿಯೊಬ್ಬರ ಮಾಡಬಹುದು
೧೦ ರಿಂದ ೫೫ ಬಾರಿ ರಕ್ತದಾನ ಮಾಡಿದ ಯುವಕರನ್ನು ನೋಡಿ ಆಶ್ಚರ್ಯವಾಗುತ್ತದೆ ಹಾಗೂ ಇವರು ಬೇರೆಯವರಿಗೆ ಪ್ರೇರಣೆ ಇವರನ್ನು ನೋಡಿ ಎಲ್ಲರೂ ರಕ್ತದಾನ ಮಾಡಬೇಕುಂದರು. ಹೆಚ್ಚಿನ ಬಾರಿ ರಕ್ತದಾನ ಮಾಡಿದವರ ಪೋಟೊ ಮತ್ತು ಯಾರು ಎಷ್ಟು ಬಾರಿ ರಕ್ತದಾನ ಮಾಡಿದ್ದಾರೆ ಎಂದು ಅವರ ವಿವರ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಬರೆದು ಹಾಕಬೇಕು ಅದು ನೊಡಿ ಬೇರೆಯವರಿಗೂ ಪ್ರೇರಣೆಯಾಗಬಹುದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಘಟಕ ಇನ್ನು ಆನೇಕ ಸಾಮಾಜಕ್ಕೆ ಮಾದರಿಯಾಗುವ ಕೆಲಸಗಳು ಮಾಡಿಲಿ ಎಂದು ಹೇಳಿದರು.
ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳ ಘಟಕದ ಉಪಸಭಾಪತಿಯಾದ ಡಾಕ್ಟರ್ ಚಂದ್ರಶೇಖರ್ ಕರ್ಮುಡಿ ಮಾತನಾಡಿ ಕೊಪ್ಪಳ ರೆಡ್ ಕ್ರಾಸ್ ಘಟಕ ರೋಗಿಗಳಿಗೆ ಉಚಿತವಾಗಿ ರಕ್ತದಾನ ಮಾಡುತ್ತಿದೆ ಹಾಗು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದೆ ಆರೋಗ್ಯವಂತರು ರಕ್ತದಾನ ಮಾಡಲು ಮುಂದೆ ಬರಬೇಕು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಘಟಕ ಮಾಡುತ್ತಿರುವಂತಹ ಕೆಲಸ ಪ್ರಶಾಂಶನೀಯ ಬೇರೆ ಸಂಘ ಸಂಸ್ಥೆಗಳಿ ಮಾದರಿಯಾಗಿದೆ ಮುಂದೆ ಇನ್ನು ಅನೇಕ ರಕ್ತದಾನ ಶಿಬಿರಗಳು ಏರ್ಪಡಿಸಲಿ ಎಂದು ಹೇಳಿದರು. ಡಾ. ಶ್ರೀನಿವಾಸ ಅವರು ಸಹ ರಕ್ತದಾನದ ಬಗ್ಗೆ ಮಾತನಾಡಿದರು. ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಆದಿಲ್ ಪಟೇಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೊರೊನ ಮಹಾಮಾರಿಯ ಸಮಯದಲ್ಲಿ ರಕ್ತದಾನ ಶಿಬಿರ ಏರ್ಪಡಿಸಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ ಘಟಕ ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ಈ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದೇವೆ ಮತ್ತು ರಕ್ತ ಮನುಷ್ಯನಿಗೆ ಬಹು ಅಮೂಲ್ಯವಾದದ್ದು ಎಂದು ಹೇಳಿದರು. ಚೌತಾಯಿ ವಕೀಲರು ಸಹ ರಕ್ತದಾನದ ಬಗ್ಗೆ ಮಾತನಾಡಿದರು. ಮುಖ್ಯ ಅಥಿತಿಗಳು ಹೆಚ್ಚಿನ ಬಾರಿ ರಕ್ತದಾನ ಮಾಡಿದ ದಾನಿಗಳಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಮ್ಮದ್ ಅಲಿಮುದ್ದಿನ್, ಪಾರ್ಟಿಯ ವಲಯ ಸಂಚಾಲಕ ರಾಜ ನಾಯ್ಕ, ಹೆಚ್.ಆರ್.ಎಸ್‌ನ ಕೊಪ್ಪಳ ಘಟಕದ ಅಧ್ಯಕ್ಷರು ಮೊಮ್ಮದ್ ಖಲೀಲ್ ಉಡೆವು, ಕರ್ನಾಟಕ ರಕ್ತದಾನಿಗಳ ಬಳಗದ ಸಂಸ್ಥಾಪಕ ಅಧ್ಯಕ್ಷ ಅಬ್ದುಲ್ ವಾಹಿದ್, ಪತ್ರಕರ್ತರಾದ ಸಂತೋಷ ದೇಶಪಾಡೆ, ಸೋಮರಡ್ಡಿ ಅಳವಂಡಿ, ಜಕರಿಯಾ ಖಾನ್, ರಿಯಾಜ ಅಹ್ಮದ್, ಫಾಹದ್ ಹುಸೇನ್, ರಹಮತ್ ಹುಸೇನ್, ಇನ್ನು ಅನೇಕರು ಉಪಸ್ಥಿತರಿದ್ದರು.

Please follow and like us:
error