ಮನುಷ್ಯನಿಗೆ ಶ್ರೀಮಂತಿಕೆಗಿಂತ ಸಾಮಾಜಿಕ ಕಳಕಳಿ ಅಗತ್ಯ – ಸಿ.ವಿ ಚಂದ್ರಶೇಖರ


ಕೊಪ್ಪಳ : ಸಾಮಾಜಿಕ ಜವ್ಧಾರಿಯನ್ನ ಅರಿತು ಪ್ರತಿಯೊಬ್ಬ ವ್ಯಕ್ತಿಯು ಸಮಾಜ ಸೇವೆಯಲ್ಲಿ ತೋಡಗುವುದು ಇಂದು ಅವಶ್ಯವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ ಚಂದ್ರಶೇಖರ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಅಳವಂಡಿ ಗ್ರಾಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ, ಸಿ.ಟಿ ಆಸ್ಪತ್ರೆ ಕೊಪ್ಪಳ, ಅಶ್ವಿನಿ ಕಣ್ಣಿನ ಆಸ್ಪತ್ರೆ ಹೊಸಪೇಟೆ ಇವರುಗಳು ಸಹಯೋಗದಲ್ಲಿ ದಾಸರಡ್ಡಿ ಕುಟುಬಂವನ್ನು ಅಗಲಿದ ಹಿರಿಯರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಉಚಿತ ನೇತ್ರ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣೆ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂತಹ ಮಹತ್ವದ ಕಾರ್ಯವನ್ನು ಮಾಡುವುದುರ ಮೂಲಕ ಅಳವಂಡಿ ಗ್ರಾಮದ ದಾಸರಡ್ಡಿ ಕುಟುಂಬವು ಸುರೇಶ ದಾಸರಡ್ಡಿ ಅವರ ನೇತೃತ್ವದಲ್ಲಿ ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸಿದೆ ಎಂದು ಹೇಳಿದರು.ಇಂದು ಅನೇಕ ಆಗರ್ಭ ಶ್ರೀಮಂತರು ತಮ್ಮ ಶ್ರೀಮಂತಿಕೆಯಲ್ಲಿ ಸಮಾಜಿಕ ಜವಾಬ್ಧಾರಿಯನ್ನು ಮರೆತಿರುವಾಗ ಸಾಮಾನ್ಯ ಕುಟುಂಬ ಇಂತಹ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನಿಯ ಎಂದರು.
ಈ ಬೃಹತ ಉಚಿತ ನೇತ್ರ ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ಒಟ್ಟು ೭೫೮ ರೋಗಿಗಳು ಚಿಕಿತ್ಸೆಯನ್ನು ಪಡೆದಿದ್ದು ೧೧೮ ರೋಗಿಗಳು ನೇತ್ರ ಶಸ್ತ್ರ ಚಿಕಿತ್ಸೆಗೆ ಆಯ್ಕೆಯಾಗಿದ್ದಾರೆ ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ ಬಸವರಾಜ ಹಿಟ್ನಾಳ, ತಾ.ಪಂ ಸದಸ್ಯ ಡಾ.ಶಿದ್ದಲಿಂಗಸ್ವಾಮಿ ಇನಾಮದಾರ ಮಾತನಾಡಿದರು.
ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು ದಿವ್ಯಸಾನಿಧ್ಯವನ್ನು ವಹಿಸಿದ್ದರು, ಜೆಡಿಎಸ್ ಜಿಲ್ಲಾಧ್ಯಕ್ಷ ಪ್ರದೀಪಗೌಡ ಮಾಲಿ ಪಾಟೀಲ, ತಾ.ಪಂ ಸದಸ್ಯ ಶರಣಪ್ಪ ಗೌಡ ಪಾಟೀಲ, ಮುಖಂಡರಾದ ಭರಮಪ್ಪ ನಗರದ, ಬಸವರಾಜ ಹಾರೋಗೇರಿ, ಲಿಂಗಗನಗೌಡ್ರ ಮಾಲಿ ಪಾಟೀಲ, ಯಲ್ಲಪ್ಪ ಜೀರ, ಶಂಕ್ರಗೌಡ ಹಿರೇಗೌಡ್ರು, ವೆಂಕರಡ್ಡಿ ಇಮ್ಮಡಿ, ಅಂದಪ್ಪ ಡಂಬಳ, ದಾಸರಡ್ಡಿ ಕುಟುಂಬದ ಹಿರಿಯರಾದ ಶೇಷರಡ್ಡಿ ದಾಸರಡ್ಡಿ, ಜಗನ್ನಾಥರಡ್ಡಿ ದಾಸರಡ್ಡಿ ಈ ಶಿಬಿರದ ಆಯೋಜಕರಾದ ಸುರೇಶ ದಾಸರಡ್ಡಿ ಭಾಗವಹಿಸಿದ್ದರು.
ವಿಜಯಾನಂದ ಗದ್ದಿಕೇರಿ ನಿರೂಪಿಸಿದರು.

Please follow and like us:
error