ಮನಸೂರೆಗೊಂಡ ಚಲನಚಿತ್ರ ಪ್ರದರ್ಶನ

ಕೊಪ್ಪಳ ಜ.೫: ನಗರದ ಶ್ರೀ ಗವಿಸಿದ್ಧೇಶ್ವರಜಾತ್ರಾ ನಿಮಿತ್ಯ ಶ್ರೀ ಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ದಿನಾಂಕ ೦೩, ೦೪ ಮತ್ತು ೦೫ ಜನೆವರಿ, ೨೦೧೮ರಂದು ಹಮ್ಮಿಕೊಂಡರಾಜ್ಯ ಮತ್ತುರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಚಲನಚಿತ್ರಗಳ ಪ್ರದರ್ಶನಗಳು ಜಾತ್ರೆಗೆ ಬಂದ ಭಕ್ತಾದಿಗಳ ಮನಸೂರೆಗೊಂಡಿವೆ. ಇಂದು ಬೆಳಿಗ್ಗೆ ೧೦-೦೦ ಘಂಟೆಗೆಉತ್ತರಕರ್ನಾಟಕದ ಕೊಪ್ಪಳ ಜಿಲ್ಲೆಯಗಂಗಾವತಿಯ ಸುತ್ತಮುತ್ತಚಿತ್ರೀಕರಣಗೊಂಡ ಆಸೀಫ್ ಕ್ಷತ್ರೀಯ ನಿರ್ದೇಶನದ ’ನೀರುತಂದವರು’ ಚಲನಚಿತ್ರ ಪ್ರದರ್ಶನಗೊಂಡಿತು. ಮದ್ಯಾಹ್ನ ೨-೦೦ ಗಂಟೆಗೆ ಡಿ.ಸತ್ಯಪ್ರಕಾಶ ನಿರ್ದೇಶನದರಾಜ್ಯ ಪ್ರಶಸ್ತಿ ವಿಜೇತ ಚಲನಚಿತ್ರವಾದ ’ರಾಮರಾಮರೇ’ ಪ್ರದರ್ಶನಗೊಂಡಿತು.ಚಲನಚಿತ್ರ ಪ್ರದರ್ಶನ ನಂತರಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ವೀಕ್ಷಕರೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು.ಚಲನ ಚಿತ್ರ ಪ್ರದರ್ಶನದಲ್ಲಿ ಮೂರುನೂರಕ್ಕು ಹೆಚ್ಚು ಪ್ರೇಕ್ಷಕರು ಪಾಗೊಂಡಿದ್ದರು.
ಈ ವರ್ಷದ ಗವಿಮಠದ ಜಾತ್ರೆಯ ವೈಶಷ್ಟ್ತ ಕಾರ್ಯಕ್ರಮವಾಗಿದ್ದ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದ ಚಲನಚಿತ್ರ ಪ್ರದರ್ಶನವು ಭಕ್ತರ ಮನಸ್ಸನ್ನು ಗೆದ್ದವು. ಫೋಟೊದಲ್ಲಿ ಅಮರೇಶ ನುಗುಡೋಣಿ ಮಾತನಾಡುತ್ತಿರುವುದು.

Please follow and like us:
error