ಮನಮುಟ್ಟುವ ಹಾಗೆ ಗೋನಾಳರು ಪುಸ್ತಕ ರಚಿಸಿದ್ದಾರೆ : ಡಾ.ಮಲ್ಲನಗೌಡರ

‘ಅಂದು ವಿಮೋಚನೆ ಇಂದು ವಿವೇಚನೆ’ ಪುಸ್ತಕ ಲೋಕಾರ್ಪಣೆ:

ಕೊಪ್ಪಳ,ಮೇ,೨೬: ಅಂದು ವಿಮೋಚನೆ ಇಂದು ವಿವೇಚನೆ ಎಂಬ ಪುಸ್ತಕವನ್ನು ಲೇಖಕ ಪತ್ರಕರ್ತ ಜಿ.ಎಸ್.ಗೋನಾಳ ಅವರು ಸಾಮಾನ್ಯ ಜನರ ಮನಮುಟ್ಟುವ ಹಾಗೆ ಪುಸ್ತಕವನ್ನು ರಚಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಅಭಿಪ್ರಾಯ ಪಟ್ಟರು.
ಅವರು ನಗರದ ಪದಕಿ ಟ್ಯೂಶನ್ ಹಾಲ್‌ನಲ್ಲಿ ಶ್ರೀ ವರಸಿದ್ಧಿ ವಿನಾಯಕ ಗ್ರಾಮೀಣ ಶಿಕ್ಷಣಾಭಿವೃದ್ಧಿ ಮತ್ತು ಕಲ್ಯಾಣ ಸಂಸ್ಥೆ ಸಿರಿಗನ್ನಡ ವೇದಿಕೆ, ತಾಲೂಕು ಮತ್ತು ಜಿಲ್ಲಾ ಘಟಕ ಕೊಪ್ಪಳ ವಿಶಾಲ ಪ್ರಕಾಶನ ಮಾದಿನೂರು ಇವರ ಸಂಯುಕ್ತಾಶ್ರಯದಲ್ಲಿ ಲೇಖಕ ಜಿ.ಎಸ್.ಗೋನಾಳರವರ ೯ನೇ ಕೃತಿ ಅಂದು ವಿಮೋಚನೆ ಇಂದು ವಿವೇಚನೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು. ಹಲವಾರು ರಾಜ ಮಹಾರಾಜರು ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ. ಕನ್ನಡ ನಾಡು ಹರಿದು ಹಂಚಿಹೋಗಿ ಈಗ ಅಗೈನಷ್ಟು ಉಳಿದಿದೆ. ವಿಶಾಲ ಕನ್ನಡ ನಾಡು ೧೯೭೧ ರಂದು ಕರ್ನಾಟಕವಾಯಿತು. ಇದು ಏಳು-ಬೀಳುಗಳನ್ನು ಕಂಡಿದೆ. ಈ ಪುಸ್ತಕದಲ್ಲಿ ಹೈದ್ರಾಬಾದ್ ನಿಜಾಮರ ರಾಜರ ಬಗ್ಗೆ ಹೋರಾಟಗಾರರ ಬಗ್ಗೆ, ೩೭೧ನೇ (ಜೆ) ಕಲಂ ಬಗ್ಗೆ ಎಂ.ನಂಜುಂಡಪ್ಪನವರ ವರದಿ, ವಿ.ಕೃ.ಗೋಕಾಕ ವರದಿ ಹಾಗೂ ಕೊಪ್ಪಳದ ಜನರ ಹೋರಾಟಗಾರರ ಬಗ್ಗೆ ದಾಖಲಿಸಿರುವುದು ಶ್ಲಾಘನೀಯವಾಗಿದೆ ಎಂದು ತಿಳಿಸಿದ ಅವರು, ಕೊಪ್ಪಳ ಜಿಲ್ಲೆಯ ಕೋಟೆಗಳ ಬಗ್ಗೆ ಶಾಸನಗಳ ಬಗ್ಗೆ ದೇವಾಲಯಗಳ ಬಗ್ಗೆ, ಕೃಷಿಕರ ಬಗ್ಗೆ ಕಾರ್ಖಾನೆಗಳ ಬಗ್ಗೆ, ಐತಿಹಾಸಿಕ ಸ್ಥಳಗಳ ಬಗ್ಗೆ ಇನ್ನೂ ದಾಖಲಿಸಬೇಕಾಗಿದೆ ಎಂದು ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ ಅವರು ವಿವರಿಸಿದರು.
ನಂತರ ಕಾರ್ಯಕ್ರಮದಲ್ಲಿ ಪತ್ರಕರ್ತ ಸಂತೋಷ ದೇಶಪಾಂಡೆ, ಹೆಚ್.ಎಸ್.ಹರೀಶ್, ಎನ್.ಎಂ.ದೊಡ್ಡಮನಿ ಅವರು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಸಾಧಿಕ್ ಅಲಿ ಅವರು ವಹಿಸಿ ಮಾತನಾಡಿ, ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ಸದಾ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿ ಅದು ಜಿ.ಎಸ್.ಗೋನಾಳ ಅವರು ಮಾತ್ರ. ಈ ಪುಸ್ತಕದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಕವಿ ಶರಣೇಗೌಡ ಯರದೊಡ್ಡಿಯವರ ೯ನೇ ಕೃತಿ ‘ಪ್ರೀತಿಯ ನದಿಯಂತೆ’, ಡಾ.ಭಾಗ್ಯಜ್ಯೋತಿ ಅವರು ಬಿಡುಗಡೆಗೊಳಿಸಿ ಪ್ರೀತಿ ಮತ್ತು ನದಿಯ ಬಗ್ಗೆ ಮಾತನಾಡಿ, ಮಾನವನ ಜೀವನವು ಸಾರ್ಥಕಗೊಳಿಸುವ ಜೀವನದಿ ಮತ್ತು ಪ್ರೀತಿಯ ಬಗ್ಗೆ ವಿವರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ವಿಜಯಕುಮಾರ ಪದಕಿ, ಅನ್ನಪೂರ್ಣಮ್ಮ, ಮಹೇಶ ಮನ್ನಾಪೂರ, ಪಾರ್ವತಿದೇವಿ ಹೊಂಬಳ, ಶ್ರೀನಿವಾಸ ಚಿತ್ರಗಾರ, ಉಮೇಶ ಪೂಜಾರ, ಬದರಿ ಪುರೋಹಿತ್, ಪ್ರಕಾಶ ಪಠವಾರಿ ಅನೇಕರು ಪಾಲ್ಗೊಂಡಿದ್ದರು. ಸ್ವಾಗತ ಮತ್ತು ಪ್ರಾಸ್ತಾವಿಕವಾಗಿ ಪತ್ರಕರ್ತ ಜಿ.ಎಸ್.ಗೋನಾಳ ಅವರು ಮಾತನಾಡಿದರು. ಗವಿಸಿದ್ದಪ್ಪ ಬಾರಕೇರ ಅವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕಲ್ಲಪ್ಪ ಕವಳಕೇರಿ ವಂದಿಸಿದರು. ಇದೇ ಸಂದರ್ಭದಲ್ಲಿ ಅನ್ನಪೂರ್ಣಮ್ಮ, ಮಹೇಶ ಮನ್ನಾಪೂರ ದಂಪತಿಗಳಿಂದ ಜಿ.ಎಸ್.ಗೋನಾಳ ಅವರಿಗೆ ಸನ್ಮಾನಿಸಲಾಯಿತು.

Please follow and like us:
error