ಮದ್ಯದಂಗಡಿಗಳನ್ನು ಬಂದ ಮಾಡಲು ಮನವಿ

ಕೊಪ್ಪಳ : ಇದೇ ಮೇ ೧೯ ರಿಂದ ಮೇ ೨೩ ರವರಗೆ ಶ್ರೀ ಹುಲಿಗೆಮ್ಮ ದೇವಿ ಜಾತ್ರೆಯ ನೆರವೇರುವುದರಿಂದ ಮುನಿರಾಬಾದ್, ಹುಲಿಗಿಗೆ ವ್ಯಾಪ್ತಿಯಲ್ಲಿ ಬರುವ ಮದ್ಯ ಅಂಗಡಿಯನ್ನು ೫ ದಿನಗಳ ಮಟ್ಟಿಗೆ ಮಂದ್ ಮಾಡಬೇಕುಂದು ಗ್ರಾಮ ಪಂಚಾಯತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆಯೂ ವಿಜೃಂಭಣೆಯಿಂದ ನೆರವೇರುವುದು ಮತ್ತು ನಾನಾ ಕಾರ್ಯಕ್ರಮಗಳು ನಡೆಯುತ್ತವೆ ಹಾಗೂ ಜಾತ್ರೆಗೆ ನಾನಾ ರಾಜ್ಯಗಳಿಂದ ಲಕ್ಷಾಂತರ ಜನ ಭಕ್ತಾಧಿಗಳು ಆಗಮಿಸುತ್ತಿದ್ದು ಸದರಿಯ ದಿನದಂದು ಅಹಿತಕರ ಘಟನೆಗಳು ನಡೆಯಬಾರದು ಆದ್ದರಿಂದ ಮುಂಜಾಗ್ರತವಾಗಿ ರಸ್ತೆಯ ಪಕ್ಕದಲ್ಲಿ ಇರುವ ಮಧ್ಯದ ಅಂಗಡಿಗಳುನ್ನು ೫ ದಿನಗಳ ಮಟ್ಟಿಗೆ ಬಂದಮಾಡಿಸುವಂತೆ ಗ್ರಾಮ ಪಂಚಾಯತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು

Leave a Reply