ಮದುವೆ ವೇದಿಕೆಯಲ್ಲಿ ಸಿಎಎ,ಎನ್ ಆರ್ ಸಿ ವಿರುದ್ದ ಪ್ರತಿಭಟನೆ, ಜಾಗೃತಿ

ಕೊಪ್ಪಳ :  ಕೊಪ್ಪಳದಲ್ಲಿ ಮದುವೆ ವೇದಿಕೆಯಲ್ಲಿ ಮದುಮಗನಿಂದ ‘CAA, NRC’ ವಿರುದ್ಧ ಪ್ರತಿಭಟನೆ ಹಾಗೂ ಜಾಗೃತಿ ಮೂಡಿಸಿದ  ಘಟನೆ ಜರುಗಿದೆ.  ಕೊಪ್ಪಳದ ಶಾದಿಮಹಲ್ ನಲ್ಲಿ ಮುಹಮ್ಮದ್ ಇಸ್ಮಾಯಿಲ್ ಎಂಬುವವರ ಮದುವೆ ಸಮಾರಂಭದಲ್ಲಿ  ಸ್ನೇಹಿತರು ಪೌರತ್ವ ತಿದ್ದುಪಡಿ ಕಾಯಿದೆಯವಿರುದ್ಧ ಭಿತ್ತಿಪತ್ರಗಳನ್ನು ಹಿಡಿದು ವಿರೋಧ ಪ್ರತಿಭಟನೆ ನಡೆಸಿದರು.

ಮದುಮಗ ಇಸ್ಮಾಯಿಲ್ ಮತ್ತು ಆತನ ತಂದೆ ರಿಝ್ವಾನ್ ಸಾಹೇಬ್ ಭಾಗವಹಿಸಿದ್ದರು. ಅಲ್ದೇ ಯಾವುದೇ ಸಮಾರಂಭ ಅಥವಾ ಕಾರ್ಯಕ್ರಮದಲ್ಲಿ,  ಮಾನವ ವಿರೋಧಿ, ಸಂವಿಧಾನ ವಿರೋಧಿ ಕಾಯಿದೆ ಸಿಎಎ ವಿರುದ್ಧ ಜಾಗೃತಿ ಮೂಡಿಸಬೇಕು ಎಂದು ಹೇಳಿದ್ದಾರೆ . ಪ್ರತಿಭಟನೆಯಲ್ಲಿ ಝಕ್ರಿಯಾ ಖಾನ್, ಗೌಸ್ ಪಟೇಲ್, ಸದ್ದಾಮ್ ಹುಸೇನ್, ವಾಸೀಮ್ ಭಾಗವಹಿಸಿದ್ದರು.

Please follow and like us:
error