fbpx

ಮದುವೆಯಾಗಲೊಪ್ಪದ ಪ್ರಿಯತಮೆಗೆ ಚಾಕುವಿನಿಂದ ಇರಿದು,ಬೆಂಕಿ ಹಚ್ಚಿದ ಪ್ರಿಯಕರ !

love_death love_story_crimeಅವರಿಬ್ಬರೂ ಕಳೆದ ಐದಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇನ್ನೂ ಅವಳಿಗೆ ಸರ್ಕಾರಿ ನೌಕರಿ ಸಿಕ್ಕ ಮೇಲೆ ಮದುವೆಯಾಗೋ ಯೋಚನೆಯಲ್ಲಿ ಕೂಡಾ ಇದ್ದರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಆಕೆಗೆ ಸರ್ಕಾರಿ ನೌಕರಿ ಕೂಡಾ ಸಿಕ್ಕಿತ್ತು. ಆದರೆ ಭಗ್ನ ಪ್ರೇಮಿ ಮಾತ್ರ ನಿರುದ್ಯೋಗಿಯಾಗಿದ್ದ. ಇದರಿಂದ ಪ್ರಿಯಕರನನ್ನು ದೂರ ಮಾಡುತ್ತಾ ಬೇರೋಬ್ಬನೋಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೋಂಡಳು. ಇದರಿಂದ ಮನನೋಂದ ಪ್ರೀಯಕರ ತನ್ನ ಪ್ರೇಯಸಿಯ ತಾಯಿ ಹಾಗೂ ಪ್ರೇಯಸಿಗೆ ಪೆಟ್ರೋಲ್ ಸುರಿದು ಕೋಲೆ ಮಾಡಲು ಯತ್ನ ಮಾಡಿದ್ದಾನೆ.  ಗಂಗಾವತಿ ತಾಲೂಕಿನ ಮರ್ಲಾನಹಳ್ಳಿ ಗ್ರಾಮದ ಅಮರೇಗೌಡ ಹಾಗೂ ಯಲಬುರ್ಗಾ ತಾಲೂಕಿನ ಚೌಡಾಪುರ ಗ್ರಾಮದ ಶೈನಜಾ ಕಳೆದ ಐದಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇನ್ನು ಅಬ್ಬೇಪಾರಿಯಾಗಿದ್ದ ಅಮರೇಗೌಡ ಶಹನಾಜ್ಳಿಗೆ ಸರ್ಕಾರಿ ನೌಕರಿ ಸಿಕ್ಕ ಮೇಲೆ ಇಬ್ಬರೂ ಮದುವೆಯಾಗುವ ಯೋಚನೆಯಲ್ಲಿ ಇದ್ದರು.

ಆದರೆ ಕಳೆದ ೨ ವರ್ಷಗಳ ಹಿಂದೆ ಶೈನಜಾಳಿಗೆ ಕುಷ್ಟಗಿ ತಾಲೂಕಿನ ಮುದೇನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕಿಯಾಗಿ ಕೆಲಸ ಕೂಡಾ ದೋರೆಯಿತು. ಸರ್ಕಾರಿ ನೌಕರಿ ಸಿಕ್ಕ ಬಳಿಕ ಶೈನಜಾ ಅಮರೇಗೌಡನನ್ನು ದೂರ ಮಾಡಲು ಪ್ರಯತ್ನ ಕೂಡಾ ಆರಂಭಿಸಿದಳು ಅಷ್ಠ ಅಲ್ಲದೇ ಇತ್ತೀಚೆಗೆ ಅವಳಿಗೆ ನಿಶ್ಚಿತಾರ್ಥ ಕೂಡಾ ಆಗಿತ್ತು. ಇದರಿಂದ ರೋಚ್ಚಿಗೆದ್ದ ಅಮರೇಗೌಡ ಇಂದು ಶೈನಜಾ ಹಾಗೂ ಆತಳ ತಾಲಿ ಕಮಲಾಬಿಯನ್ನು ಪೆಟ್ರೋಲು ಸುರಿದು ಬೆಂಕಿ ಹಚ್ಚಿದ್ದಾನೆ. ಇಂದು ಕುಷ್ಟಗಿಯಲ್ಲಿ ಕಿವುಡತನ ನಿವಾರಣೆಯ ಕುರಿತು ತರಬೇತಿಯನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಶೈನಜಾ ಹಾಗೂ ಆಕೆಯ ತಾಯಿ ಕಮಲಾಬಿ ಕುಷ್ಟಗಿಗೆ ಹೋಗಲು ಮುದೇನೂರು ಬಸ್ ನಿಲ್ದಾಣದಲ್ಲಿ ಕಾಯುತ್ತ ನಿಂತಿದ್ದರು. ಈ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ಅಮರೇಗೌಡ ಕುಷ್ಟಗಿಗೆ ಬಿಡೋದಾಗಿ ಹೇಳಿ ಬೈಕ್ ನಲ್ಲಿ ಹತ್ತಿಸಿಕೋಂಡಿದ್ದಾನೆ. ಆವಾಗ ತಾಯಿ ಹಾಗೂ ಮಗಳನ್ನು ಬೈಕನಲ್ಲಿ ಕರೆದುಕೋಂಡು ಹೋಗಿ ಕುಷ್ಟಗಿ ಬಳಿ ಬೈಕ್ ನಿಲ್ಲಿಸಿ ಚಾಕುವಿನಿಂದ ಶೈನಜಾಳಿಗೆ ಇರಿದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನ ಪಟ್ಟಿದ್ದಾನೆ. ಈ ಸಂದರ್ಭದಲ್ಲಿ ಬಿಡಿಸಲು ಬಂದ ತಾಯಿಯ ಮೇಲೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ. ಸದ್ಯ ಗಾಯಗೋಂಡ ಶೈನಜಾ ಹಾಗೂ ಕಮಲಾಬಿಯನ್ನು ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ಸಾಗಿಸಿದ್ದಾರೆ. ಶೈನಜಾಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ.

ಇನ್ನು ಪರಾರಿಯಾಗಿದ್ದ ಅಮರೇಗೌಡ ಕೂಡಾ ಗಂಗಾವತಿ ತಾಲೂಕಿನ ಹುಲಿಹಾಳ ಗ್ರಾಮದ ಬಳಿ ವಿಷ ಸೇವಿಸಿ ಆತ್ಮಹತ್ತೆಗೆ ಯತ್ನಿಸಿದ್ದಾನೆ. ಸದ್ಯ ಅಮರೇಗೌಡನನ್ನು ಗಂಗಾವತಿಯ ಶ್ರೀರಾಮ ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದ ಪ್ರಿತಿಸುತ್ತಿದ್ದ ಪ್ರೇಮಿಗಳು ಶೈನಜಾ ಇತ್ತ ಆಸ್ಪತ್ರೆ ಸೇರಿದರೆ. ಇನ್ನೋಂದೆಡೆ ಅಮರೇಗೌಡ ಕೂಡಾ ಸಾವು ಬದುಕಿನ ಮದ್ಯೆ ಹೋರಾಡುತ್ತಿದ್ದಾನೆ. ಇಬ್ಬರು ಪ್ರೇಮಿಗಳ ನಡುವೆ ಈಗ ಶಿಕ್ಷೆ ಅನುಭವಿಸುತ್ತಿರುವದು ಮಾತ್ರ ಶೈನಜಾಳ ತಾಯಿ ಕಮಲಾಬಿ. ಪ್ರೀತಿಸಿ ಮದುವೆಯಾಗಿ ಸಂತಸದಿಂದ ಬದುಕ ಬೇಕಾದ ಪ್ರೇಮಿಗಳು ಈಗ ಆಸ್ಪತ್ರೆ ಸೇರಿರುವದು ವಿಪರ್ಯಾಸವೇ ಸರಿ.

ಚಿಕಿತ್ಸೆ ಫಲಕಾರಿಯಾಗದೇ ರಾತ್ರಿಯ ಹೊತ್ತಿಗೆ ಶೈನಾಜ್ ಸಾವನ್ನಪ್ಪಿದ್ದಾಳೆ

Please follow and like us:
error

Leave a Reply

error: Content is protected !!