fbpx

ಮತ್ತೇ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಮಡಿಲಿಗೆ – ಶಾಸಕ ಕೆ. ರಾಘವೇಂದ್ರ ಹಿಟ್ನಾಳ


ಕೊಪ್ಪಳ:೦೬, ನಗರದ ೨೫ನೇ ವಾರ್ಡಿನಲ್ಲಿ ಸರ್ಕಾರದ ಸಾಧನೆಯ ಅಭಿಯಾನವಾದ ಮನೆ-ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಾಗವಹಿಸಿ ಬಳಿಕ ಮಾತನಾಡಿದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು, ಸಮಾಜದ ಎಲ್ಲಾ ವರ್ಗದ ಜನರ ಆಶೋತ್ತರಗಳ ಜೊತೆಗೆ ರಾಜ್ಯದ ರೈತರ ಬಡವರ, ಶೋಷಿತವರ್ಗಗಳ ಜೀರ್ಣೊದ್ದಾರಕ್ಕೆ ಅನೇಕ ಜನಪರ ಯೋಜನೆಗಳನ್ನು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದಾರೆ. ಜನರು ರಾಜ್ಯದ ಅಭಿವೃದ್ಧಿಯನ್ನು ಗಮನಿಸಿ ಮುಂಬರುವ ೨೦೧೮ ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭೂತ ಪೂರ್ವ ಬೆಂಬಲ ವ್ಯಕ್ತ ಪಡಿಸಲಿದ್ದು ಈಗಾಗಲೇ ಎಲ್ಲಾ ಮಾಧ್ಯಮಗಳ ಮುಖಾಂತರ ಸಮೀಕ್ಷೆಯಲ್ಲಿ ರಾಜ್ಯದ ಜನತೆಯ ಒಲವು ಕಾಂಗ್ರೆಸ ಪಕ್ಷಕ್ಕೆ ಇರುವುದು ಜಗಜ್ಜಾಹೀರವಾಗಿದೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಸಹಿಸದ ರಾಜ್ಯದ ಹಾಗೋ ಕ್ಷೇತ್ರದ ಬಿಜೆಪಿ ನಾಯಕರು ಹತಾಶರಾಗಿ ಸಮಾಜದಲ್ಲಿ ಆತಂಕ ಸಷ್ಠಿಸುವ ಪ್ರಯತ್ನಕ್ಕೆ ಮುಖ್ಯ ಮಂತ್ರಿಗಳು ಬಗ್ಗು ಬಡಿದಿರುವುದು ರಾಜ್ಯದ ಜನತೆ ಪ್ರತಿನಿತ್ಯ ವೀಕ್ಷಿಸುತ್ತಿದ್ದು ರಾಜ್ಯದ ಶಾಂತಿ ಸುವ್ಯವಸ್ಥೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಮತ್ತೊಮ್ಮೆ ಕಾಂಗ್ರೆಸ್ ಬೆಂಬಲಿಸಲಿದ್ದಾರೆಂದು ಹೇಳಿ ಬಿಜೆಪಿ ನಾಯಕರ ವಿರುದ್ದ ಹರಿಹಾಯ್ದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಭೂಮರಡ್ಡಿ, ನಗರ ಘಟಕದ ಅಧ್ಯಕ್ಷ ಕಾಟನ್ ಪಾಷಾ, ಮುಖಂಡರುಗಳಾದ ಶಕುಂತಲಾ ಹುಡೇಜಾಲಿ, ಬಾಬಾ ಖಾನ್, ಮಹಾದೇವಮ್ಮ ಮಡಿವಾಳ, ಧರ್ಮರಾಜ ಕಲಾಲ್, ಮುದ್ದೀ ಫಕ್ಕಿರೇಶ, ಹಾರೂನ್ ಖಾನ್, ಜುಬೇರ್ ಪಾಷಾ, ಹಾಜಿ ಹುಸೇನಿ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.

Please follow and like us:
error
error: Content is protected !!