ಮತ್ತೆ ಗುಡುಗಿದ ಶಾಸಕ ಇಕ್ಬಾಲ್ ಅನ್ಸಾರಿ

ಕೊಪ್ಪಳದ ಗಂಗಾವತಿ ಶಾಸಕ ಇಕ್ಬಾಲ್ ಅನ್ಸಾರಿ ಮತ್ತೆ ಗುಡುಗಿದ್ದಾರೆ. ಗಂಗಾವತಿಯಲ್ಲಿ ಸ್ಥಳೀಯ ಬಿಜೆಪಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಇವರೆಲ್ಲಾ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ತೀವ್ರ ವಾಗ್ದಾಳಿ ನಡೆಸಿದ ಶಾಸಕ ಅನ್ಸಾರಿ ಅವರು, ನನಗೆ ಯಾರು ಯಾವ ಭಾಷೆಯಲ್ಲಿ ಬೈದಿದ್ದಾರೆ ಅದೇ ಭಾಷೆಯಲ್ಲಿ ಅವರಿಗೆ ಉತ್ತರಿಸಿದ್ದೇನೆ. ಶಾಸಕರ ದುರ್ವರ್ತನೆ ಎಂಬ ಭಿತ್ತಿಪತ್ರ ಹಾಕಿ ನಿನ್ನೆ ಗಂಗಾವತಿ ಬಂದ್ ಮಾಡಿದ್ದಾರೆ. ಬಂದ್ ಗೆ ಬೇರೆ ಬೇರೆ ಭಾಗಗಳಿಂದ ಜನರನ್ನು ಕರೆ ತಂದಿದ್ದಾರೆ.

ಬಳ್ಳಾರಿಯಿಂದ 126, ಕೊಪ್ಪಳದಿಂದ 10, ಕುಷ್ಟಗಿಯಿಂದ 11 ಗಾಡಿಗಳ ಮೂಲಕ ಬೇರೆ ಬೇರೆ ಭಾಗಗಳಿಂದ ವಾಹನದ ಮೂಲಕ ಜನರನ್ನು ಕರೆ ತಂದಿದ್ದಾರೆ. ನಿನ್ನೆ ಗಂಗಾವತಿ ಬಂದ್ ಕರೆಕೊಟ್ಟವರು ಕೋಮುವಾದಿ ಮುಖಂಡರು. ಯಾವತ್ತಾದರೂ ಅನ್ಸಾರಿ ಜನರ ಜೊತೆಗೆ ದುರ್ವರ್ತನೆ ಮಾಡಿದ್ದು ತೋರಿಸಿಕೊಟ್ಟರೆ ನಾನು ರಾಜಕೀಯ ನಿವೃತಿ ಪಡೆಯುತ್ತೆನೆ ಎಂದು ಸವಾಲು ಹಾಕಿದರು. ಇನ್ನು ಎಚ್.ಆರ್. ಶ್ರೀನಾಥ್ ಗೂಂಡಾಗಿರಿಯಿಂದ ಗಂಗಾವತಿ ನಲುಗಿ ಹೋಗಿತ್ತು. ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮೊದಲು ಅವರು ನನ್ನನ್ನು ಬೈದದ್ದು. ಪರಣ್ಣ ಮುನವಳ್ಳಿ, ಶ್ರೀನಾಥ್ ಇವೆಲ್ಲರೂ ಕೆಲಸ ಮಾಡದೇ ಮಲಗಿರುವಂತವರು. ನಾನು ನಿಮ್ಮಂಥ ಗುಂಡಾಗಳಿಗೆ ಬಯ್ದು ನನ್ನ ಬಾಯಿಯನ್ನು ಗಲಿಜ್ ಮಾಡಿಕೊಳ್ಳುವದಿಲ್ಲ. ಶ್ರೀನಾಥ್‍ಗೆ ಧೈರ್ಯವಿಲ್ಲ. ಶ್ರೀನಾಥ್‍ನಂತಹ ಭ್ರಷ್ಟಾಚಾರಿ, ಮರ್ಡರ್ ಮಾಡಿರುವರು ಇಡೀ ವಿಶ್ವದಲ್ಲಿ ಯಾರೂ ಇಲ್ಲ ಎಂದು ದೂರಿದರು. ಗಂಗಾವತಿಯಲ್ಲಿ ನಾಗರಿಕ ಸಮಿತಿ ಅನ್ನು ರಚನೆ ಮಾಡಿದ್ದು ಶ್ರೀನಾಥ್. ಶಿವರಾಮಗೌಡ, ಸಿಂಗನಾಳ ವಿರುಪಾಕ್ಷಪ್ಪ, ಶ್ರೀನಾಥ್, ಪರಣ್ಣ ಮುನವಳ್ಳಿ ಇವರೆಲ್ಲರೂ ಕೋಮವಾದಿಗಳು. ಇವರೆಲ್ಲೂ ನಿನ್ನೆ ಬಂದ್‍ಗೆ ಸಪೋರ್ಟ ಮಾಡುವಂತೆ ವ್ಯಾಪಾರಸ್ಥರ ಮೇಲೆ ಒತ್ತಡ ಹಾಕಿದ್ದಾರೆ. ನಿನ್ನೆ ನಡೆದ ಘಟನೆ ನೊಡಿದರೆ ಆ ವೇದಿಕೆ ಮಾಡಿದ್ದು ಇಕ್ಬಾಲ್ ಅನ್ಸಾರಿಗೆ ಬೈಯ್ಯಲು ಎಂಬುದು ಸ್ಪಷ್ಟವಾಗಿದೆ. ಚುನಾವಣೆ ಇರುವ ಹಿನ್ನಲೆಯಲ್ಲಿ ಜನರಿಗೆ ದಾರಿ ತಪ್ಪಸಲು ಹೀಗೆ ಮಾಡುತ್ತಿದ್ದಾರೆ. ನಾಗರಿಕ ಸಮಿತಿ ಒಂದು ಆರ್‍ಎಸ್‍ಎಸ್ ಹಾಗೂ ಶ್ರೀನಾಥ್ ಬೆಂಬಲಿಗರದ್ದು. ನಾನು ಶ್ರೀನಾಥ್ ಗೆ ಬಿಟ್ಟು ಬೇರೆ ಯಾರಿಗೂ ಏಕೆ ವಚನ ಪದ ಪ್ರಯೋಗ ಮಾಡಿಲ್ಲ. ಶ್ರೀನಾಥ್ ನಿಮ್ಮ ಮನೆಯ ನರ ನಾಡಿಗಳು ನನಗೆ ಗೊತ್ತು ಎಂದು ಶಾಸಕ ಅನ್ಸಾರಿ ಇದೇ ಸಂದರ್ಭದಲ್ಲಿ ಗುಡುಗಿದರು. ಆರ್‍ಎಸ್‍ಎಸ್ ಅಜೆಂಡಾ ಇರುವವರು ಮುಸ್ಲಿಂ ವಿರೋಧಿಗಳು. ಪರಣ್ಣ, ಶಿವರಾಮಗೌಡ, ವಿರುಪಾಕ್ಷಪ್ಪ ಅಧಿಕಾರಕ್ಕಾಗಿ ಹಪ ಹಪಿಸುತ್ತಿದ್ದಾರೆ. ಶ್ರೀನಾಥ್ ನಿಂದ ಹಿಡಿದು ಹಲವು ಮುಖಂಡರು ಬೆಂಕಿ ಹಚ್ಚುವ ಕೆಲಸ ಮಾಡುತ್ತಲೇ ಬಂದಿದ್ದು ಅದಕ್ಕೆ ನಾವು ನೀರು ಹಾಕಿ ಆರಿಸುತ್ತೇವೆ. ಅನ್ಸಾರಿ ಕಾಂಗ್ರೆಸ್ ಸೇರುತ್ತಾನೆ ಎಂಬ ಹಿನ್ನಲೆಯಲ್ಲಿ ಈ ರೀತಿ ಹೋರಾಟಗಳು ಆರಂಭವಾಗಿದೆ. ಇನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಿಂಗನಾಳ ವಿರುಪಾಕ್ಷಪ್ಪ ಬಚ್ಚಾ ಆಗಿದ್ದು ನಿಮ್ಮ ಬಡ್ಡಿ ವ್ಯವಹಾರ ಬಟಾಬಯಲು ಮಾಡಿದರೆ ಅವರ ಕಥೆ ಮುಗಿದೇ ಹೋಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಬ್ಬ ಶಾಸಕನಿಗೆ ಚಂಡಾಡುತ್ತೇನೆ ಎಂದು ಸಿಂಗನಾಳ ವಿರುಪಾಕ್ಷಪ್ಪ ಹೇಳಿದ್ದಾರೆ. ಮೊದಲು ನೀವು ಚೆಂಡಾಡಿ. ಆಮೇಲೆ ನಾನು ಏನು ಎಂದು ತೋರಿಸುತ್ತೇನೆ ಎಂದು ಸವಾಲು ಹಾಕಿದರು. ಧಮ್ ಇದ್ರೆ ನಿವೆಲ್ಲರೂ ನನ್ನ ವಿರುದ್ಧ ಚುನಾಣೆಗೆ ನಿಂತು ಗೆದ್ದು ತೋರಿಸಿ ಎಂದು ಸವಾಲು ಹಾಕಿದರು. ಶಿವರಾಮಗೌಡಗೆ ಬಿಜೆಪಿಯಿಂದ ಟಿಕೆಟ್ ಸಿಕ್ಕರೆ ಪಂಚಮಸಾಲಿ ಮುಖಂಡರು ಮತ ಅವರಿಗೆ ಹಾಕಿ.
ಅವರಿಗೆ ಬಿಜೆಪಿ ಟಿಕೆಟ್ ಸಿಗದಿದ್ದರೆ ನನಗೆ ಮತ ಹಾಕಿ ಎಂದು ಪಂಚಮಸಾಲಿ ಕಾರ್ಯಕ್ರಮದಲ್ಲಿ ಹೇಳಿದ್ದೇನೆ. ಇಷ್ಟು ಧೈರ್ಯ ಯಾವ ಶಾಸಕನಿಗೆ ಇದೆ ಎಂದು ಪ್ರಶ್ನಿಸಿದರು. ಇನ್ನು ಸ್ಥಳೀಯ ಬಿಜೆಪಿ ಮುಖಂಡ ಸೈಯದ್ ಅಲಿ ಬಳಿ ಬರೀ ಬಿಳಿ ಹಾಳೆಗಳಿವೆ. ನನ್ನ ಮನೆಗೆ ಸಾಕಷ್ಟು ಜನ ಹೆಣ್ಣು ಮಕ್ಕಳು ರಾತ್ರಿ ಹೊತ್ತಿನಲ್ಲಿ ಬರುತ್ತಾರೆ. ನಾನು ಶಾಸಕ ನನ್ನ ಜೊತೆ ಸಾಕಷ್ಟು ಜನರಿರುತ್ತಾರೆ. ಸೈಯದ್ ಅಲಿ ಒಬ್ಬ ನಕ್ಸಲೈಟ್. ಆತನ ಮೇಲೆ ಕೇಸು ಹಾಕಿಸುತ್ತೇನೆ. ಮಹಿಳೆಯರನ್ನು ಮುಂದಿಟ್ಟುಕೊಂಡು ವೇದಿಕೆಯ ಮೇಲೆ ನನ್ನ ವಿರುದ್ಧ ಮಾತನಾಡಿಸಿದ್ದೀಯಾ ಎಂದು ಶಾಸಕ ಇಕ್ಬಾಲ್ ಅನ್ಸಾರಿ ಇದೇ ಸಂದರ್ಭದಲ್ಲಿ ಗುಡುಗಿದರು.

Please follow and like us:
error